ಬೆಂಗಳೂರು: ಕೇಂದ್ರದಿಂದ ಕೋವಿಡ್ ಲಸಿಕೆ ಪಡೆದು, ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ಹೆಲ್ತ್ ವರ್ಕರ್ಸ್ಗೆ ಲಸಿಕೆ ನೀಡುವಲ್ಲಿ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದೇವೆ. ಈ ವಿಚಾರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.
ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನದ ಸಿದ್ಧತೆ ಹಾಗೂ ತಾಲೀಮು ವೀಕ್ಷಿಸಿ, ತಯಾರಿ ಮತ್ತು ಮಾರ್ಗಸೂಚಿಗಳ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೋವಿಡ್ ವಿಚಾರವಾಗಿ ಮಾಧ್ಯಮದವರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಗರದಲ್ಲಿ ಪ್ರತಿದಿನ ಸರಿ ಸುಮಾರು 6 ಸಾವಿರ ಕೇಸ್ಗಳು ಈ ಮೊದಲು ಬರುತ್ತಿದ್ದವು. 55 ಸಾವಿರ ಕೇಸ್ ಪರೀಕ್ಷೆ ಮಾಡುತ್ತಿದ್ದೆವು. ಈಗಲೂ ಸುಮಾರು 35 ಸಾವಿರ ಜನರ ಪರೀಕ್ಷೆ ಮಾಡುತ್ತಿದ್ದೇವೆ. ಸಾವಿನ ಸಂಖ್ಯೆ ಸೊನ್ನೆ ಆಗಿದೆ, ಇದು ಉತ್ತಮ ಬೆಳವಣಿಗೆ. ಯಾವುದೇ ಕಾರಣಕ್ಕೂ ಟೆಸ್ಟ್ ಕಡಿಮೆ ಮಾಡಿಲ್ಲ ಎಂದು ಮಂಜುನಾಥ್ ಪ್ರಸಾದ್ ಸ್ಪಷ್ಟನೆ ನೀಡಿದರು.
ಓದಿ:ಗಣರಾಜ್ಯೋತ್ಸವ ಸಿದ್ಧತೆ, ಆಚರಣೆ ಕುರಿತು ಬಿಬಿಎಂಪಿ, ಪೊಲೀಸ್ ಆಯುಕ್ತರಿಂದ ಮಾಹಿತಿ
ಸದ್ಯಕ್ಕೆ ಯಾರಿಗಂದ್ರೆ ಅವ್ರಿಗೆ ಕೊಡಲು ಆಗಲ್ಲ, ಹೆಲ್ತ್ ವರ್ಕರ್ಸ್ಗೆ ಲಸಿಕೆ ಕೊಡಲು ಮಾತ್ರ ಅವಕಾಶ ಇದ್ದು, ಇಂದು ಭಾನುವಾರ ಕೂಡ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಫ್ರಂಟ್ ಲೈನ್ ವರ್ಕರ್ಸ್ ಉಳಿದವರ ಲಿಸ್ಟ್ ಸಿದ್ಧತೆ ನಡೆಯುತ್ತಿದೆ. ಬಿಬಿಎಂಪಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಪಟ್ಟಿ ಪೂರ್ತಿಯಾಗಿ ತಯಾರಾಗುತ್ತಿದೆ. 20 ಸಾವಿರ ಸಿಬ್ಬಂದಿಗೆ ಲಸಿಕೆ ಈಗಾಗಲೇ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಿಂದಲೇ 17 ಸಾವಿರ ಲಿಸ್ಟ್ ತಯಾರಾಗಿದೆ. ಕಂದಾಯ ಇಲಾಖೆಯಲ್ಲಿ 10 ಸಾವಿರ ಸಿಬ್ಬಂದಿ ಇದ್ದಾರೆ. ಎರಡನೇ ಹಂತದ ಲಸಿಕೆ ಬಾಕಿ ಇದ್ದು, ಆರೋಗ್ಯ ಇಲಾಖೆಗೆ ಈಗ ಬಂದಿದೆ. ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.