ETV Bharat / state

ರಾಜ್ಯದಲ್ಲಿ ಇಂದು 648 ಮಂದಿಗೆ ಕೊರೊನಾ ಸೋಂಕು ದೃಢ; ಓರ್ವ ಸಾವು

author img

By

Published : Jun 15, 2022, 9:55 PM IST

ರಾಜ್ಯದ ಇಂದಿನ ಕೋವಿಡ್ ಬುಲೆಟಿನ್ ಹೀಗಿದೆ..

ರಾಜ್ಯದಲ್ಲಿ ಇಂದು 648 ಮಂದಿಗೆ ಕೊರೊನಾ ಸೋಂಕು ದೃಢ; ಓರ್ವ ಸಾವು
ರಾಜ್ಯದಲ್ಲಿ ಇಂದು 648 ಮಂದಿಗೆ ಕೊರೊನಾ ಸೋಂಕು ದೃಢ; ಓರ್ವ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 23,452 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 648 ಮಂದಿಗೆ ಸೋಂಕು ದೃಢಪಟ್ಟಿದೆ. 532 ಮಂದಿ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 39,13,885 ಮಂದಿ ಗುಣಮುಖರಾಗಿದ್ದಾರೆ. ಇಂದು ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳು 3,997 ರಷ್ಟಿವೆ. ಸೋಂಕಿತರ ಪ್ರಮಾಣ ಶೇ.2.76 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 2.44 ರಷ್ಟಿದೆ. ಇಲ್ಲಿಯವರೆಗೂ ಪರೀಕ್ಷಿಸಲಾದ ಒಟ್ಟು ಸಂಖ್ಯೆ 66,6,62,873. ವಾರದ ಸಾವಿನ ಪ್ರಮಾಣ ಶೇ. 0.02 ಇದೆ.

ವಿಮಾನ ನಿಲ್ದಾಣದಿಂದ 9,150 ತಪಾಸಣೆಗೆ ಒಳಗಾಗಿದ್ದು, ಇದುವರೆಗೂ 10,59,925 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 615 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,93, 337 ಕ್ಕೇರಿದೆ. ಇಂದು 509 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,72,528 ಮಂದಿ ಡಿಸ್ಚಾರ್ಜ್​​ ಆಗಿದ್ದಾರೆ.

ನಗರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗಿನ ಕೋವಿಡ್ ಸಾವಿನ ಸಂಖ್ಯೆ 16,965. ಸಕ್ರಿಯ ಪ್ರಕರಣಗಳು 3,843 ಇವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.