ETV Bharat / state

ಮದ್ಯ ಖರೀದಿಗೆ ವಯಸ್ಸಿನ ಇಳಿಕೆ ಇಲ್ಲ: ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ

ಮದ್ಯ ಖರೀದಿ ವಯೋಮಿತಿಯನ್ನು 18 ವರ್ಷಕ್ಕಿಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Vidhana Soudha
ವಿಧಾನಸೌಧ
author img

By

Published : Jan 20, 2023, 6:56 AM IST

ಬೆಂಗಳೂರು: ಸಾರ್ವಜನಿಕ ವಲಯದಿಂದ ಭಾರಿ ವಿರೋಧ ಕಂಡುಬಂದ ಕಾರಣ ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಮದ್ಯ ಕೊಂಡುಕೊಳ್ಳಲು ಇದ್ದ 21 ವರ್ಷದ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸುವ ಕರ್ನಾಟಕ ಅಬಕಾರಿ (ಪರವಾನಿಗೆಯ ಸಾಮಾನ್ಯ ಷರತ್ತು-ತಿದ್ದುಪಡಿ) ನಿಯಮ 2023ರ ಕರಡು ಅಧಿಸೂಚನೆಯನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಅಬಕಾರಿ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.‌

ಕರ್ನಾಟಕ ಅಬಕಾರಿ ಅಧಿನಿಯಮ, 1965 ರ ಕಲಂ 36 (1) (ಜಿ) ಮತ್ತು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ 10 (1) (ಇ) ರಲ್ಲಿ ವಯಸ್ಸಿಗೆ ಸಂಬಂಧಿಸಿದಂತೆ ನಿರ್ದಿಷ್ಟಪಡಿಸಲಾಗಿರುವ ಅಂಶಗಳಲ್ಲಿ ಇರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ವಿವಿಧ ಕಾರ್ಯಕ್ಷಮತೆಗಳ ಬಗ್ಗೆ ಪರಿಶೀಲಿಸಲು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965 ಮತ್ತು ಅದರಡಿ ರಚಿಸಲಾಗಿರುವ ನಿಯಮಗಳಲ್ಲಿರುವ ಅನಗತ್ಯ ಅಂಶಗಳನ್ನು ಗುರುತಿಸಿ, ಕೈಬಿಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಉನ್ನತ ಮಟ್ಟದ ಸಮಿತಿಯ ಶಿಫಾರಸಿನಂತೆ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 10 (1) (ಇ)ಗೆ ತಿದ್ದುಪಡಿ ತಂದು ಈ ಹಿಂದೆ ಇದ್ದ ಇಪ್ಪತ್ತೊಂದು ವರ್ಷದ ವಯೋಮಿತಿಯನ್ನು 18 ವರ್ಷಕ್ಕೆ ಸಡಿಲಿಸುವ ಸಂಬಂಧ ಜ.9 ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು.

ಕರಡು ನಿಯಮಗಳ ಬಗ್ಗೆ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಲು 30 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಪ್ರಸ್ತಾಪಿಸಿರುವುದಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮಗಳಲ್ಲಿ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿ, ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ 10 (1) (ಇ) ರಲ್ಲಿ 'ಇಪ್ಪತ್ತೊಂದು ವರ್ಷಗಳು' ಎಂಬ ಪದಗಳ ಬದಲಾಗಿ 'ಹದಿನೆಂಟು ವರ್ಷಗಳು' ಎಂದು ಬದಲಾವಣೆ ಮಾಡಲು ಉದ್ದೇಶಿಸಿರುವ ಕರಡು ತಿದ್ದುಪಡಿ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ಯ ಖರೀದಿ ವಯಸ್ಸನ್ನು 18ಕ್ಕೆ ಇಳಿಸಲು ಮುಂದಾದ ಅಬಕಾರಿ ಇಲಾಖೆ

ಪ್ರಸುತ್ತ 21ಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿದೆ. 2015 ರ ಮುನ್ನ ರಾಜ್ಯದಲ್ಲಿ ಕುಡಿತದ ವಯಸ್ಸು 18 ಇತ್ತು. ಬಳಿಕ ಅದನ್ನು ತಿದ್ದುಪಡಿ ಮಾಡಿ ಕನಿಷ್ಠ ವಯೋಮಿತಿಯನ್ನು 21ಕ್ಕೆ ಏರಿಸಲಾಗಿತ್ತು. ಕರ್ನಾಟಕ ಅಬಕಾರಿ ಪರವಾನಿಗೆ (ಸಾಮನ್ಯ ಷರತ್ತು) ನಿಯಮ 1967ಕ್ಕೆ 2015ರಲ್ಲಿ ಕರ್ನಾಟಕ ಅಬಕಾರಿ ಇಲಾಖೆ ತಿದ್ದುಪಡಿ ತಂದು ಕುಡಿತದ ವಯಸ್ಸನ್ನು ಕನಿಷ್ಠ 18 ರಿಂದ 21 ವರ್ಷಕ್ಕೆ ಏರಿಕೆ ಮಾಡಿತ್ತು. ಅದರ ಪ್ರಕಾರ ಪಬ್, ಬಾರ್​ಗಳಲ್ಲಿ 21 ವರ್ಷಕ್ಕಿಂತ ಕಡಿಮೆ ಇರುವ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ.

ಇದನ್ನೂ ಓದಿ: ಮದ್ಯ ಸೇವನೆಗೆ ಆರೋಗ್ಯಕರ ಮಿತಿ ಇಲ್ಲ, ಕ್ಯಾನ್ಸರ್‌ ಕಟ್ಟಿಟ್ಟ ಬುತ್ತಿ: ವಿಶ್ವ ಆರೋಗ್ಯ ಸಂಸ್ಥೆ

ಆದರೂ ಈ ಕಾನೂನಿನ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳಲ್ಲೇ ಕನಿಷ್ಠ ವಯಸ್ಸಿನ ಬಗ್ಗೆ ಗೊಂದಲ ಇತ್ತು. ಬೆಂಗಳೂರಿನಲ್ಲಿ ಅನೇಕ ಯುವಕ, ಯುವತಿಯರು ವಯಸ್ಸು 21 ಆಗದಿದ್ದರೂ ಮದ್ಯ ಸೇವನೆ ಮಾಡುತ್ತಿದ್ದರು. ಹಲವು ಪಬ್, ಬಾರ್​ಗಳು ವಯಸ್ಸು 21 ಆಗದಿದ್ದರೂ ಯುವಕ, ಯುವತಿಯರಿಗೆ ಮದ್ಯ ಮಾರಾಟ ಮಾಡುತ್ತಿದ್ದರು. ಅನೇಕರು ಈ ಕುಡಿತದ ವಯಸ್ಸನ್ನು ಸಡಿಲಿಸುವಂತೆ ಒತ್ತಾಯಿಸುತ್ತಿದ್ದರು. ಈ ಗೊಂದಲ ನಿವಾರಣೆ ಸಂಬಂಧ ವಯೋಮಿತಿ ಸಡಿಲಿಸುವ ತಿದ್ದುಪಡಿ ನಿಯಮದ ಕರಡು ಅಧಿಸೂಚನೆ ಹೊರಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.