ETV Bharat / state

ನಾಳೆಯಿಂದಲೇ ಹೋಟೆಲ್​​ ಗ್ರಾಹಕರ ಜೇಬಿಗೆ ಕತ್ತರಿ: ಊಟ-ತಿಂಡಿ ಬೆಲೆ 10 ರೂ. ಹೆಚ್ಚಳ - ಹೋಟೆಲ್​ ಫುಡ್​ ಪರಿಷ್ಕೃತ ದರ

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಹೋಟೆಲ್​ ಮಾಲೀಕರು ಆಹಾರ ಪದಾರ್ಥಗಳ​ ಬೆಲೆ ಏರಿಕೆ ಮಾಡಿದ್ದು, ನಾಳೆಯಿಂದಲೇ ಹೋಟೆಲ್ ಫುಡ್‌ ಶೇ. 5 ರಿಂದ 20ರಷ್ಟು ದುಬಾರಿಯಾಗಲಿದೆ.

hotels to  hike food price
ಊಟ ತಿಂಡಿಗಳ ಬೆಲೆ 10 ರೂ ಹೆಚ್ಚಳ
author img

By

Published : Nov 7, 2021, 5:16 PM IST

ಬೆಂಗಳೂರು: ಹೋಟೆಲ್​​ಗೆ ಹೋಗುವ ಮೊದಲು ಯೋಚಿಸಬೇಕಾದ ಸಮಯ ಬಂದಿದೆ.

ಶತಕದ ಗಡಿ ದಾಟಿದ ಪೆಟ್ರೋಲ್, ಡೀಸೆಲ್ ದರಕ್ಕೆ ಸರ್ಕಾರ ತಾತ್ಕಾಲಿಕವಾಗಿ ರಿಲೀಫ್ ಕೊಟ್ಟಿದೆ. ಒಂದಿಷ್ಟಾದ್ರೂ ರೇಟ್ ಕಮ್ಮಿ ಆಯ್ತಲ್ಲ ಅಂತ ಜನ ನಿಟ್ಟುಸಿರು ಬಿಡೋ ಹೊತ್ತಿಗೆ ಮತ್ತೊಂದು ಶಾಕ್ ಎದುರಾಗಿದೆ.

ಕರ್ಮಶಿಯಲ್​​ ಗ್ಯಾಸ್ ರೇಟ್ ದಿಢೀರನೆ ಗಗನ ಕುಸುಮವಾಗಿದ್ದೇ ತಡ, ಕರ್ನಾಟಕ ಹೋಟೆಲ್‌ ಮಾಲೀಕರ ಸಂಘ ಹೋಟೆಲ್ ತಿನಿಸುಗಳ ದರ ಏರಿಕೆಗೆ ಮುಂದಾಗಿದೆ. ದಿನಗಳ ಹಿಂದಷ್ಟೇ ದರ ಏರಿಕೆ ಮುನ್ಸೂಚನೆ ಕೊಟ್ಟಿದ್ದ ಹೋಟೆಲ್ ಮಾಲೀಕರು ನಾಳೆಯಿಂದಲೇ ಬೆಲೆ ಏರಿಕೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ.

ಹೋಟೆಲ್​​ನಲ್ಲಿ ಊಟ, ತಿಂಡಿ ಬೆಲೆ ಏರಿಕೆಗೆ ಕಾರಣಗಳೇನು?

  • ನಿರಂತರವಾಗಿ ಏರಿಕೆಯಾಗ್ತಿರುವ ಕರ್ಮಶಿಯಲ್ ಗ್ಯಾಸ್ ದರ
  • ದಿನಸಿ ಸಾಮಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲು
  • ಅಡುಗೆ ಎಣ್ಣೆಯ ಬೆಲೆಯೂ ದುಬಾರಿ
  • ಕಳೆದ 2 ವರ್ಷಗಳಿಂದ ಬೆಲೆ ಏರಿಕೆಗೆ ಕಡಿವಾಣ
  • ವಾಟರ್ ಟ್ಯಾಂಕರ್ ಬೆಲೆ ಏರಿಕೆ
  • ದವಸ ಧಾನ್ಯಗಳ ಬೆಲೆ ಹೆಚ್ಚಳ

    ಕರ್ಮಷಿಯಲ್ ಗ್ಯಾಸ್​​ ದರ ಹೆಚ್ಚಳವಾಗಿರೋದು ಹೋಟೆಲ್​ ಮಾಲೀಕರ ನೆಮ್ಮದಿ ಕೆಡಿಸಿದೆ. 1030 ರೂ ಇದ್ದ 19 ಕೆ.ಜಿ ಕಮರ್ಷಿಯಲ್ ಸಿಲಿಂಡರ್ ರೇಟ್ ಕಳೆದ ಒಂದೂವರೆ ವರ್ಷದಲ್ಲಿ ರೂ 2,200ಕ್ಕೆ ಏರಿಕೆ ಕಂಡಿದೆ. ದವಸ, ಧಾನ್ಯಗಳ ಬೆಲೆ ಹೆಚ್ಚಳದ ಜತೆ ಅಡುಗೆ ಎಣ್ಣೆ ಬೆಲೆ ಕೂಡ ಜಾಸ್ತಿ ಆಗಿದೆ. ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ನೀರಿನ ಬೆಲೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ‌. ಕಳೆದೆರೆಡು ವರ್ಷಗಳಿಂದ ಹೋಟೆಲ್ ತಿಂಡಿ ಬೆಲೆ ಹೆಚ್ಚಿಸಿಲ್ಲ, ಹೀಗಾಗಿ ಈ ಸಲ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದ್ದಾರೆ‌.

ಪ್ರತೀ ಆಹಾರ ಪದಾರ್ಥಗಳ ಮೇಲೂ 10 ರಿಂದ 15 ರೂ. ರಷ್ಟು ಹೆಚ್ಚಿಸಲು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹೋಟೆಲ್​​ಗಳಲ್ಲಿ ಆಹಾರ ಪದಾರ್ಥ ಏರಿಕೆ ಮಾಡದೆ ಬೇರೆ ವಿಧಿ ಇಲ್ಲ, ನಷ್ಟದಲ್ಲಿ ಉದ್ಯಮ ನಡೆಸಲು ಸಾಧ್ಯವಿಲ್ಲ. ಮೊದಲೇ ಕೊರೊನಾ ಲಾಕ್​​ಡೌನ್​ನಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸ್ವಲ್ಪನಾದ್ರೂ ಚೇತರಿಕೆ ಆಗಬೇಕಂದ್ರೆ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದಿದ್ದಾರೆ ಮಾಲೀಕರು.

ಯಾವ, ಯಾವ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ..?

  • ಮಸಾಲೆ ದೋಸೆ 65 ರಿಂದ 75 ರೂ.ಗೆ ಏರಿಕೆ
  • ಇಡ್ಲಿ, ವಡೆ 35 ರಿಂದ 40 ರೂ. ಗೆ ಏರಿಕೆ
  • ಕಾಫಿ, ಟೀ ಬೆಲೆ 15 ರಿಂದ 20ರೂ. ಗೆ ಏರಿಕೆ
  • ಚೌಚೌ ಬಾತ್ 60 ರಿಂದ 70ರೂ. ಗೆ ಏರಿಕೆ
  • ಸೌತ್​ ಇಂಡಿಯನ್ ಊಟ 85 ರಿಂದ 95ರೂ. ಗೆ ಏರಿಕೆ
  • ರೈಸ್ ಬಾತ್ 40 ರಿಂದ 50ರೂ. ಗೆ ಹೆಚ್ಚಳ
  • ರವಾ ಇಡ್ಲಿ 40 ರಿಂದ 45ರೂ. ಗೆ ಏರಿಕೆ
  • ಅಕ್ಕಿ ರೊಟ್ಟಿ 45-50ರೂ. ಗೆ ಏರಿಕೆ
  • ಫ್ರೈಡ್​​ ರೈಸ್ 100 ರಿಂದ 110ರೂ.ಗೆ ಕ್ಕೆ ಏರಿಕೆ
  • ಗೋಬಿ ಮಂಚೂರಿ ಒಂದು ಪ್ಲೇಟಿಗೆ 100 ರಿಂದ 110ರೂ. ಗೆ ಕ್ಕೆ ಏರಿಕೆ
  • ಪನ್ನೀರ್ ಮಂಚೂರಿ 110 ರಿಂದ 120ರೂ. ಗೆ ಹೆಚ್ಚಳ
  • ಒಂದು ಪ್ಲೇಟ್ ಪೂರಿ 65 ರಿಂದ 70ರೂ. ಗೆ ಏರಿಕೆ

    ಬೆಂಗಳೂರಿನಲ್ಲಿ ಸರಾಸರಿ ಒಂದು ಲಕ್ಷ ದರ್ಶಿನಿಗಳಿವೆ. ಎಲ್ಲಾ ಹೋಟೆಲ್​ನಲ್ಲೂ ಶೇಕಡ 5 ರಿಂದ 20ರಷ್ಟು ಬೆಲೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ನಾಳೆಯಿಂದಲೇ ಹೊಸ ಬೆಲೆ ಜಾರಿ ಆಗಲಿದೆ. ಕೋವಿಡ್ ಸಂದರ್ಭದಲ್ಲಿ ಎಷ್ಟೋ ಹೋಟೆಲ್​​ಗಳು ಮುಚ್ಚಿ ಹೋಗಿವೆ. ಕೆಲ ಹೋಟೆಲ್​ಗಳು ಆಸ್ಪತ್ರೆ, ಮಾಲ್​​ಗಳಾಗಿ ಮಾರ್ಪಾಡಾಗಿವೆ. ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿಕೊಂಡಿರೋದು ಒಂದೆಡೆಯಾದ್ರೆ, ಗ್ರಾಹಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.