ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ 35 ದಿನಗಳ ಬಳಿಕ ನಾಳೆ ಅಂತ್ಯವಾಗಲಿದೆ. ಸರ್ಕಾರದ ಅಧಿಕೃತ ದತ್ತಾಂಶಗಳ ಪ್ರಕಾರ, ಲಾಕ್ ಡೌನ್ ಘೋಷಣೆಯಾದ ಬಳಿಕ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೇ 10 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 40 ಸಾವಿರದಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿತ್ತು. (ಮೇ 10 ರಂದು 39,305 ಪ್ರಕರಣ ದಾಖಲಾಗಿವೆ) ಪಾಸಿಟಿವಿಟಿ ದರ ಶೇ. 31.66 ರಷ್ಟು ಮತ್ತು ಸಾವಿನ ಪ್ರಮಾಣ ಶೇ. 1.51 ಇತ್ತು. (ಮೇ 10 ರಂದು 596 ಮಂದಿ ಮೃತಪಟ್ಟಿದ್ದಾರೆ)
ನಾಳೆ (ಜೂನ್ 14) ಲಾಕ್ ಡೌನ್ ಅಂತ್ಯವಾಗಲಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 10 ಸಾವಿರದಷ್ಟು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. (ಜೂನ್ 12 ರಂದು 9,785 ಪ್ರಕರಣ ವರದಿಯಾಗಿದೆ) ಪ್ರಸ್ತುತ ಪಾಸಿಟಿವಿಟಿ ದರ ಶೇ. 6.61 ರಷ್ಟು ಇದೆ.
ನಿನ್ನೆ (ಜೂನ್ 12 ರಂದು) ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 144 ಹಾಗೂ ನಿನ್ನೆಯ ಸಾವಿನ ಪ್ರಮಾಣ ಶೇ 1.47 ರಷ್ಟು. ಹೀಗಾಗಿ, ನಾಳೆಯಿಂದ ಹೆಚ್ಚು ಸೋಂಕಿತರಿರುವ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಅನ್ಲಾಕ್ ಮಾಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಅನ್ಲಾಕ್: ಏನಿರುತ್ತದೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ