ಬೆಂಗಳೂರು: ಜಗತ್ತನ್ನು ಕಾಡಿದ ಮಹಾಮಾರಿ ಕೊರೊನಾ ಸಾಂಕ್ರಾಮಿಕ ತಂದೊಡ್ದಿದ ಕಠಿಣ ಸವಾಲು ಹಾಗೂ ಪ್ರಾಕೃತಿಕ ವಿಕೋಪದಂತಹ ಸರಣಿ ಸಮಸ್ಯೆಗಳು ಕರ್ನಾಟಕದ ಆರ್ಥಿಕತೆಯ ತಳಪಾಯವನ್ನೇ ಅಲುಗಾಡಿಸಿದವು. ಇಂತಹ ಜಟಿಲತೆಯ ನಡುವೆಯೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ 8ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ.
ರೈಲ್ವೆ ಯೋಜನೆಗಳಿಗೆ 3,991 ಕೋಟಿ ರೂಪಾಯಿ ಅನುದಾನ, ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕಾಗಿ 2,260 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ ರೂ., ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ. ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ. ಘೋಷಣೆ ಮಾಡಲಾಗಿದೆ.
ಓದಿ : ಮಹಿಳಾ ದಿನಕ್ಕೆ ಗುಡ್ ನ್ಯೂಸ್: ಮಹಿಳೆಯರಿಗೆ ಶೇ.4ರಷ್ಟು ಬಡ್ಡಿದರದಲ್ಲಿ 2 ಕೋಟಿ ರೂ.ವರೆಗೆ ಸಾಲ
ರಾಜ್ಯದಲ್ಲಿ ಹೊಸದಾಗಿ 52 ಬಸ್ ಸ್ಟ್ಯಾಂಡ್‌ಗಳನ್ನು ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಉಪನಗರ ರೈಲು ಯೋಜನೆಗೆ ಸಾವಿರಾರು ಕೋಟಿ ರೂ. ಮಿಸಲಿಡಲಾಗಿದೆ.