ETV Bharat / state

ಮೇ 2ನೇ ವಾರ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ : ಯಾರ್ಯಾರು ಆಗ್ತಾರೆ ಅಂದರ್‌-ಬಾಹರ್‌!?

ಪ್ರಧಾನಿ ನರೇಂದ್ರ ಮೋದಿ ಮೇ 5ರಂದು ದೇಶಕ್ಕೆ ಮರಳಲಿದ್ದಾರೆ. ಹಾಗಾಗಿ, ಮೇ 2ನೇ ವಾರವೇ ರಾಜ್ಯ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ದೆಹಲಿಯಲ್ಲೇ ಹೈಕಮಾಂಡ್ ನಾಯಕರು ಮಹತ್ವದ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ..

karnataka-cabinet-may-expansion-or-reshuffle-on-may-6
ಮೇ 6ಕ್ಕೆ ರಾಜ್ಯ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ
author img

By

Published : May 4, 2022, 7:45 PM IST

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ. ಸಂಪುಟ ವಿಚಾರ ಮಾತ್ರ ದೆಹಲಿ ಅಂಗಳ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಯಲಿದೆ. ಮೂಲಗಳ ಪ್ರಕಾರ ಮೇ 2ನೇ ವಾರ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದರೂ ಸಚಿವ ಸಂಪುಟ ವಿಷಯದಲ್ಲಿನ ಸಸ್ಪೆನ್ಸ್ ಹಾಗೆಯೇ ಉಳಿದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕಾರಣ ಎನ್ನಲಾಗಿದೆ. ಮೋದಿ ಮೇ 5ರಂದು ದೇಶಕ್ಕೆ ಮರಳಲಿದ್ದಾರೆ. ಹಾಗಾಗಿ, ಮೇ 2ನೇ ವಾರದಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ದೆಹಲಿಯಲ್ಲೇ ಹೈಕಮಾಂಡ್ ನಾಯಕರು ಮಹತ್ವದ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಚುನಾವಣಾ ಕ್ಯಾಬಿನೆಟ್ ರಚನೆಯಾಗಲಿದೆ. ಇದಕ್ಕಾಗಿ ಎರಡು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬದಲಾಯಿಸಿ ಸಂಪೂರ್ಣ ಕ್ಯಾಬಿನೆಟ್ ಪುನಾರಚನೆ ಮಾಡುವುದು ಒಂದು ಆಯ್ಕೆಯಾದರೆ, ಮತ್ತೊಂದು ಆಯ್ಕೆ ಮುಖ್ಯಮಂತ್ರಿಯನ್ನು ಉಳಿಸಿಕೊಂಡು ಕೆಲವರನ್ನು ಕೈಬಿಟ್ಟು ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳುವುದಾಗಿದೆ. ಇವೆರಡೂ ಬೇಡ ಅನ್ನಿಸಿದಲ್ಲಿ ಖಾಲಿ ಇರುವ ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನ ಭರ್ತಿ ಮಾಡಿ, ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

  • ಸಂಪುಟದಲ್ಲಿ ಯಾರಿಗೆಲ್ಲ ಅವಕಾಶ:
  1. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
  2. ಬೆಳಗಾವಿ ರಮೇಶ್ ಜಾರಕಿಹೊಳಿ
  3. ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ
  4. ಕುಡುಚಿ ಶಾಸಕ ಪಿ. ರಾಜೀವ್
  5. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ
  6. ಕೃಷ್ಣರಾಜ ಶಾಸಕ ಎಸ್.ಎ ರಾಮದಾಸ್
  7. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್
  8. ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ
  9. ಸುರಪುರ ಶಾಸಕ ರಾಜೂಗೌಡ
  10. ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ
  11. ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್
  • ಯಾರಿಗೆ ಕೊಕ್ ಸಾಧ್ಯತೆ :
  1. ಹಿರಿಯ ಸಚಿವ ಮುರುಗೇಶ್ ನಿರಾಣಿ ಅಥವಾ ಸಿ.ಸಿ ಪಾಟೀಲ್
  2. ಪ್ರಭು ಚೌಹಾಣ್
  3. ಕೋಟ ಶ್ರೀನಿವಾಸ ಪೂಜಾರಿ
  4. ಬಿ.ಸಿ ಪಾಟೀಲ್

ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಯಾದರೆ ದೊಡ್ಡ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಖಾಲಿ ಇರುವುದು ಕೇವಲ ಐದು ಸ್ಥಾನ. ಆದರೆ, ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಪುನಾರಚನೆ ಬದಲು ಕೇವಲ ವಿಸ್ತರಣೆಯಾದರೆ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ ಯೋಗೇಶ್ವರ್, ಬಿ.ವೈ ವಿಜಯೇಂದ್ರರನ್ನು ಸೇರಿಸಿಕೊಂಡು ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ: ಡಿಕೆಶಿ ಭ್ರಷ್ಟಾಚಾರಕ್ಕೆ ಹೆಸರುವಾಸಿ, ಜೈಲಿಗೆ ಹೋಗಿದ್ದ ವ್ಯಕ್ತಿ : ಭ್ರಷ್ಟ ಸಚಿವ ಹೇಳಿಕೆಗೆ ಅಶ್ವತ್ಥ್ ನಾರಾಯಣ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.