ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 48,049 ಹೊಸ ಸೋಂಕಿತ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು ಕೋವಿಡ್ನಿಂದ 22 ಮಂದಿ ಸಾವನ್ನಪ್ಪಿದ್ದು, ಇಂದಿನ ಪಾಸಿಟಿವಿಟಿ ದರ ಶೇ. 19.23 ಹಾಗೂ ಸಾವಿನ ಪ್ರಮಾಣ 0.04%ರಷ್ಟಿದೆ. ಇಂದು 2,49,832 ಜನರು ಪರೀಕ್ಷೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಹತ್ಯೆಗೆ ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಉಳಿಸಿಕೊಂಡ ತೆಲಂಗಾಣದ ದಿಟ್ಟ ಮಹಿಳೆ!
ಬೆಂಗಳೂರಿನಲ್ಲೇ 29,068 ಮಂದಿಗೆ ವೈರಸ್ ತಗುಲಿದ್ದು, ರಾಜಧಾನಿಯಲ್ಲಿ 06 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯಾದ್ಯಂತ 3,23,143 ಹಾಗೂ ಬೆಂಗಳೂರಲ್ಲಿ 2 ಲಕ್ಷ 23 ಸಾವಿರ ಸಕ್ರಿಯ ಪ್ರಕರಣಗಳಿವೆ.
ವಿಮಾನ ನಿಲ್ದಾಣದಿಂದ 702 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶದಿಂದ 80 ಜನರು ಬಂದಿಳಿದಿದ್ದಾರೆ.
ರೂಪಾಂತರಿ ಮಾಹಿತಿ:
ಅಲ್ಪಾ - 156
ಬೇಟಾ - 08
ಡೆಲ್ಟಾ - 2956
ಡೆಲ್ಟಾ ಸಬ್ ಲೈನೇಜ್ - 1372
ಕಪ್ಪಾ - 160
ಈಟಾ - 01
ಒಮಿಕ್ರಾನ್ - 766
ಬೆಂಗಳೂರಿನಲ್ಲೇ 29,068 ಮಂದಿಗೆ ವೈರಸ್ ತಗುಲಿದ್ದು, ರಾಜಧಾನಿಯಲ್ಲಿ 06 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯಾದ್ಯಂತ 3,23,143 ಹಾಗೂ ಬೆಂಗಳೂರಲ್ಲಿ 2 ಲಕ್ಷ 23 ಸಾವಿರ ಸಕ್ರಿಯ ಪ್ರಕರಣಗಳಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ