ETV Bharat / state

ರಾಜ್ಯದಲ್ಲಿಂದು 1,325 ಮಂದಿಗೆ ತಗುಲಿದ ಕೊರೊನಾ: 12 ಮಂದಿ ಬಲಿ! - ಕರ್ನಾಟಕದಲ್ಲಿ 1325 ಮಂದಿಗೆ ಸೋಂಕು ದೃಢ

ರಾಜ್ಯದಲ್ಲಿಂದು 1,325 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,91,685ಕ್ಕೆ ಏರಿಕೆ ಆಗಿದೆ. ಕೊರೊನಾಗೆ ಇಂದು 12 ಮಂದಿ ಸೋಂಕಿತರು ಬಲಿಯಾಗಿದ್ದಾರೆ.

karnataka  corona report
ರಾಜ್ಯದಲ್ಲಿಂದು 1325 ಮಂದಿಗೆ ಸೋಂಕು ದೃಢ : 12 ಸೋಂಕಿತರು ಕೋವಿಡ್​ಗೆ ಬಲಿ!
author img

By

Published : Dec 5, 2020, 8:35 PM IST

ಬೆಂಗಳೂರು: ರಾಜ್ಯದಲ್ಲಿಂದು 1,325 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,91,685ಕ್ಕೆ ಏರಿಕೆ ಆಗಿದೆ. ಕೊರೊನಾಗೆ 12 ಮಂದಿ ಸೋಂಕಿತರು ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,846ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 1.27ರಷ್ಟು ಹಾಗೂ ಸಾವಿನ ಪ್ರಮಾಣ ಶೇ 0.90ರಷ್ಟು ಇದೆ.

‌ಕೊರೊನಾದಿಂದ 1400 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,54,861 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 278 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದು, ರಾಜ್ಯದಲ್ಲಿ ಸದ್ಯ 24,959 ಸಕ್ರಿಯ ಪ್ರಕರಣಗಳು ಇವೆ. ಕಳೆದ 7 ದಿನಗಳಲ್ಲಿ 26,644 ಜನರು ಹೋಂ ಕ್ವಾರಂಟೈನ್​​ನಲ್ಲಿ ಇದ್ದಾರೆ. ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 1,07,536, ದ್ವಿತೀಯ ಸಂಪರ್ಕದಲ್ಲಿ 1,20,742 ಜನರು ಇದ್ದಾರೆ. ವಿಮಾನ ನಿಲ್ದಾಣದಿಂದ 1327 ಪ್ರಯಾಣಿಕರು ಬಂದಿದ್ದು, ಕೋವಿಡ್ ತಪಾಸಣೆಗೊಳಪಟ್ಟಿದ್ದಾರೆ.

ಕೋವಿಡ್ ವಾರ್ ರೂಂ ಜವಾಬ್ದಾರಿಯೊಂದಿಗೆ ವ್ಯಾಕ್ಸಿನೇಷನ್‌ ಕಂಟ್ರೋಲ್ ರೂಂ ಆಗಿ ಕಾರ್ಯನಿರ್ವಹಣೆ

ರಾಜ್ಯದಲ್ಲಿ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಸೋಂಕಿತರಿಗೆ ಚಿಕಿತ್ಸಾ/ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸುವಲ್ಲಿ ಸಮನ್ವಯ ಸಾಧಿಸಲು ಹಾಗೂ ಜಿಲ್ಲೆಗಳಿಂದ ಮಾಹಿತಿ ಪಡೆದು ಕ್ರೋಢೀಕರಿಸುವ ಕುರಿತು ರಾಜ್ಯಮಟ್ಟದಲ್ಲಿ, ಬೆಂಗಳೂರು ನಗರ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್-19 ವಾರ್ ರೂಂ(WAR ROOM)ಗಳನ್ನು ಸ್ಥಾಪಿಸಲಾಗಿತ್ತು.

ಕೋವಿಡ್ ಹರಡುವಿಕೆಯನ್ನು ಸಮಪರ್ಕವಾಗಿ ನಿಭಾಯಿಸಿದ ಬೆನ್ನಲ್ಲೇ ಕೋವಿಡ್ ಪ್ರತಿರೋಧಕ ಚುಚ್ಚುಮದ್ದು ನೀಡುವ ಅಭಿಯಾನವನ್ನು ಸದ್ಯದಲ್ಲಿಯೇ ಕಾರ್ಯಗತಗೊಳಿಸಬೇಕಾಗಿದೆ. ಕೋವಿಡ್ ಸಮನ್ವಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೋವಿಡ್ ವಾರ್ ರೂಂ ಜವಾಬ್ದಾರಿಯ ಜೊತೆಗೆ ಜೊತೆಗೆ ಪ್ರತಿರೋಧಕ ಚುಚ್ಚುಮದ್ದು ಕಾರ್ಯಾಚರಣೆಯನ್ನು ಕೂಡ ಕೈಗೆತ್ತಿಕೊಂಡು ಸಮನ್ವಯ ಸಾಧಿಸಲು ಅವುಗಳನ್ನು vaccination control room ಆಗಿಯೂ ಕೂಡ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.