ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತೀ ಕಡಿಮೆ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಂದು 1,51,219 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ಈ ಪೈಕಿ 973 ಮಂದಿಗಷ್ಟೇ ಸೋಂಕು ದೃಢಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 29,48,228 ಕ್ಕೆ ಏರಿಕೆ ಕಂಡಿದೆ. 1,324 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 28,92,517 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಪಾಸಿಟಿವಿ ದರ 0.64 ರಷ್ಟಿದೆ. ವೈರಸ್ಗೆ ಇಂದು 15 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಸಾವಿನ ಸಂಖ್ಯೆ 37,293 ಕ್ಕೆ ಏರಿದೆ. ಸಾವಿನ ಪ್ರಮಾಣ 1.54% ರಷ್ಟಿದೆ.
ಇದನ್ನೂ ಓದಿ: ಭಾರತದಲ್ಲಿ COVID ರೂಪಾಂತರಗಳ 31,124 ಕೇಸ್ಗಳು ಪತ್ತೆ!
ಕೋವಿಡ್ ಇಳಿಕೆ ಕಂಡರೆ, ರೂಪಾಂತರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮೂವರಿಗೆ ಡೆಲ್ಟಾ, ಒಬ್ಬರಲ್ಲಿ ಕಪ್ಪಾ ಕಾಣಿಸಿಕೊಂಡಿದೆ.
ರೂಪಾಂತರ ವೈರಸ್ ಅಪ್ಡೇಟ್
1) ಡೆಲ್ಟಾ ( Delta/B.617.2) - 1,092
2) ಆಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1)-4
6) ಈಟಾ (ETA/B.1.525) - 1