ETV Bharat / state

ಬಿಎಸ್​ವೈ ಬಜೆಟ್​ನಲ್ಲಿ ಕೃಷಿಗೆ ಬಂಪರ್​... ವಿವಿಧ ಯೋಜನೆಗಳಿಗೆ ಕೋಟಿ ಕೋಟಿ ರೂ. ಘೋಷಣೆ - ರ್ನಾಟಕ ಬಜೆಟ್ 2021-22

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಡನೆ ಮಾಡಿರುವ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಟ್ಟು 31.028 ಕೋಟಿ ರೂ ಅನುದಾನ ನೀಡಿದ್ದಾರೆ.

Karnataka budget
Karnataka budget
author img

By

Published : Mar 8, 2021, 1:47 PM IST

Updated : Mar 8, 2021, 6:43 PM IST

ಬೆಂಗಳೂರು: ಮುಖ್ಯಮಂತ್ರಿ ಬಿಎಸ್​ವೈ ಮಂಡನೆ ಮಾಡಿರುವ 2021-22ನೇ ಸಾಲಿನ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, 2021-22ನೇ ಸಾಲಿನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗಾಗಿ ಒಟ್ಟಾರೆ 31.028 ಕೋಟಿ ರೂ ಅನುದಾನ ನೀಡಲಾಗಿದೆ. 2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಿ, ಉತ್ತಮ ಗುಣಮಟ್ಟದ ಕೃಷಿ ಬೀಜ ನೀಡಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್​​

75 ಕೋಟಿ ರೂ ವೆಚ್ಚದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ

  • 100 ಮಹಿಳಾ ಸ್ವ ಸಹಾಯ ಸಂಘ ಉತ್ಪನ್ನಗಳಿಗೆ ಮಾರುಕಟ್ಟೆ

ಪ್ರಧಾನಿ ಮಂತ್ರಿ ಮತ್ಸ್ಯ ಸಂಪ್ರದಾ ಯೋಜನೆಗೆ 62 ಕೋಟಿ ರೂ

  • ಕೃಷಿ ಅಭಿವೃದ್ಧಿ ವಿವಿಧ ಯೋಜನೆಗಳಿಗೆ ಘೋಷಣೆ
  • ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ
  • ಸಾವಯವ ಇಂಗಾಲ ಹೆಚ್ಚಿಸುವ ಗೊಬ್ಬರ ವಿತರಣೆಗೆ ಕ್ರಮ

ಇದನ್ನೂ ಓದಿ: ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ, ಬಜೆಟ್ ಮಂಡನೆಗೆ ವಿಪಕ್ಷಗಳ ಅಡ್ಡಿ, ಸಭಾತ್ಯಾಗ!

ಗೊಬ್ಬರ ವಿತರಣೆಗೆ 10 ಕೋಟಿ ರೂ ಅನುದಾನ

  • ಪ್ರತಿಜಿಲ್ಲೆಯಲ್ಲೂ ಗೋಶಾಲೆ ನಿರ್ಮಾಣ

ಕಿರು ಆಹಾರ ಸಂಸ್ಕರಣೆ ಉದ್ಯಮಕ್ಕೆ 50 ಕೋಟಿ

  • ಜಿಲ್ಲೆಗೊಂದು ಗೋಶಾಲೆ, ದೇಸಿ ತಳಿ ಅಭಿವೃದ್ಧಿಗೆ ಒತ್ತು
  • ಗೋಹತ್ಯೆ ತಡೆಯೋದಕ್ಕೆ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಾಣ, ದೇಸಿ ಜಾನುವಾರು, ಕುರಿ, ಮೇಕೆ, ಕುಕ್ಕುಟ ತಳಿಗಳ ಅಭಿವೃದ್ಧಿಗೆ ಕ್ರಮ
  • ಹೂವು, ಅರಿಶಿನ, ಮೆಣಸಿನಕಾಯಿ ಮಾರುಕಟ್ಟೆಗೆ ಅನುದಾನ

ಎಪಿಎಂಸಿ ಕಾರ್ಯಕ್ಷಮತೆ ಹೆಚ್ಚಳಕ್ಕೆ 198 ಕೋಟಿ ರೂ ನೀಡಲು ನಿರ್ಧಾರ

  • ಬೈಯಪ್ಪನಹಳ್ಳಿಯ 8 ಎಕರೆ ಜಮೀನಿನಲ್ಲಿ ಹೂವಿನ ಮಾರುಕಟ್ಟೆಗೆ 500 ಕೋಟಿ ರೂ.
  • ಮಹದಾಯಿ: ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ 1,677 ಕೋಟಿ ರೂ. ಅನುದಾನ

ಕೃಷ್ಣ ಭಾಗ್ಯ ಜಲ ನಿಗಮ 5,600 ಕೋಟಿ ರೂ. ಅನುದಾನ

  • ಸಾವಯವ ಕೃಷಿ ಉತ್ತೇಜನ ಮಾಡಲು 500 ಕೋಟಿ ರೂ. ಅನುದಾನ
  • ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ
  • ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್​ಗಳಿಗೆ ಸಹಾಯ ಧನ
  • ಅಡಿಕೆಗೆ ಬಾಧಿಸುತ್ತಿರುವ ಹಳದಿ ಎಲೆ ರೋಗ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಿಸಲು 25 ಕೋಟಿ ರೂ.
  • ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ ರೂ. ಅನುದಾನ

ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ

  • ಖಾಸಗಿ ಸಹಭಾಗಿತ್ವದಲ್ಲಿ ಬಳ್ಳಾರಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ, ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ.
  • ಪ್ರತಿ ಜಿಲ್ಲೆಗೆ ಒಂದು ಗೋ ಶಾಲೆ, ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ, ಚಾಮರಾಜನಗರದಲ್ಲಿ ಅರಿಶಿಣ ಮಾರುಕಟ್ಟೆ.
  • ಬ್ಯಾಡಗಿ ಮೆಣಸಿನಕಾಯಿಗಾಗಿ ಗುಣ ವಿಶ್ಲೇಷಣಾ ಘಟಕ ಸ್ಥಾಪನೆ, ಸಾವಯವ ಕೃಷಿಗೆ 500 ಕೋಟಿ ರೂಪಾಯಿ, ಸಿಂಗೇನ ಅಗ್ರಹಾರದಲ್ಲಿ ತರಕಾರಿ ಮಾರುಕಟ್ಟೆ, ಗೋದಾಮು ಮತ್ತು ಅಂಗಡಿ ನಿರ್ಮಾಣಕ್ಕೆ ಅನುದಾನ
  • ಹಸಿರೆಲೆ ಗೊಬ್ಬರಕ್ಕೆ 10 ಕೋಟಿ, ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಿಕೆ ಪರಿಹಾರ ಬೆಲೆ ಪ್ರೋತ್ಸಾಹಕ್ಕೆ 25 ಕೋಟಿ ರೂಪಾಯಿ

Last Updated : Mar 8, 2021, 6:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.