ETV Bharat / state

LIVE UPDATES: ಇಂದಿನಿಂದ ಕರುನಾಡು ಲಾಕ್​.. ಅನಗತ್ಯವಾಗಿ ಬೀದಿಗಿಳಿದ್ರೆ ಬೀಳುತ್ತೆ ಲಾಠಿ ಏಟು

author img

By

Published : May 10, 2021, 7:35 AM IST

Updated : May 10, 2021, 12:24 PM IST

Karnataka Lockdown live update
ಇಂದಿನಿಂದ 14 ದಿನ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್

12:02 May 10

ಅಥಣಿಯಲ್ಲಿ ಲಾಕ್​ಡೌನ್​ಗೆ ಉತ್ತಮ ಸ್ಪಂದನೆ

ಅಥಣಿ: ಇಂದು ಬೆಳಗ್ಗೆಯಿಂದ ಅಥಣಿ ತಾಲೂಕು ಸಂಪೂರ್ಣವಾಗಿ ಸ್ತಬ್ಧವಾಗಿದೆ. ಅಥಣಿ ಪೊಲೀಸರುಲ್ಲಿ ಹಲವು ರಸ್ತೆಗಳಿಗೆ ಬ್ಯಾರಿಕೇಡ್ ಅವಳವಡಿ ತುರ್ತು ಸಂದರ್ಭ ಹಾಗೂ ಸರಕು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಅನಗತ್ಯ ಓಡಾಡುವ ಸವಾರರಿಗೆ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ಹಾಗೂ ಸಿಪಿಐ ಶಂಕರಗೌಡ ಬಸವನಗೌಡರ ಮತ್ತು ಪಿಎಸ್ಐ ಕುಮಾರ್ ಹಾಡ್ಕರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇದುವರೆಗೆ 51 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಅಂತರ್​ರಾಜ್ಯ ಹೆದ್ದಾರಿಗಳು ಬಿಕೋ ಎನ್ನುತ್ತಿವೆ. ಅಥಣಿಯಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬಿದ್ದು ತಾಲೂಕಿನ ಜನರು ಸರ್ಕಾರದ ಆದೇಶಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ.

11:47 May 10

ರಾಣೆಬೆನ್ನೂರ: ಒಂದು ಕಿ.ಮೀ ವರೆಗೆ ಬೈಕ್ ನೂಕುವ ಶಿಕ್ಷೆ ವಿಧಿಸಿದ ಪೊಲೀಸರು

ರಾಣೇಬೆನ್ನೂರು: ಕಠಿಣ ಲಾಕ್​ಡೌನ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗೆ ಇಳಿದಿದ್ದ ಬೈಕ್ ಸವಾರರಿಗೆ ರಾಣೇಬೆನ್ನೂರು ಪೊಲೀಸರು ಒಂದು ಕಿ.ಮೀ ವರೆಗೆ ಬೈಕ್ ನೂಕಿಸಿ ಪರೇಡ್ ಮಾಡಿಸಿದ್ದಾರೆ. ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಕಠಿಣ ಲಾಕ್​ಡೌನ್ ನಿಯಮ ಜಾರಿಗೆ ತಂದಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ವಾಹನಗಳನ್ನು ತೆಗೆದುಕೊಂಡು ಬರಬಾರದು ಎಂದು ತಿಳಿಸಿದೆ. ಈ ನಡುವೆ ರಾಣೇಬೆನ್ನೂರಲ್ಲಿ ಕೆಲವರು ನಿಯಮ ಉಲ್ಲಂಘನೆ ಮಾಡಿ ಬೈಕ್ ತೆಗೆದುಕೊಂಡು ಬಂದಿದ್ದರು. ಇದನ್ನ ಕಂಡ ಪೊಲೀಸರು ಬೈಕ್ ಸವಾರರನ್ನು ನಿಲ್ಲಿಸಿ ಅವರನ್ನು ಬೈಕ್​ನಿಂದ ಕೆಳಗೆ ಇಳಿಸಿ ಸುಮಾರು ಇಂದು ಒಂದು ಕಿ.ಮೀ ನೂಕಿಸಿ ಅವರನ್ನು ದಂಡಿಸಿದ್ದಾರೆ. ಅಲ್ಲದೆ ರಾಣೇಬೆನ್ನೂರು ಶಹರ ಠಾಣೆ ಪೊಲೀಸರು ಸುಮಾರು 200 ಬೈಕ್ ವಶಪಡಿಸಿಕೊಂಡಿದ್ದಾರೆ.

11:42 May 10

ಸುಳ್ಯದಲ್ಲಿ ಚೆಕ್ ಪೋಸ್ಟ್​ಗಳಲ್ಲಿ ಕಟ್ಟುನಿಟ್ಟಿನ ಕ್ರಮ

ಸುಳ್ಯ: ಸರ್ಕಾರ ಲಾಕ್​ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸುಳ್ಯ, ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ, ಉಪ್ಪಿನಂಗಡಿ, ಬೆಳ್ಳಾರೆ, ಗುಂಡ್ಯ ಮತ್ತು ಜಾಲ್ಸೂರು ಚೆಕ್ ಪೋಸ್ಟ್​ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅನಗತ್ಯ ತಿರುಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಪೇಟೆಯಲ್ಲಿ ಅನಗತ್ಯವಾಗಿ ಸಂಚರಿಸಿದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿ ಜನರಿಗೆ ಬಿಸಿ ಮುಟ್ಟಿಸಿ, ಅನಗತ್ಯವಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿದ್ದಾರೆ. ತುರ್ತು ಹಾಗೂ ಪಾಸ್ ಸಂಬಂಧಿ ವ್ಯಕ್ತಿಗಳ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಡಬದಲ್ಲಿ ಹಲವಾರು ದಿನಸಿ ಅಂಗಡಿಗಳಲ್ಲಿ ಭಾರೀ ಜನಜಂಗುಳಿ ಕಂಡುಬಂದಿತ್ತು‌. ಈ ವೇಳೆ ಪೊಲೀಸರು ಲಾಠಿ ಬೀಸುವ ಮೂಲಕ ಜನರನ್ನು ಚದುರಿಸಿ ನುಕ್ಕುನುಗ್ಗಲು ನಿಯಂತ್ರಣಕ್ಕೆ ತಂದಿದ್ದಾರೆ. ಈ ತನಕ ಕಡಬದಲ್ಲಿ ಸುಮಾರು 15 ವಾಹನಗಳಿಗೆ ಸುಬ್ರಹ್ಮಣ್ಯದಲ್ಲಿ ಸುಮಾರು 15 ವಾಹನಗಳಿಗೆ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ 8, ಬೆಳ್ಳಾರೆಯಲ್ಲಿ 9 ಮತ್ತು ಸುಳ್ಯದಲ್ಲೂ ಕೆಲವು ವಾಹನಗಳನ್ನು ಸೀಜ್​ ಮಾಡಿ ನೊಟೀಸ್ ನೀಡಿ, ದಂಡ ವಿಧಿಸಲಾಗಿದೆ.

10:58 May 10

ರಾಮನಗರದಲ್ಲಿ ಲಾಕ್​ಡೌನ್​ಗೆ ಮಿಶ್ರ ಪ್ರತಿಕ್ರಿಯೆ

ರಾಮನಗರ: ಜಿಲ್ಲೆಯಲ್ಲಿ ಲಾಕ್​ಡೌನ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳೆಗ್ಗೆ ಎಂದಿನಂತೆ ವಾಹನ ಸಂಚಾರ ಇತ್ತು. ಪೊಲೀಸರು ಬೆಳಗ್ಗೆಯಿಂದಲೇ ಫೀಲ್ಡಿಗಿಳಿದಿದ್ದಾರೆ. ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿ ಆಗಬೇಕು ಎಂದು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದೆ. ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಪೊಲೀಸರು ಕೂಡ ಶ್ರಮಿಸುತ್ತಿದ್ದು, ಬ್ಯಾರಿಕೇಡ್‌ಗಳನ್ನು ಸಿದ್ಧ ಮಾಡಿ ಪ್ರಮುಖ ರಸ್ತೆಗಳನ್ನು ಬಂದ್​ ಮಾಡುತ್ತಿದ್ದಾರೆ. ಬೆಳಗ್ಗೆಯಿಂದಲೇ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಸೀಜ್ ಮಾಡಲು ಆರಂಭಿಸಲಿದ್ದಾರೆ. ಇನ್ನೊಂದು ಕಡೆ ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಮತ್ತು ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಲಾಗಿದೆ.

10:53 May 10

ಚಿಕ್ಕಮಗಳೂರು ನಗರದಲ್ಲಿ ಎಸ್ಪಿ, ಡಿಸಿ ರೌಂಡ್ಸ್

ಚಿಕ್ಕಮಗಳೂರು: ಚಿಕ್ಕಮಗಳೂರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ನಗರದಲ್ಲಿ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿ ರೌಂಡ್ಸ್ ಹಾಕುತ್ತಿದ್ದು, ಅನಗತ್ಯ ಸಂಚರಿಸುವವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಎಸ್ಪಿ ಅಕ್ಷಯ್ ನಗರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದಲೇ ನಗರದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಅನಗತ್ಯ ಸಂಚಾರ ಮಾಡುವವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

10:49 May 10

ಧಾರವಾಡದಲ್ಲಿ ವಾಹನ ಬಿಟ್ಟು ಸೈಕಲ್​ ಮೊರೆ ಹೋದ ಜನತೆ

ಧಾರವಾಡ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್ ಹೇರಿದೆ. ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಇದರ ಮಧ್ಯೆ ಕೆಲವರು ವಾಹನಗಳನ್ನು ಬಿಟ್ಟು ಸೈಕಲ್ ಮೊರೆ ಹೋಗಿದ್ದಾರೆ. ಅಗತ್ಯ ಸೇವೆಗಳ ಖರೀದಿಗೆ ಆಗಮಿಸುವ ಜನರು ತಮ್ಮ ವಾಹನ ಬಿಟ್ಟು ಸೈಕಲ್ ಮೂಲಕ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು.

ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಿದ ಹಿನ್ನೆಲೆ ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡು ಹೋಗಬೇಕು ಎಂಬ ನಿಯಮದಿಂದ ಧಾರವಾಡದ ಸುಭಾಷ್ ರಸ್ತೆಯಲ್ಲಿ ದಿನ ಬಳಕೆ ವಸ್ತು ತರಕಾರಿ ಖರೀದಿಸಲು ಸೈಕಲ್ ಮೇಲೆ ಬಂದಿದ್ದರು.  

10:36 May 10

ಧಾರವಾಡದಲ್ಲಿ ಬೈಕ್​ ಸೈಡ್ ಹಾಕುವ ನೆಪದಲ್ಲಿ ಪರಾರಿಯಾದ ಮಹಿಳೆ

ಬೈಕ್​ ಸೈಡ್ ಹಾಕುವ ನೆಪದಲ್ಲಿ ಪರಾರಿಯಾದ ಮಹಿಳೆ

ಧಾರವಾಡ: ಲಾಕ್​ಡೌನ್ ಹಿನ್ನೆಲೆ ಅನಗತ್ಯವಾಗಿ ತಿರುಗುತ್ತಿರುವವರಿಗೆ ಪೋಲಿಸರು ತಪಾಸಣೆ ನಡೆಸಿ ಬೈಕ್​ಗಳನ್ನು ಸೀಜ್ ಮಾಡುತ್ತಿದ್ದಾರೆ. ನಗರದ ಸುಭಾಷ್ ಮಾರ್ಕೆಟ್​ನಲ್ಲಿ ಓರ್ವ ಮಹಿಳೆಯನ್ನ ಪೊಲೀಸರು ವಿಚಾರಣೆ ಮಾಡುತ್ತಿರುವ ವೇಳೆ ಬೈಕ್‌ ಸೈಡ್ ಹಾಕುವ ನೆಪ ಹೇಳಿ ಮಹಿಳಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಮಹಿಳೆ ಹೋಗಿರುವ ಸ್ಪೀಡ್ ನೋಡಿ ಪೋಲಿಸರು ದಂಗಾಗಿದ್ದಾರೆ. ಫೈನ್ ಕಟ್ಟಬೇಕಾಗುತ್ತೆ ಎಂದು ಎಸ್ಕೇಪ್ ಆದ ಮಹಿಳೆಗೆ ತಕ್ಷಣ ನೋಟಿಸ್ ನೀಡಲು ಅಧಿಕಾರಿಗಳು ಸೂಚಿಸಿದ್ದಾರೆ.

10:32 May 10

ಬೆಂಗಳೂರಿನಲ್ಲಿ 9.30 ರ ವೇಳೆಗೆ ಅಂಗಡಿ ಮಳಿಗೆಗಳು ಬಂದ್​

ಬೆಂಗಳೂರು: ಇಂದಿನಿಂದ ಮೇ 24 ರ ವರೆಗೆ ಕಠಿಣ ಲಾಕ್​ಡೌನ್ ಹಿನ್ನೆಲೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತರಕರಾರಿ, ಹಾಲು, ದಿನಬಳಕೆ ವಸ್ತಗಳ ಖರೀದಿಯಲ್ಲಿ ಜನ ನಿರತರಾಗಿದ್ದರು‌. ಡಿ-ಮಾರ್ಟ್, ಸೂಪರ್ ಮಾರ್ಕೆಟ್, ರೈಸ್‌ ಟ್ರೇಡರ್ಸ್‌ ಅಂಗಡಿಗಳ ಮುಂದೆ ಜನ ಕ್ಯೂ ನಿಂತು ಖರೀದಿಯಲ್ಲಿ ತೊಡಗಿದ್ದರು.‌ ಮಾಸ್ಕ್ ಹಾಕದೆ, ಅಂಗಡಿಗಳಲ್ಲಿ ಗುಂಪು‌ಗೂಡಿದಲ್ಲಿ ಪರಿಶೀಲಿಸಿ, ಮಾರ್ಷಲ್ಸ್ ಫೈನ್ ಹಾಕಿದರು. 10 ಗಂಟೆ ನಂತರ ಕೇಲವ ತಳ್ಳುವ ಗಾಡಿಗಳು ಮನೆ ಮನೆಗಳ ಬಳಿ ಬಂದು ತರಕಾರಿ , ಹಣ್ಣು ಮಾರಬಹುದಾಗಿದೆ. 9.30 ರ ವೇಳೆಗೆ ಅಂಗಡಿ ಮಳಿಗೆಗಳು ಶಟರ್ ಎಳೆದವು. ಪೊಲೀಸರು ಗಸ್ತು ತಿರುಗಿ ಜನ ರಸ್ತೆಗಳಲ್ಲಿ ನಿಲ್ಲದಂತೆ ಎಚ್ಚರ ವಹಿಸಿದರು. 

10:30 May 10

ಗದಗ: ಯುವಕನಿಗೆ ಕಪಾಳಮೋಕ್ಷ ಮಾಡಿದ ಪಿಎಸ್ಐ ಕಮಲಾ ದೊಡ್ಡಮನಿ

ಯುವಕನಿಗೆ ಕಪಾಳಮೋಕ್ಷ ಮಾಡಿದ ಪಿಎಸ್ಐ ಕಮಲಾ ದೊಡ್ಡಮನಿ

ಗದಗ: ಅನಾವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದೂ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಯುವಕನನ್ನು ಪಿಎಸ್​ಐ ಕಮಲಾ ದೊಡ್ಡಮನಿ ವಶಕ್ಕೆ ಪಡೆದಿದ್ದಾರೆ. ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ರಾಜ್ಯಾದ್ಯಂತ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಅಲ್ಲದೇ, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದಲ್ಲಿ ಹೀಗೆ ಅನಗತ್ಯವಾಗಿ ವಾಹನದ ಮೇಲೆ ಬಂದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಕೇಳಿದರೆ ನಾನು ಕಂಟ್ರಾಕ್ಟರ್, ಹಳ್ಳಿಯಿಂದ ಬರಬೇಕು ಎಂದು ವಾದಿಸಿದ್ದಾನೆ. ಅಲ್ಲದೇ, ಯಾವುದೋ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್​ಐ ಕಮಲಾ ದೊಡ್ಡಮನಿ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆ ಇಲ್ಲಿಯ ಭೂಮರಡ್ಡಿ ಸರ್ಕಲ್ ನಲ್ಲಿ ನಡೆದಿದೆ.  

10:16 May 10

ಮಂಡ್ಯದಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ಬ್ರೇಕ್

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡ್​ಗಿಳಿದ ಪೊಲೀಸರು ಕಟ್ಟುನಿಟ್ಟಿನ ಟಫ್ ರೂಲ್ಸ್ ಜಾರಿ ಮಾಡಿದ್ದಾರೆ. ವಾಹನ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದು, ಪ್ರತಿ ರಸ್ತೆಗೂ ಬ್ಯಾರಿಕೇಡ್​ ಹಾಕಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೂ ವಾಹನ ತಂದರೆ ಸೀಜ್ ಮಾಡುತ್ತಿದ್ದಾರೆ. ಮಂಡ್ಯದ ಹೊಸ ಹಳ್ಳಿ ಸರ್ಕಲ್ ಸೇರಿದಂತೆ ನಗರದ ನಾನಾ ಕಡೆ ಪೊಲೀಸರಿಂದ ನಾಕಾಬಂದಿ ಹಾಕಿದ್ದಾರೆ. ಆದರೆ ಖಾಕಿ ಕಣ್ತಪ್ಪಿಸಿ ಓಡಾಡುತ್ತಿರುವವರ ಬೈಕ್​ಗಳನ್ನ ಸೀಜ್ ಮಾಡುತ್ತಿದ್ದಾರೆ.  

09:50 May 10

ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಆಟೋಗಳು ಸೀಜ್​

ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು

ಬೆಂಗಳೂರು: ಕೊರೊನಾ ಸೋಂಕಿನ ಸರಪಳಿ ಬ್ರೇಕ್ ಮಾಡಲು ಇಂದಿನಿಂದ 14 ದಿನಗಳ ಕಾಲ ಕಠಿಣ ಲಾಕ್​ಡೌನ್ ಜಾರಿಯಾಗಲಿದ್ದು ಬೆಳಗ್ಗೆ 10 ಗಂಟೆ ಬಳಿಕ ಅನಗತ್ಯವಾಗಿ ವಾಹನಗಳು ರಸ್ತೆಗಿಳಿದರೆ ಸೀಜ್ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ. ಕೆ.ಆರ್.ಮಾರ್ಕೆಟ್​ನಲ್ಲಿ ವಿನಾಯಿತಿ ನೀಡಿದ ಅವಧಿಯಲ್ಲಿಯೇ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.‌ ಇಲ್ಲಸಲ್ಲದ ಕಾರಣ ಹೇಳುವ ವಾಹನ ಸವಾರರಿಗೆ ಲಾಠಿ ಬಿಸಿ ಮುಟ್ಟಿಸುತ್ತಿದ್ದಾರೆ.‌ ಈ ವೇಳೆ ಪ್ರಯಾಣಿಕರಿದ್ದ ಸುಮಾರು 10ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಿ ತಪಾಸಣೆಯನ್ನು ಬಿಗಿಗೊಳಿಸಿದ್ದು, ಬೆಳಗ್ಗೆ 10 ಗಂಟೆ ಬಳಿಕ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ‌.

09:36 May 10

ಬೆಳಗಾವಿಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನ ಸೀಜ್

ಬೆಳಗಾವಿ: ಕೊರೊನಾ ತಡೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಹಿನ್ನೆಲೆ ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಬಂದು ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಬೆಳಗಾವಿಯಲ್ಲಿ ಕುಂಟುನೆಪ ಹೇಳಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ನಗರದ ಚೆನ್ನಮ್ಮ ವೃತ್ತ, ಮಹಾಂತೇಶ ನಗರ ಓವರ್‌ಬ್ರಿಡ್ಜ್, ಅಶೋಕ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಹಾಗೂ ವಾಹನ ಸವಾರರು ಅಗತ್ಯ ವಸ್ತುಗಳ ಹೆಸರಲ್ಲಿ ಅನಗತ್ಯ ಓಡಾಟ ನಡೆಸುತ್ತಿದ್ದು ಅಂಥವರಿಗೆ ಪೊಲೀಸರು ಚಳಿ ಬಿಡಿಸುತ್ತಿದ್ದಾರೆ. ಇನ್ನೂ ಕೆಲವರು ಯಾವುದಾದರೊಂದು ಐಡಿ ಕಾರ್ಡ್, ಔಷಧಿ ಅಂಗಡಿ ಚೀಟಿ, ಆಸ್ಪತ್ರೆ ದಾಖಲೆಗಳನ್ನ ತೋರಿಸಿ ಹೋಗುತ್ತಿದ್ದಾರೆ.

ಒತ್ತಾಯಪೂರ್ವಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪೊಲೀಸರು: ನಗರದ ಗಣಪತಿ ಗಲ್ಲಿ, ಶನಿವಾರ ಪೇಟೆ, ತರಕಾರಿ ಮಾರುಕಟ್ಟೆ ಹಾಗೂ ಮೇನ್ ಮಾರ್ಕೆಟ್​ನಲ್ಲಿ ವ್ಯಾಪಾರ ವಹಿವಾಟಿಗೆ ಮುಂದಾಗುತ್ತಿದ್ದ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದರು.  

09:34 May 10

ಲಾಕ್​ಡೌನ್​ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರ ಎಚ್ಚರಿಕೆ

ಆನೇಕಲ್: ಇಂದು ಬೆಳಗ್ಗೆಯೇ ಪೊಲೀಸರು ರಸ್ತೆಗಿಳಿದಿದ್ದು, ಲಾಕ್​ಡೌನ್​ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಸಂಗಡಿ ತೆರೆಯಲು ಅವಕಾಶವಿದ್ದು, ಬಳಿಕ ಎಲ್ಲವಊ ಬಂದ್​ ಆಗಲಿದೆ.

09:11 May 10

ಚಿತ್ರದುರ್ಗದಲ್ಲಿ ಜಿಲ್ಲಾ ಎಸ್ಪಿ ರಾಧಿಕಾರಿಂದ ವಾಹನ ತಪಾಸಣೆ

ಚಿತ್ರದುರ್ಗ: ಇಂದಿನಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸೆಮಿ ಲಾಕ್​ಡೌನ್ ಹಿನ್ನೆಲೆ ಅನಗತ್ಯ ಓಡಾಟ ನಿಯಂತ್ರಿಸಲು ಸ್ವತಃ ಚಿತ್ರದುರ್ಗ ಜಿಲ್ಲಾ ಎಸ್ಪಿ ರಾಧಿಕಾ ನಗರದ ಗಾಂಧಿ ವೃತ್ತದಲ್ಲಿ ಬಂದೋಬಸ್ತ್ ಮಾಡಿದರು.  

09:10 May 10

ಮೈಸೂರಿನಲ್ಲಿ ಫೀಲ್ಡ್​ಗಿಳಿದ ಡಿಸಿಪಿ ಪ್ರಕಾಶ್ ಗೌಡ

ಮೈಸೂರು: ಇಂದಿನಿಂದ ಲಾಕ್​ಡೌನ್ ಘೋಷಣೆಯಾಗಿರುವುದರಿಂದ ಡಿಸಿಪಿ ಡಾ.ಎ‌.ಎನ್‌.ಪ್ರಕಾಶ್​ ಗೌಡ ಅವರು ಫೀಲ್ಡ್​ಗಿಳಿದು, ಅನಗತ್ಯವಾಗಿ ವಾಹನ ಸಂಚಾರ ಮಾಡುವವರ ಗಾಡಿ ಸೀಜ್ ಮಾಡಿ ಬಿಸಿ ಮುಟ್ಟಿಸಿದರು. ಮೈಸೂರಿನ ವಿವಿಧೆಡೆ ವಾಹನಗಳಲ್ಲಿ ಓಡಾಡುತ್ತಿರುವ ಜನತೆಗೆ ಪೋಲಿಸರು ಶಾಕ್ ಕೊಟ್ಟಿದ್ದಾರೆ. ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ತಪಾಸಣೆ ನಡೆಸಿದ್ದಾರೆ.

09:07 May 10

ಕಾರವಾರದಲ್ಲಿ ಲಾಕ್​ಡೌನ್​ಗೆ ಉತ್ತಮ ಪ್ರತಿಕ್ರಿಯೆ

ಕಾರವಾರ: ಕೊರೊನಾ ಚೈನ್ ತುಂಡರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೇ 24ರ ವರೆಗೆ 14 ದಿನಗಳ ಕಾಲ ಲಾಕ್​ಡೌನ್​ ಘೋಷಿಸಿದೆ. ಅಗತ್ಯ ವಸ್ತುಗಳ ಖರೀದಿ ಹಾಗೂ ವಾಹನ ರಹಿತ ಓಡಾಟಕ್ಕೆ 10 ಗಂಟೆವರೆಗೆ ಅವಕಾಶ ಕಲ್ಪಿಸಿದ್ದ ಕಾರಣ ಕಾರವಾರದಲ್ಲಿ ಜನಸಂದಣಿ ಕಡಿಮೆಯಾಗಿದ್ದು, ಸರ್ಕಾರದ ಹೊಸ ಪ್ಲ್ಯಾನ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿ ಹಾಗೂ ಓಡಾಟಕ್ಕೆ ಕಾಲ್ನಡಿಗೆಯಲ್ಲಿ ಮಾತ್ರ ಅವಕಾಶ ಕಲ್ಪಿಸಿದ್ದು ಈ ನಿಯಮವನ್ನು ಕಾರವಾರದ ಜನತೆ ಪಾಲಿಸುತ್ತಿದ್ದಾರೆ. ಕೊರೊನಾ ಕರ್ಫ್ಯೂ ವೇಳೆ ಜನಜಂಗುಳಿಯಿಂದ ತುಂಬಿರುತ್ತಿದ್ದ ನಗರದ ಮಾರುಕಟ್ಟೆಯಲ್ಲಿ ಇಂದು ತೀರಾ ಅವಶ್ಯಕತೆ ಇದ್ದವರ ಓಡಾಟ ಮಾತ್ರ ಕಂಡುಬಂದಿದೆ. ಈ ನಡುವೆಯೂ ನಿಯಮ ಮೀರಿ ವಾಹನವೇರಿ ಬಂದವರ ಬೈಕ್ ಸೇರಿದಂತೆ ಇತರೆ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಎಲ್ಲೆಡೆ ತಪಾಸಣೆ ಬಿಗಿಗೊಳಿಸಲಾಗಿದೆ. ಅಲ್ಲದೆ 10 ಗಂಟೆ ಬಳಿಕ ಸಂಪೂರ್ಣ ಬಂದ್ ಆಗಲಿದೆ‌.

09:00 May 10

ಎಸ್ಪಿ ಎಚ್ಚರಿಕೆ ಗಾಳಿಗೆ ತೂರಿದ ಜನ, ಚಾಮರಾಜನಗರದಲ್ಲಿ ಲಾಕ್​ಡೌನ್​ಗೆ ಡೋಂಟ್​ ಕೇರ್​!

ಚಾಮರಾಜನಗರ: ವಾಹನ ತಂದರೆ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಚಾಮರಾಜನಗರ ಎಸ್ಪಿ ಅವರ ಮಾತನ್ನು ಜನರು ಗಾಳಿಗೆ ತೂರಿದ್ದಾರೆ.

ಎಂದಿನಂತೆ ದಿನನಿತ್ಯದ ಚಟುವಟಿಕೆ ನಡೆಯುತ್ತಿದ್ದು ಜನರು ಕೊರೊನಾ ಭಯ ಮರೆತು ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಇನ್ನು ಯಾವ ಪೊಲೀಸರು ರಸ್ತೆಗಿಳಿದಿಲ್ಲ. ಆಟೋ, ಬೈಕ್, ಕಾರಿನ ಸಂಚಾರ ಹಿಂದಿಗಿಂತ ಇಂದು ಹೆಚ್ಚಾಗಿಯೇ ನಡೆಯುತ್ತಿದೆ.

ಚಾಮರಾಜನಗರದ ಯಾವ ವೃತ್ತದಲ್ಲೂ ಪೊಲೀಸರು ಕಾಣದಿರುವುದರಿಂದ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿದ್ದು, ಮಾರುಕಟ್ಟೆಯಲ್ಲಂತೂ ಸಾಮಾಜಿಕ ಅಂತರವೇ ಮಾಯವಾಗಿದೆ. 

08:58 May 10

ಹೊಸಪೇಟೆಯಲ್ಲಿ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಸಪೇಟೆಯಲ್ಲಿ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಹೊಸಪೇಟೆ: ಅನಗತ್ಯ ಓಡಾಡುವ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದಲೇ ಪೊಲೀಸರು ನಗರದಲ್ಲಿ ಸಂಚರಿಸಿ ವಾಹನ ಸವಾರಿಗೆ ಬಿಸಿ‌ ಮುಟ್ಟಿಸಿದ್ದಾರೆ. ರೋಟರಿ ವೃತ್ತ, ಎಪಿಎಂಸಿ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ನಾನಾ‌ ಕಡೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕಾರು, ಬೈಕ್​ಗಳು ಸೇರಿದಂತೆ 30 ಕ್ಕೂ ಹೆಚ್ಚು ವಾಹನಗಳು ಸೀಜ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.‌ 

07:46 May 10

ಹಾವೇರಿಯಲ್ಲಿ ಒಂದು ಬೈಕ್, ಕಾರ್​ ಸೀಜ್​

ಹಾವೇರಿಯಲ್ಲಿ ಒಂದು ಬೈಕ್, ಕಾರ್​ ಸೀಜ್​
ಹಾವೇರಿಯಲ್ಲಿ ಒಂದು ಬೈಕ್, ಕಾರ್​ ಸೀಜ್​

ಹಾವೇರಿ: ಲಾಕ್​ಡೌನ್​ ಹಿನ್ನೆಲೆ ಹಾವೇರಿಯಲ್ಲಿ ವಾಹನ ಸವಾರರನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಬೈಕ್​ಗಳಲ್ಲಿ ಬರುತ್ತಿರುವವರನ್ನು ವಾಪಾಸ್ ಮನೆಗೆ ಕಳುಹಿಸುತ್ತಿದ್ದಾರೆ.  ಬೈಕ್, ಕಾರಿನಲ್ಲಿ ಓಡಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ನಗರದ ಹೊಸಮನಿ‌ ಸಿದ್ದಪ್ಪ ವೃತ್ತದಲ್ಲಿ ಡಿವೈಎಸ್ಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಇದೇ ವೇಳೆ ಒಂದು ಬೈಕ್​ ಹಾಗೂ ಒಂದು ಕಾರನ್ನು ಸೀಜ್​ ಮಾಡಿದ್ದಾರೆ.

07:37 May 10

ಕೊಪ್ಪಳದ ಮಾರುಕಟ್ಟೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆ

ಕೊಪ್ಪಳ: ಕೊಪ್ಪಳದಲ್ಲಿ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ನಗರದ ಎಸ್.ಜಿ.ಗಂಜ್ ನಿಂದ ಬೆಳವನಾಳ ಗ್ರಾಮದ ಬಳಿ ಸ್ಥಳಾಂತರವಾಗಿರುವ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳದೆ ಜನರು ತಿರುಗಾಡುತ್ತಿದ್ದಾರೆ. ಇಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ ನಿಯಮ ಪಾಲನೆಯ ಬಗ್ಗೆ ನಿಗಾವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

07:23 May 10

ಇಂದಿನಿಂದ 18 ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಡ್-19 ಲಸಿಕೆ

ಇಂದಿನಿಂದ ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತದೆ. ಈಗಾಗಲೇ ನೋಂದಣಿ ಮಾಡಿಕೊಂಡವರು ತಮಗೆ ಬಂದಿರುವ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕೆ ಪಡೆಯಲು ತೆರಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. 

18 ರಿಂದ 44 ವರ್ಷ ವಯಸ್ಸಿನ ನಡುವಿನ ಫಲಾನುಭವಿಗಳು ಆನ್​ಲೈನ್​ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಣಿಯ ನಂತರ ತಮ್ಮ‌ ಮೊಬೈಲ್​ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ ಬಗ್ಗೆ ಎಸ್ಎಂಎಸ್ ಸ್ವೀಕರಿಸಿರಬೇಕು.

ಇಂದಿನಿಂದ 14 ದಿನಗಳ ಕಾಲ ಲಾಕ್​ಡೌನ್ ಆರಂಭವಾಗಲಿದ್ದು, ಕಟ್ಟುನಿಟ್ಟಿನ ಈ ಸಂದರ್ಭದಲ್ಲಿ ಫಲಾನುಭವಿಗಳು ಮೊಬೈಲ್​ನಲ್ಲಿ ಸ್ವಿಕರಿಸಿದ ಎಸ್ಎಂಎಸ್ ಪರಿಶೀಲಸಿದ ನಂತರವಷ್ಟೇ ಪೊಲೀಸರು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

06:51 May 10

ಬೆಂಗಳೂರು: ಇಂದಿನಿಂದ ಕಠಿಣ ನಿರ್ಬಂಧಗಳಿರುವ ಲಾಕ್‌ಡೌನ್ ರಾಜ್ಯಾದ್ಯಂತ ಜಾರಿಯಾಗಲಿದೆ. ಈ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. 14 ದಿನಗಳ ಕಾಲ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಜಾರಿಯಾಗಲಿದೆ. ಸಂಪೂರ್ಣ ಲಾಕ್‌ಡೌನ್ ಅಲ್ಲವಾದರೂ ಈ ಮೊದಲಿದ್ದ ಕರ್ಫ್ಯೂಗಿಂತ ಕಠಿಣ ನಿಯಮಗಳು ಜಾರಿಯಾಗಲಿವೆ. 

ಲಾಕ್‌ಡೌನ್ ವೇಳೆ ಅನಗತ್ಯ ವಾಹನ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೂ ಜನರು ವಾಹನಗಳಲ್ಲಿ ಸಂಚರಿಸುದಕ್ಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ನಡೆದುಕೊಂಡೇ ಹೋಗಿ ಬರಬೇಕು.

ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆಯಲಿದ್ದು, ಬಳಿಕ ವ್ಯಾಪಾರಕ್ಕೆ ಯಾವುದೇ ಅವಕಾಶ ಇಲ್ಲ. ಈ ವೇಳೆ ಸಾರ್ವಜನಿಕರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ವಾಹನ ಬಳಕೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಬೆಳಗ್ಗೆ 10 ಗಂಟೆಯ ಬಳಿಕ ಜನರ ಓಡಾಟಕ್ಕೆ ಸಪೂರ್ಣ ಬ್ರೇಕ್ ಹಾಕಲಾಗುತ್ತದೆ.

Last Updated : May 10, 2021, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.