ETV Bharat / state

ಬಿಜೆಪಿ‌ ಸರ್ಕಾರ ಸುಭದ್ರ, ಯಾರು ಏನೂ ಮಾಡಲು ಸಾಧ್ಯವಿಲ್ಲ: ಡಿಸಿಎಂ ಅಶ್ವತ್ಥ್​ ನಾರಾಯಣ್ - ಡಿಸಿಎಂ ಅಶ್ವತ್ಥ್​ ನಾರಾಯಣ್

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಯಾವ ತೊಂದರೆಯೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

Karnataka bjp government is safe,ಅಶ್ವತ್ಥ್​ ನಾರಾಯಣ್
ಅಶ್ವತ್ಥ್​ ನಾರಾಯಣ್
author img

By

Published : Mar 7, 2020, 9:20 PM IST

Updated : Mar 7, 2020, 9:56 PM IST

ಬೆಂಗಳೂರು: ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ಉರುಳಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎನ್ನುವುದು ಕೇವಲ ವದಂತಿ ಮಾತ್ರ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಯಾವ ತೊಂದರೆಯೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ‌ ಕಚೇರಿಗೆ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್ ಭೇಟಿ ನೀಡಿದರು. ಪಕ್ಷದ ಸೂಚನೆಯಂತೆ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದ ಅವರು, ಸರ್ಕಾರದ ಪತನಕ್ಕೆ ಯೋಗೇಶ್ವರ್ ಪ್ರಯತ್ನ ಎಂಬ ವಿಚಾರ ಸತ್ಯಕ್ಕೆ ದೂರ. ಅವರು ನಮ್ಮ ಪಕ್ಷದವರಾಗಿದ್ದು, ಯಾರೂ ಇಂತಹ ಕೆಲಸ ಮಾಡಲ್ಲ ಎಂದಿದ್ದಾರೆ.

ಅಶ್ವತ್ಥ್​ ನಾರಾಯಣ್, ಡಿಸಿಎಂ

ಈ ಬಾರಿ ಸಿಎಂ ಯಡಿಯೂರಪ್ಪ ಅತ್ಯಂತ ಸಮತೋಲಿತ ಬಜೆಟ್ ಕೊಟ್ಟಿದ್ದಾರೆ‌. ಅದರಲ್ಲೂ ಉತ್ತರ ಕರ್ನಾಟಕಕ್ಕೆ ನೀರಾವರಿಗೆ ಹೆಚ್ಚಿನ ಪಾಲು ನೀಡಿದ್ದಾರೆ. ಇನ್ನೂ ಕೂಡಾ ಅನುದಾನ ಬೇಕು ಅಂತಾ ಅಪೇಕ್ಷೆ ಇರುವವರು ಕೆಲವರು ಇರಬಹುದು. ಪಕ್ಷದಲ್ಲಿ ಅಸಮಾಧಾನ ಇರುವುದು ಉಮೇಶ್ ಕತ್ತಿ ಒಬ್ಬರದ್ದೇ ಅಂತಾ ಉದಾಹರಣೆ ಕೊಡುತ್ತಾ ಹೋದರೆ ಆಗುವುದಿಲ್ಲ. ಅವರ ಭಾವನೆ ಅವರು ವ್ಯಕ್ತಪಡಿಸಿಕೊಂಡಿದ್ದಾರೆ ಎಂದಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಬಜೆಟ್​​ನಲ್ಲಿ 1,500 ಕೋಟಿ ಇಟ್ಟಿರೋದನ್ನು ಸಮರ್ಥಿಸಿಕೊಂಡ ಡಿಸಿಎಂ‌, ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಮಾಡಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಡಿ.ವಿ.ಸದಾನಂದಗೌಡರು ಸಿಎಂ ಆಗಿದ್ದಾಗ ಯೋಜನೆ ಪ್ರಾರಂಭಿಸಲಾಯ್ತು. ಯಾವುದೇ ಯೋಜನೆ ಪ್ರಾರಂಭವಾದಾಗ ವಿರೋಧ ವ್ಯಕ್ತವಾಗೋದು ಸಹಜ. ಆದರೆ ಬಯಲುಸೀಮೆಯ ಜನರಿಗೆ ಎತ್ತಿನಹೊಳೆಯ ನೀರು ತಲುಪಿದಾಗ ಅವರೇ ಸಂತೋಷ ವ್ಯಕ್ತಪಡಿಸುತ್ತಾರೆ ಎಂದರು.

ಸರ್ಕಾರದಲ್ಲಿ ಪೊಲೀಸರಿಗೆ ವೇತನ ಕೊಡದೇ ಇರುವ ಪರಿಸ್ಥಿತಿ ಇಲ್ಲ. ಕೆಲವು ಇಲಾಖೆಗಳಲ್ಲಿ ಹಂಚಿಕೆಯಾದ ಹಣಕ್ಕಿಂತ ಹೆಚ್ಚು ವೆಚ್ಚ ಆಗಿರುತ್ತದೆ. ಆಗ ಕೊರತೆ ಬಂದೇ ಬರುತ್ತದೆ. ಅದನ್ನು ರೀ ಅಡ್ಜಸ್ಟ್​​​ಮೆಂಟ್ ಮಾಡಲಾಗುತ್ತದೆ. ಅತಿಥಿ ಉಪನ್ಯಾಸಕರಿಗೆ ಹೆಚ್ಚಿನ ವೇತನ, ಬಾಕಿ ಇರುವ ವೇತನ ಸಮಸ್ಯೆ ಬಗೆಹರಿಸುವ ಕೆಲಸ ಉನ್ನತ ಶಿಕ್ಷಣ ಇಲಾಖೆಯಲ್ಲಿ ಆಗಲಿದೆ ಎಂದು ಭರವಸೆ ನೀಡಿದರು.

ಮಹದಾಯಿ ಯೋಜನೆ‌ ಇನ್ನೂ ಆರಂಭಿಕ ಹಂತದಲ್ಲಿದೆ. ಇನ್ನೂ ಭೂ ಸ್ವಾಧೀನ ಆರಂಭಿಸಿ ಟೆಂಡರ್ ಕರೆಯಬೇಕು. ಹೀಗಾಗಿ ಮೊದಲ ಹಂತಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬಜೆಟ್​ನಲ್ಲಿ ‌ಮೀಸಲಿಡಲಾಗಿದೆ ಎಂದು ಕಡಿಮೆ ಹಣ ಮೀಸಲಿಟ್ಟಿರುವುದನ್ನು ಸಮರ್ಥಿಸಿಕೊಂಡರು.

Last Updated : Mar 7, 2020, 9:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.