ETV Bharat / state

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ: ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆ - ಸಂಚಾರ ನಿರ್ಬಂಧ ಹಾಗೂ‌ ಪಾರ್ಕಿಂಗ್

ವಿಧಾನಸೌಧದೆದುರು ಇಂದು ಸಂಜೆ ಪುನೀತ್ ರಾಜ್‌ಕುಮಾರ್ ಅವರಿ​ಗೆ ​ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಅಭಿಮಾನಿಗಳಿಗೂ ಮುಕ್ತ ಆಹ್ವಾನವಿದೆ. ಹೀಗಾಗಿ, ವಿಧಾನಸೌಧ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

security around Vidhana Soudha
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
author img

By

Published : Nov 1, 2022, 9:01 AM IST

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸಂಜೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವಿದ್ದು ವಿಶೇಷ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಿಎಂ ಬೊಮ್ಮಾಯಿ ಅವರು ಪುನೀತ್ ರಾಜ್‌ಕುಮಾರ್​ ಅವರಿಗೆ ​ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದು ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಹಾಗೂ ಅಭಿಮಾನಿಗಳಿಗೆ ಮುಕ್ತ ಆಹ್ವಾನವಿದೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು 7 ಜನ ಎಸಿಪಿ, 16 ಜನ ಇನ್ಸ್‌ಪೆಕ್ಟರ್, 25 ಪಿಎಸ್‌ಐ 300 ಕಾನ್ಸ್‌ಟೇಬಲ್‌ಗಳು ಹಾಗೂ 6 ಕೆಎಸ್ಆರ್‌ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಪ್ರವೇಶಾವಕಾಶ: ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ವಿವಿಐಪಿಗಳಿಗೆ ಪ್ರವೇಶಾವಕಾಶ ನೀಡಲಾಗಿದ್ದು, ಪೂರ್ವ ದ್ವಾರದಲ್ಲಿ ವಿಐಪಿಗಳಿಗೆ ಅವಕಾಶ ಮಾಡಲಾಗಿದೆ. ಉಳಿದಂತೆ, ಪಾಸ್ ಇಲ್ಲದಿದ್ದರೆ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಸಾರ್ವಜನಿಕರು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ನಿಂತು ಕಾರ್ಯಕ್ರಮ ನೋಡಬಹುದು ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.

ಸಂಚಾರ ನಿರ್ಬಂಧ, ಪಾರ್ಕಿಂಗ್: ವೇದಿಕೆಯ ಮುಂಭಾಗದಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಜನರಿಗೆ ಅವಕಾಶ ಮಾಡಲಾಗಿದೆ. ಎಲ್ಇಡಿ ವ್ಯವಸ್ಥೆ ಕೂಡ ಇರಲಿದೆ. ರಜೆ ಇರುವುದರಿಂದ ಇಂದು ರಾಜಭವನ ರಸ್ತೆಯಿಂದ ಕೆ.ಆರ್ ಸರ್ಕಲ್‌ವರೆಗಿನ ರಸ್ತೆಯಲ್ಲಿ‌ ಸಂಚಾರ ನಿರ್ಬಂಧವಿರಲಿದೆ. ಪಾಸ್ ಇರುವವರಿಗೆ ಕಬ್ಬನ್ ಪಾರ್ಕ್​ನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯಿದ್ದು ವಿವಿಐಪಿಗಳಿಗೆ ಮಾತ್ರ ವಿಧಾನಸೌಧದಲ್ಲಿ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಮಂಜುಳಾ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.