ETV Bharat / state

ಶಾಲಾ ಶುಲ್ಕ ಪಾವತಿಗೆ ತಡೆಹಿಡಿಯಬೇಡಿ : ಸಚಿವರಿಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಮನವಿ - Karnataka school open

ಸರ್ಕಾರದ ಮಾತಿಗೆ ಬೆಲೆ ಕೊಟ್ಟಿದ್ದೇವೆ. ಆದ್ರೆ, ಎಷ್ಟೋ ಪಾಲಕರು ಪೂರ್ಣ ಸಂಬಳ ತೆಗೆದುಕೊಳ್ತಿದ್ದಾರೆ. ಯಾವ ಮಾನದಂಡದ ಮೇಲೆ ನಾವು ಅವರನ್ನ ಶುಲ್ಕ ಕೇಳದಿರಲು ಸಾಧ್ಯ..? ಎಷ್ಟೋ ಪೋಷಕರು ಸರ್ಕಾರ ಕಡಿತ ಮಾಡಿದ ಶೇ.70ರಷ್ಟು ಶುಲ್ಕವನ್ನೇ ಕಟ್ಟಿಲ್ಲ..

kams-general-secretory
ಸಚಿವರಿಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಮನವಿ
author img

By

Published : Jun 13, 2021, 5:50 PM IST

ಬೆಂಗಳೂರು‌ : ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಒಕ್ಕೂಟದ ಸುಮಾರು 10 ಸಂಘಟನೆಗಳ ವರ್ಚುವಲ್ ಸಭೆ ನಡೆಸಲಾಗಿದೆ. ಶಿಕ್ಷಣ ಮಂತ್ರಿಗಳು ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡಲು ಈ‌ ವರ್ಚುವಲ್ ಸುದ್ದಿಗೋಷ್ಠಿ ನಡೆಸಲಾಗಿದೆ. ಇನ್ನು, ಈ ಶುಲ್ಕ ವಿಚಾರದ ಬಗ್ಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಸರ್ಕಾರದಿಂದ ನಮಗೇನು ಸಹಾಯ ಆಗಿಲ್ಲ. ಸರ್ಕಾರ ನಮಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಚಾರದ ಮಾತನ್ನ ಬಿಡಬೇಕು. ಶಿಕ್ಷಣ ಇಲಾಖೆಯಲ್ಲಿರುವ ಅವ್ಯವಸ್ಥೆ ಬದಲಿಸಬೇಕು. 700 ಕೋಟಿ ಆರ್​​ಟಿಇ ಹಣ ಬಾಕಿ ಉಳಿದಿದೆ. ಕಳೆದ 6 ತಿಂಗಳಿಂದ ಹಣ ಬಂದಿಲ್ಲ. ಪಠ್ಯ ಪುಸ್ತಕದ ಕೊರತೆಯೂ ಇದೆ. ಪುಸ್ತಕ ತೆಗೆದುಕೊಳ್ಳಿ ಅಂತ ಒತ್ತಡ ಬರ್ತಿದೆ.‌ ಆದರೆ, ಮಕ್ಕಳ ದಾಖಲಾತಿಯೇ ಆಗಿಲ್ಲ. ಹೀಗಿರುವಾಗ ಎಷ್ಟು ಮಕ್ಕಳಿದ್ದಾರೆ ಅಂತ ಪುಸ್ತಕ ಖರೀದಿಸಬೇಕು.‌ ನಮ್ಮ ಸಿಬ್ಬಂದಿಗೆ ಅರ್ಧ ಸಂಬಳ ಕೊಡೋಕೂ ಆಗ್ತಿಲ್ಲ. ನಮ್ಮ ಮತ್ತು ಪೋಷಕರ ನಡುವಿನ ಪವಿತ್ರ ಕೊಂಡಿಯನ್ನ ಕಳಚುವ ಕೆಲಸವನ್ನ ಶಿಕ್ಷಣ ಸಚಿವರು ಮಾಡ್ತಿದ್ದಾರೆ‌‌ ಎಂದು ಶಿಕ್ಷಣ ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ.

ಸಚಿವರಿಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಮನವಿ

ಎಲ್ಲಾ ಖಾಸಗಿ‌ ಶಾಲೆಗಳು ಅನ್ನೋದನ್ನ ನಾನು ಖಂಡಿಸ್ತೀನಿ. ಸರ್ಕಾರ ಒಂದು ಮಗುವಿಗೆ ತಾನು ಖರ್ಚು ಮಾಡುವುದಕ್ಕಿಂತ ಹೆಚ್ಚು ದುಡ್ಡನ್ನ ಇವತ್ತು ಖಾಸಗಿ ಶಾಲಾ ಮಕ್ಕಳಿಗೆ ನಾವು ಮಾಡುತ್ತಿದ್ದೇನೆ. ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡದಂತೆ ಸರ್ಕಾರ ಹೇಳಿತ್ತು. ಸರ್ಕಾರದ ಮಾತಿಗೆ ಬೆಲೆ ಕೊಟ್ಟಿದ್ದೇವೆ. ಆದ್ರೆ, ಎಷ್ಟೋ ಪಾಲಕರು ಪೂರ್ಣ ಸಂಬಳ ತೆಗೆದುಕೊಳ್ತಿದ್ದಾರೆ. ಯಾವ ಮಾನದಂಡದ ಮೇಲೆ ನಾವು ಅವರನ್ನ ಶುಲ್ಕ ಕೇಳದಿರಲು ಸಾಧ್ಯ..? ಎಷ್ಟೋ ಪೋಷಕರು ಸರ್ಕಾರ ಕಡಿತ ಮಾಡಿದ ಶೇ.70ರಷ್ಟು ಶುಲ್ಕವನ್ನೇ ಕಟ್ಟಿಲ್ಲ ಎಂದಿದ್ದಾರೆ.

ಕಳೆದ 2-3 ವರ್ಷಗಳಿಂದ ಶಾಲಾ ಶುಲ್ಕದ ಹಣ ಬಾಕಿ ಉಳಿದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಭ್ರಷ್ಟರು, ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಇಡೀ ವರ್ಷ ಶಿಕ್ಷಣ ಸಚಿವರು ನಮ್ಮನ್ನ ಅತ್ಯಂತ ಕಷ್ಟಕ್ಕೆ ಸಿಲುಕಿಸಿದ್ದಾರೆ. ಶೇ.20ರಷ್ಟು ಮಕ್ಕಳ ದಾಖಲಾತಿಯೇ ಆಗಿಲ್ಲ. ಪೋಷಕರಿಗೆ ತಮ್ಮ ಮಕ್ಕಳನ್ನ ಕಡ್ಡಾಯವಾಗಿ ದಾಖಲು ಮಾಡುವಂತೆ ಸರ್ಕಾರ ನಿರ್ದೇಶನ ಹೊರಡಿಸಬೇಕು. ಒಂದೇ ಕಂತಿನಲ್ಲಿ ಶುಲ್ಕ ಕಟ್ಟಿ ಅನ್ನೋದನ್ನ ನಾವೂ ಖಂಡಿಸುತ್ತೇವೆ ಎಂದರು.

ಓದಿ: ಖಾಸಗಿ ಶಾಲೆಗಳ ಶುಲ್ಕ ವಿಚಾರ.. ಸಂಬಂಧ ಪಟ್ಟವರಿಗೆ ನೋಟಿಸ್: ಸಚಿವ ಸುರೇಶ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.