ETV Bharat / state

ರಾಜ್ಯದಲ್ಲಿಂದು 50,210 ಕೊರೊನಾ ಪಾಸಿಟಿವ್.. 165 ಜನರಿಗೆ ವಕ್ಕರಿಸಿದ ಒಮಿಕ್ರಾನ್‌ - ಇಂದಿನ ಕೊರೊನಾ ಪ್ರಕರಣ

Karnataka Covid Report: ಇಂದು ಹೊಸದಾಗಿ 50,210 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 22,842 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ಧಾರೆ. ಅಲ್ಲದೆ, ಬೆಂಗಳೂರಿನಲ್ಲಿ 165 ಜನರಿಗೆ ಒಮಿಕ್ರಾನ್‌ ಸೋಂಕು ತಗುಲಿದೆ.

karnataka covid report today
ರಾಜ್ಯದಲ್ಲಿಂದು 50,210 ಜನರಿಗೆ ಕೊರೊನಾ ಪಾಸಿಟಿವ್
author img

By

Published : Jan 23, 2022, 7:15 PM IST

Updated : Jan 23, 2022, 8:20 PM IST

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 50,210 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 19 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 35,17,682ಕ್ಕೆ ಏರಿಕೆ ಕಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು 2,20,459 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 3,57,796ಕ್ಕೆ ತಲುಪಿದೆ. 22,842 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ ಪಾಸಿಟಿವ್ ಪ್ರಮಾಣ ಶೇ. 22.77ರಷ್ಟಿದ್ದರೆ, ಸಾವಿನ ದರವು ಶೇ. 0.03 ಇದೆ. ವಿಮಾನ ನಿಲ್ದಾಣದಿಂದ 861 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶಗಳಿಂದ 352 ಮಂದಿ ಬಂದಿಳಿದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜಧಾನಿ ಬೆಂಗಳೂರಿನಲ್ಲಿ 26,299 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 15,85,657ಕ್ಕೆ ಏರಿದೆ. 12,787 ಜನರು ಗುಣಮುಖರಾಗಿದ್ದಾರೆ. ಅಲ್ಲದೆ, ಇಂದು 8 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,498ಕ್ಕೆ ತಲುಪಿದೆ. ಸದ್ಯ ನಗರದಲ್ಲಿ 2,31,833 ಸಕ್ರಿಯ ಪ್ರಕರಣಗಳಿವೆ.

karnataka covid report today
ಜಿಲ್ಲಾವಾರು ಸೋಂಕಿತರ ಮಾಹಿತಿ

ರೂಪಾಂತರಿ ಮಾಹಿತಿ:

  • ಅಲ್ಪಾ - 156
  • ಬೀಟಾ - 08
  • ಡೆಲ್ಟಾ - 2,956
  • ಡೆಲ್ಟಾ ಸಬ್ ಲೈನೇಜ್ - 1,372
  • ಕಪ್ಪಾ - 160
  • ಈಟಾ - 01
  • ಒಮಿಕ್ರಾನ್ - 931

165 ಮಂದಿಗೆ ಒಮಿಕ್ರಾನ್ : ಇಂದು ಬೆಂಗಳೂರಿನಲ್ಲಿ 165 ಜನರಲ್ಲಿ ಒಮಿಕ್ರಾನ್‌ ಸೋಂಕು ಪತ್ತೆಯಾಗಿದ್ದು, ಈ ರೂಪಾಂತರಿ ಸೋಂಕಿತರ ಸಂಖ್ಯೆ 931ಕ್ಕೆ ಏರಿದೆ. ಹೈ ರಿಸ್ಕ್ ದೇಶಗಳಿಂದ ಬಂದವರಲ್ಲೇ ರೂಪಾಂತರಿ ಪತ್ತೆಯಾಗುತ್ತಿದ್ದು, ಹೆಚ್ಚು ಮುಂಜಾಗ್ರತೆ ವಹಿಸಬೇಕಿದೆ.

ಇದನ್ನೂ ಓದಿ: ಎರಡನೇ ಬಾರಿ ಕೊರೊನಾಗೆ ತುತ್ತಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Last Updated : Jan 23, 2022, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.