ಬೆಂಗಳೂರು: ಕೊರೊನಾ ಅಟ್ಟಹಾಸ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಅಡ್ಡಾದಿಡ್ಡಿ ಓಡಾಟಕ್ಕೆ ಬ್ರೇಕ್ ಹಾಕಿದೆ. ಬೆಂಗಳೂರಿನಲ್ಲಿ ಇಂದಿನಿಂದ 10 ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಫ್ಲೈ ಓವರ್ಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರಿಗೆ ಬಂದ್ ಆಗಲಿವೆ.
ಯಾವ ಸೇವೆ ಇರೋದಿಲ್ಲ?
- ವಾಣಿಜ್ಯ ಚಟುವಟಿಕೆಗಳು ಬಂದ್
- ಪಬ್, ಬಾರ್ ಅಂಡ್ ರೆಸ್ಟೋರೆಂಟ್
- ಫುಡ್ ಕೋರ್ಟ್, ಮೊಬೈಲ್ ಕ್ಯಾಂಟೀನ್
- ಮಾಲ್, ಹೋಟೆಲ್, ನೈಟ್ ಕ್ಲಬ್, ಥಿಯೇಟರ್, ನೈಟ್ ಪಾರ್ಟಿ ಹಾಗೂ ಜನರ ಸಂಚಾರ ಬಂದ್ ಇರಲಿದೆ.
ಯಾವುದಕ್ಕೆ ಅನುಮತಿ?
- ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗಳಿಗೆ ಅನುಮತಿ.
- ಹೋಮ್ ಡೆಲಿವರಿ, ಇ ಕಾಮರ್ಸ್ ಸಂಚಾರಕ್ಕೆ ಅನುಮತಿ.
- ಆಟೋ, ಕ್ಯಾಬ್ ಸಂಚಾರ ಇದ್ದು, ಅದು ಕೂಡ ಷರತ್ತುಬದ್ಧ.
- ಬಸ್ಗಳ ಸಂಚಾರ, ರೈಲು ಹಾಗೂ ವಿಮಾನ ಹಾರಾಟ ಇರಲಿದೆ.
ಇಂದಿನಿಂದ ಏಪ್ರಿಲ್ 20ವರಗೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಬೀದರ್, ಕಲಬುರಗಿ ಮತ್ತು ತುಮಕೂರಿನಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಓದಿ: ಕೊರೊನಾ ಕರ್ಫ್ಯೂ: ಅನವಶ್ಯಕವಾಗಿ ಓಡಾಡುವವರ ಮೇಲೆ ಪೊಲೀಸರ ಹದ್ದಿನ ಕಣ್ಣು!