ಬೆಂಗಳೂರು: ನ್ಯಾಯಾಲಯಗಳಲ್ಲಿ ಕನ್ನಡ ಕಂಪು ಹರಡಲು ವಕೀಲ ವೃತ್ತಿಯನ್ನು ಕನ್ನಡದಲ್ಲೇ ಮಾಡುವ ವಕೀಲರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಜೆಡಿಎಸ್ ನ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
![ramesh](https://etvbharatimages.akamaized.net/etvbharat/prod-images/5085590_rameshbabu.jpg)
ಈ ಕುರಿತು ಟ್ವೀಟ್ ಮಾಡಿರುವ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರತೀ ತಾಲೂಕಿನಲ್ಲಿ ಕನಿಷ್ಠ ಒಬ್ಬರು ನ್ಯಾಯವಾದಿಗೆ ಪ್ರತಿವರ್ಷ ಗೌರವ ನೀಡಿದರೆ ನ್ಯಾಯಾಲಯಗಳಲ್ಲಿ ಕನ್ನಡ ಉಳಿದು ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದಲ್ಲಿ ಕನ್ನಡದ ತೀರ್ಪು ಕಡ್ಡಾಯವಾಗಲಿ ಎಂದು ಹೇಳಿದ್ದಾರೆ.