ಬೆಂಗಳೂರು: ಸೂಕ್ಷ್ಮ ಪರಿಸ್ಥಿತಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬಾರದಿತ್ತು ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತಿಗೂ ಬೆಳಗಾವಿ ನಮ್ಮ ಭಾಗ ಎಂದು ಮಹಾರಾಷ್ಟ್ರ ಒತ್ತಾಯ ಮಾಡುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಮಹಾಮೇಳ ಮಾಡುತ್ತದೆ. ಇಂತಹ ಸೂಕ್ಷ್ಮ ವಿಚಾರ ಗೊತ್ತಿದ್ದರೂ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.
ಗಡಿ ಭಾಗ ಕಾಪಾಡುವುದು ಯಾವುದೇ ಸರ್ಕಾರದ ಕರ್ತವ್ಯ. ಅಂತಹ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ಉತ್ತೇಜನ ಕೊಟ್ಟಿದೆ. ಇದು ರಾಜಕೀಯ ವೇದಿಕೆಯಾಗುವ ಆತಂಕವಿದೆ. ಇದಕ್ಕಾಗಿ ಕನ್ನಡಿಗರ ವಿರೋಧವಿದೆ ಎಂದರು.