ಬೆಂಗಳೂರು: ರಾಜ್ಯದಲ್ಲಿಂದು 24,741 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 639 ಮಂದಿಗೆ ಸೋಂಕು ದೃಢಪಟ್ಟಿದೆ. 967 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 6,445.
ಸೋಂಕಿತರ ಪ್ರಮಾಣ ಶೇ. 2.58 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 4.19 ಇದೆ. ವಾರದ ಸಾವಿನ ಪ್ರಮಾಣ ಶೇ. 0.33.
ವಿಮಾನ ನಿಲ್ದಾಣದಿಂದ 2,642 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 281 ಮಂದಿಗೆ ಕೋವಿಡ್ ತಗುಲಿದೆ. 524 ಮಂದಿ ಬಿಡುಗಡೆಯಾಗಿದ್ದಾರೆ. 4,190 ಸಕ್ರಿಯ ಪ್ರಕರಣಗಳಿವೆ.