ಬೆಂಗಳೂರು: ಕಳೆದ ಭಾನುವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ರೇಲ್ ದೇಶದ ನಿವಾಸಿ ಯಿಡೊ ಯಿಡೋ ಎಂಬಾತ ಕಬ್ಬನ್ ಪಾರ್ಕ್ ಬಳಿ ಮಲಗಿದ್ದಾಗ ಐಫೋನ್, ಏರ್ ಟಿಕೆಟ್ ಮತ್ತು ಪರ್ಸ್ ಕಳೆದುಕೊಂಡು ಕಂಗಾಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿವೋರ್ವರು ಮಾನವೀಯತೆ ಮೆರೆದಿರುವುದು ಬೆಳಕಿಗೆ ಬಂದಿದೆ.
ಆರಂಭದಲ್ಲಿ ಯಿಡೋವಿನ ಭಾಷೆ ಯಾರಿಗೂ ಅರ್ಥವಾಗದೇ ಕೊಂಚ ಮಟ್ಟಿಗೆ ತಲೆಕೆಡಿಸಿಕೊಂಡಿದ್ದರು. ಅಲ್ಲದೇ ಅವನ ಬೆಳೆದ ಗಡ್ಡ, ದಟ್ಟವಾದ ತಲೆ ಕೂದಲು, ಕಾಲುಗಳಲ್ಲಿ ವಿಚಿತ್ರ ದಾರ, ಹಾಗೇ ಶರ್ಟ್ ಕೂಡ ಹಾಕದೆ ಕೇವಲ ಬರ್ಮುಡಾ ಹಾಕಿಕೊಂಡಿದ್ದ. ಆತನ ಅಸಹಾಯಕತೆ ನೋಡಿ ಮರುಗಿದ್ದ ಅತೀಕ್ ಅಹಮದ್ ಎಂಬ ಕಾನ್ಸ್ಟೇಬಲ್ ಆತನಿಗೆ ಸಹಾಯ ಮಾಡುವ ದೃಷ್ಟಿಯಿಂದ ಮಾತನಾಡಿಸಿದಾಗ ಆತ ಇಸ್ರೇಲ್ ದೇಶದ ರೈತ ಎಂದು ತಿಳಿದಿದೆ. ಈ ವೇಳೆ ಯಿಡೊಗೆ ಇಸ್ರೇಲ್ಗೆ ಹೋಗಲು ಸಹಾಯ ಮಾಡಿದ್ದಾರೆ.
ಅತೀಕ್ ಅವರು ಇಸ್ರೇಲ್ ರೈತನಿಗೆ ಸಹಾಯ ಮಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಆತನನ್ನು ಇಸ್ರೇಲ್ಗೆ ಕಳುಹಿಸಿದ್ದಾರೆ. ಯಿಡೊ ಇಸ್ರೇಲ್ ದೇಶಕ್ಕೆ ಹೋಗಿ ಮತ್ತೆ ವಾಪಸ್ ಬಂದು ಅತೀಕ್ ಅವರಿಗೆ ಧನ್ಯವಾದ ತಿಳಿಸಿ ವಾಪಸ್ ಹೋಗಿದ್ದಾರೆ. ಅತೀಕ್ ಅಹಮದ್ ಅವರ ಈ ಮಾನವೀಯತೆ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.