ETV Bharat / state

ಸಿಎಂ ವಿರುದ್ಧ ಗುಡುಗು: ಶಾಸಕ ಯತ್ನಾಳ್ ಹಾದಿ ಹಿಡಿದರಾ ಸಚಿವ ಈಶ್ವರಪ್ಪ!?

ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡು ಸಿಎಂ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಬಸನಗೌಡ ಯತ್ನಾಳ್ ದಾರಿಯಲ್ಲೇ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಈಗ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ.

k-s-eshwarappa-wrote-letter-against-cm-yeddyurappa
ಸಿಎಂ ವಿರುದ್ಧ ಗುಡುಗು
author img

By

Published : Apr 1, 2021, 4:44 AM IST

ಬೆಂಗಳೂರು : ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಯತ್ನಾಳ್ ಬಹಿರಂಗವಾಗಿ ಮಾಡುತ್ತಿರುವ ಆರೋಪಗಳಿಂದ ಉಂಟಾಗುತ್ತಿರುವ ಮುಜುಗರದಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಮತ್ತೊಬ್ಬ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪನವರಿಂದ ಉಂಟಾಗುತ್ತಿರುವ ಇರಿಸು ಮುರಿಸುಗಳನ್ನ ಎದುರಿಸಲು ಸನ್ನದ್ಧರಾಗಬೇಕಿದೆ.

ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡು ಸಿಎಂ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಬಸನಗೌಡ ಯತ್ನಾಳ್ ದಾರಿಯಲ್ಲೇ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಈಗ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ.

ತಮಗೆ ಸೇರಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹಸ್ತಕ್ಷೇಪದ ವಿರುದ್ಧ ಸಚಿವ ಈಶ್ವರಪ್ಪನವರು ಪಕ್ಷದ ವರಿಷ್ಠರಿಗೆ ಮತ್ತು ರಾಜ್ಯ ಪಾಲರಿಗೆ ಪತ್ರ ಬರೆಯುವ ಮೂಲಕ ಸಿಎಂ ವಿರುದ್ಧ ಸಮರ ಸಾರಿದ್ದಾರೆ. ಸಚಿವ ಈಶ್ವರಪ್ಪನವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಸಿಎಂ ತಮ್ಮ ಇಲಾಖೆಯಲ್ಲಿ ಮಾಡುತ್ತಿರುವ ಹಸ್ತಕ್ಷೇಪದ ಬಗ್ಗೆ ಹಾಗೂ ಇಲಾಖೆಯ ಯೋಜನೆಗಳ ಜಾರಿಗೆ ಹಣ ಬಿಡುಗಡೆ ಮಾಡದಿರುವ ಕುರಿತು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಗಮನಕ್ಕೂ ಪತ್ರದ ಮುಖೇನ ತಂದು ಸಿಎಂ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಲು ಮನವಿ ಮಾಡಿದ್ದಾರೆ.

ಸಚಿವ ಸಂಪುಟದ ಸಹೋದ್ಯೋಗಿಯಾಗಿ ಈಶ್ವರಪ್ಪನವರು ರಾಜ್ಯಪಾಲರಿಗೆ ಮತ್ತು ಪಕ್ಷದ ವರಿಷ್ಠರಿಗೆ ಬರೆದಿರುವ ಪತ್ರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಂತಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬಜೆಟ್​​ನಲ್ಲಿ ನೀಡಿದ ಅನುದಾನದ ಹಣ ಬಿಡುಗಡೆ ಮಾಡದಿರುವ ಸಂಗತಿಯನ್ನೂ ಸಚಿವ ಈಶ್ವರಪ್ಪ ಪತ್ರದಲ್ಲಿ ಉಲ್ಲೇಖಿಸಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮತ್ತಷ್ಟು ಮುಜುಗರಕ್ಕೆ ಈಡುಮಾಡಿದೆ.

ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಯತ್ನಾಳ್​ರಂತೆಯೇ ಸಚಿವ ಈಶ್ವರಪ್ಪನವರು ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತ ವೈಖರಿಯನ್ನ ಬಹಿರಂಗವಾಗಿ ರಾಜ್ಯಪಾಲರಿಗೆ ಮತ್ತು ಪಕ್ಷದ ವರಿಷ್ಠರಿಗೆ ಪತ್ರ ಬರೆಯುವ ಮೂಲಕ ಪ್ರಶ್ನಿಸಿರುವುದು ಭವಿಷ್ಯದಲ್ಲಿ ಬಂಡಾಯ ಏಳುವ ಸ್ಪಷ್ಟ ಸೂಚನೆಯಂತಿದೆ.

ಬೆಳಗಾವಿ ಲೋಕಸಭೆ ಉಪಚುನಾವಣೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿಯೇ ಸಚಿವ ಈಶ್ವರಪ್ಪನವರು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಮತದಾರರಿಗೆ ತಪ್ಪು ಸಂದೇಶವನ್ನೇ ನೀಡಿದಂತಾಗಿದೆ. ಅಷ್ಟೇ ಅಲ್ಲ ಜಿದ್ದಾಜಿದ್ದಿನ ಉಪ ಚುನಾವಣೆ ಕಣದಲ್ಲಿ ಪ್ರತಿಪಕ್ಷಗಳಿಗೆ ಸಚಿವ ಈಶ್ವರಪ್ಪನವರು ಯಡಿಯೂರಪ್ಪ ಸರ್ಕಾರದ ವಿರುದ್ಧ ಟೀಕಿಸಲು ಪ್ರಬಲ ಅಸ್ತ್ರ ಒದಗಿಸಿದಂತಾಗಿದೆ.

ಇದನ್ನೂ ಓದಿ: ತ್ರಿವರ್ಣ ಧ್ವಜಕ್ಕೆ ಇಂದಿಗೆ 100 ವರ್ಷ.. ಹೀಗಿತ್ತು ಬಾವುಟದ ತಯಾರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.