ಬೆಂಗಳೂರು: ರಾಜ್ಯದಲ್ಲಿಂದು ಮತ್ತೆ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಆಗಿದೆ. ದಿನ 81 ಸೋಂಕಿತರು ಜನರು ಮೃತಪಟ್ಟಿದ್ದು, ಇದುವರೆಗಿನ ಸಾವಿನ ಸಂಖ್ಯೆ 39,137ಕ್ಕೆ ಏರಿದೆ.
1,63,320 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 20,505 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 38,44,338 ಏರಿಕೆ ಆಗಿದೆ. ಇತ್ತ 40,903 ಸೋಂಕಿತರು ಗುಣಮುಖರಾಗಿದ್ದು, ಈ ತನಕ 36,27,925 ಮಂದಿ ಚೇತರಿಸಿಕೊಂಡಂತಾಗಿದೆ.
ಸದ್ಯ 1,77,244 ಸಕ್ರಿಯ ಪ್ರಕರಣಗಳು ಇದ್ದು, ಇವತ್ತಿನ ಪಾಸಿಟಿವ್ ದರ ಶೇ. 12.55 ಹಾಗೂ ಸಾವಿನ ದರ ಶೇ. 0.39ರಷ್ಟಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇಂದು ವಿಮಾನ ನಿಲ್ದಾಣದಿಂದ 934 ಮಂದಿ ಆಗಮಿಸಿದ್ದು, ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. 435 ಜನರು ಹೈರಿಸ್ಕ್ ದೇಶಗಳಿಂದ ಬಂದಿಳಿದಿದ್ದಾರೆ.
ಬೆಂಗಳೂರು ಕೋವಿಡ್: ರಾಜಧಾನಿಯಲ್ಲಿ 8850 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,36,425ಕ್ಕೆ ಏರಿದೆ. 21,493 ಜನರು ಡಿಸ್ಜಾರ್ಜ್ ಆಗಿದ್ದು, ಇಲ್ಲಿಯವರೆಗೆ 16,27,340 ಗುಣಮುಖರಾಗಿದ್ದಾರೆ. ಇಂದು 13 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,625ರಷ್ಟಿದೆ. ಸದ್ಯ ಲಕ್ಷದಲ್ಲಿದ್ದ ಸಕ್ರಿಯ ಪ್ರಕರಣಗಳು 92,469 ಇಳಿಕೆ ಕಂಡಿದೆ.
ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನೇಜ್ - 4,431
- ಇತರೆ - 286
- ಒಮಿಕ್ರಾನ್ - 1,115
ಇದನ್ನೂ ಓದಿ: ಬಿಎಸ್‌ವೈ ಯುಗ ಅಂತ್ಯವಾಗಿದೆ, ಇನ್ನೂ ಮೂರ್ನಾಲ್ಕು ಜನರ ಯುಗ ಮುಗಿಯಲಿದೆ : ಶಾಸಕ ಯತ್ನಾಳ್