ETV Bharat / state

ಮರಾಠಿ ಪುಂಡರಿಗೆ ಸವಾಲೆಸೆದ ಕರವೇ.. ಬೆಂಗಳೂರಿನಿಂದ-ಬೆಳಗಾವಿಗೆ 'ಸ್ವಾಭಿಮಾನಿ ಕನ್ನಡಿಗರ ಜಾಥಾ' - ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡಿಗರ ತಂಟೆಗೆ ಬಂದ್ರೆ ಅದನ್ನು ಎದುರಿಸುವ ವೀರಕನ್ನಡಿಗರು ನಮ್ಮಲ್ಲಿದ್ದಾರೆ. ತಾಕತ್ತಿದ್ದರೆ ಕನ್ನಡಿಗರನ್ನು ಮುಟ್ಟಿ, ಕನ್ನಡ ಬಾವುಟವನ್ನು ಮುಟ್ಟಿ ಎಂದು ಸವಾಲೆಸೆದಿದ್ದಾರೆ..

karave to held Bengaluru to Belgavi jatha
ಪ್ರವೀಣ್ ಕುಮಾರ್ ಶೆಟ್ಟಿ ಹೇಳಿಕೆ
author img

By

Published : Mar 16, 2021, 4:38 PM IST

ಬೆಂಗಳೂರು : ಗಡಿಭಾಗ ಬೆಳಗಾವಿಯಲ್ಲಿ ಮರಾಠಿ ಪುಂಡರ ಉದ್ಧಟತನ ಮೇರೆ ಮೀರಿದೆ. ಕನ್ನಡದ ಶಾಲುಗಳು, ಬಾವುಟಗಳನ್ನು ಹಿಡಿದು ಬಂದವರನ್ನು ಹಲ್ಲೆ ನಡೆಸುವುದಾಗಿ ಸವಾಲು ಹಾಕಿದ್ದಾರೆ.

ಹೀಗಾಗಿ, ಎಂಇಎಸ್​ ಕಾರ್ಯಕರ್ತರ ಸವಾಲು ಸ್ವೀಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ, ನಾಳೆ ಬೆಳಗ್ಗೆ ಮೇಕ್ರಿ ವೃತ್ತದಿಂದ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಗಡಿ ಉಲ್ಲಂಘನೆ ಮಾಡಲಾಗುವುದು ಎಂದು ಕರೆ ನೀಡಿದೆ.

ಮರಾಠಿಗರ ಗಡಿ ತಂಟೆ ಕುರಿತು ಪ್ರವೀಣ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆ..

ಈ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಇದು ರಾಜ್ಯದಲ್ಲಿ ಕನ್ನಡ ಹೋರಾಟಗಾರರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಎಂಇಎಸ್ ಪುಂಡರು ಕನ್ನಡದ ಶಾಲು ಹಾಕಿದ್ರೆ, ಬಾವುಟ ಹಾಕಿದ್ರೆ ನಮ್ಮನ್ನು ಒದಿತೀವಿ ಎಂದು ಹೇಳುವ ಮಟ್ಟಕ್ಕೆ ಬಂದಿದ್ದಾರೆ.

ನಮ್ಮ ಸರ್ಕಾರ ಏನು ಮಾಡ್ತಿದೆ, ರಾಜಕಾರಣಿಗಳು ಏನ್ ಮಾಡ್ತಿದಾರೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ, ನಾವೇ ಬೆಳಗಾವಿ ಗಡಿ ಮೀರಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದೇವೆ. ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ ಕೊಡಿ, ಎಂಇಎಸ್ ಪುಂಡರಿಂದ ರಾಜಕೀಯ ಕಾರಣಕ್ಕಾಗಿ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಆಗ್ತಿದೆ.

ಕನ್ನಡಿಗರ ತಂಟೆಗೆ ಬಂದ್ರೆ ಅದನ್ನು ಎದುರಿಸುವ ವೀರಕನ್ನಡಿಗರು ನಮ್ಮಲ್ಲಿದ್ದಾರೆ. ತಾಕತ್ತಿದ್ದರೆ ಕನ್ನಡಿಗರನ್ನು ಮುಟ್ಟಿ, ಕನ್ನಡ ಬಾವುಟವನ್ನು ಮುಟ್ಟಿ ಎಂದು ಸವಾಲೆಸೆದಿದ್ದಾರೆ.

ಇದನ್ನೂ ಓದಿ:ದೈಹಿಕ ದೌರ್ಬಲ್ಯ ಮೆಟ್ಟಿನಿಂತ ಕಲಾವಿದೆ: ಆರ್ಟ್​ ಅಂಡ್ ಕ್ರಾಫ್ಟ್​​ನಲ್ಲಿ ಯುವತಿಯ ಕಮಾಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.