ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ-ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ನಗರದ ಕಾಮಾಕ್ಷಿಪಾಳ್ಯದ ಪಿಎಸ್‌ಐ ಶರೀಫ್ ಸಿಐಡಿ ವಿಚಾರಣೆಗೆ ಹಾಜರಾಗದೇ ಎಸ್ಕೆಪ್ ಆಗಿರುವುದು ಈಗ ಹಾಟ್ ಟಾಪಿಕ್ ಆಗಿದೆ.
ಹೌದು, ಕಾಮಾಕ್ಷಿಪಾಳ್ಯದ ಪಿಎಸ್‌ಐ ಸಿಐಡಿ ವಿಚಾರಣಗೆ ಹಾಜರಾಗದೇ ತಲೆಮರಿಸಿಕೊಂಡಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯದ ಪಿ.ಎಸ್.ಐ ಶರೀಫ್ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಶರೀಫ್ ವಿಚಾರಣೆಗೆ ಹಾಜರಾಗದೇ ಎಸ್ಕೆಪ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಓದಿ: ಪಿಎಸ್‌ಐ ಹಗರಣದಲ್ಲಿ ಎಷ್ಟೇ ದೊಡ್ಡ ರಾಜಕಾರಣಿ ಇದ್ದರೂ ಕ್ರಮ ಕೈಗೊಳ್ಳಿ: ಹೆಚ್.ವಿಶ್ವನಾಥ್
ಪಿ.ಎಸ್. ಐ ನೇಮಕಾತಿ ಹಗರಣದಲ್ಲಿ ಪಿಎಸ್‌ಐ ಶರೀಫ್ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಅನುಮಾನದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಪಿಎಸ್‌ಐ ಶರೀಫ್ ವಿಚಾರಣೆಗೆ ಹಾಜರಾಗದೇ ತಲೆಮರಿಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಶೋಧ ನಡೆಸ್ತಿದ್ದಾರೆ ಎನ್ನಲಾಗುತ್ತಿದೆ.