ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ. ಹೊಸದಾಗಿ 27,156 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ
ಇಂದು 2,17,998 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 2 ಲಕ್ಷ ದಾಟಿದೆ. ಒಟ್ಟೂ ಈವರೆಗಿನ ಸೋಂಕಿತರ ಸಂಖ್ಯೆಯು 32,47,243ಕ್ಕೆ ತಲುಪಿದೆ.
7,827 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ತನಕ 29,91,472 ಮಂದಿ ಚೇತರಿಕೆ ಕಂಡಿದ್ದಾರೆ. ಇಂದು 14 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,445 ಏರಿದೆ. ಸದ್ಯ 2,17, 297 ಸಕ್ರಿಯ ಪ್ರಕರಣಗಳಿವೆ.
-
ಇಂದಿನ 17/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/spgeOcG8nZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/LXHC80MRrn
— K'taka Health Dept (@DHFWKA) January 17, 2022 " class="align-text-top noRightClick twitterSection" data="
">ಇಂದಿನ 17/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/spgeOcG8nZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/LXHC80MRrn
— K'taka Health Dept (@DHFWKA) January 17, 2022ಇಂದಿನ 17/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/spgeOcG8nZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/LXHC80MRrn
— K'taka Health Dept (@DHFWKA) January 17, 2022
ಇವತ್ತಿನ ಪಾಸಿಟಿವಿಟಿ ಪ್ರಮಾಣವು ಶೇ. 12.55ಕ್ಕೆ ಇಳಿದಿದ್ದು, ಸಾವಿನ ಪ್ರಮಾಣ ಶೇ. 0.05ರಷ್ಟಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ 1,081 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶಗಳಿಂದ 565 ಪ್ರಯಾಣಿಕರು ಬಂದಿಳಿದಿದ್ದಾರೆ.
ಬೆಂಗಳೂರು ಕೋವಿಡ್:
ರಾಜಧಾನಿ ಬೆಂಗಳೂರಿನಲ್ಲಿ 15,947 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 14,32,754ಕ್ಕೆ ತಲುಪಿದೆ. ಇಂದು 4,888 ಜನರು ಗುಣಮುಖರಾಗಿದ್ದು, ಇಲ್ಲಿಯವವರೆಗೆ 12,59,041 ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ. ಐವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,458 ಆಗಿದೆ. ನಗರದಲ್ಲಿ 1,57,254 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ:
ಅಲ್ಪಾ - 156
ಬೀಟಾ - 08
ಡೆಲ್ಟಾ - 2956
ಡೆಲ್ಟಾ ಸಬ್ ಲೈನ್ ಏಜ್ - 1,372
ಕಪ್ಪಾ - 160
ಈಟಾ - 01
ಒಮಿಕ್ರಾನ್ - 766
ಜಿಲ್ಲಾವಾರು ಮಾಹಿತಿ
- ಜಿಲ್ಲೆ - ಸೋಂಕಿತರ ಸಂಖ್ಯೆ, ಸಾವು
- ಬಾಗಲಕೋಟೆ - 82
- ಬಳ್ಳಾರಿ - 560
- ಬೆಳಗಾವಿ - 294
- ಬೆಂಗಳೂರು ಗ್ರಾಮಾಂತರ - 538
- ಬೆಂಗಳೂರು ನಗರ - 15,947 - 05 ಸಾವು
- ಬೀದರ್ - 75
- ಚಾಮರಾಜನಗರ - 101
- ಚಿಕ್ಬಳ್ಳಾಪುರ - 208 - 1 ಸಾವು
- ಚಿಕ್ಕಮಗಳೂರು - 236
- ಚಿತ್ರದುರ್ಗ - 178 - 1 ಸಾವು
- ದಕ್ಷಿಣ ಕನ್ನಡ - 490 - 3 ಸಾವು
- ದಾವಣಗೆರೆ - 121
- ಧಾರವಾಡ - 784-1 ಸಾವು
- ಗದಗ - 71
- ಹಾಸನ - 1,050
- ಹಾವೇರಿ - 27
- ಕಲಬುರಗಿ - 479 - 1 ಸಾವು
- ಕೊಡಗು - 137
- ಕೋಲಾರ - 463
- ಕೊಪ್ಪಳ - 89
- ಮಂಡ್ಯ - 917
- ಮೈಸೂರು - 1,770
- ರಾಯಚೂರು - 140
- ರಾಮನಗರ - 96 - 1 ಸಾವು
- ಶಿವಮೊಗ್ಗ - 364
- ತುಮಕೂರು - 1,147 - 1 ಸಾವು
- ಉಡುಪಿ - 442
- ಉತ್ತರಕನ್ನಡ - 203
- ವಿಜಯಪುರ - 128
- ಯಾದಗಿರಿ - 18
ಇದನ್ನೂ ಓದಿ: ವೈದ್ಯರು, ಸಿಬ್ಬಂದಿಗೇ ಕೊರೊನಾ ಸಂಕಷ್ಟ.. ಕಾಡಲಿದೆಯಾ ವೈದ್ಯಕೀಯ ಸೌಲಭ್ಯ ಕೊರತೆ?