ETV Bharat / state

'ಈಟಿವಿ ಭಾರತ' ವಿಶೇಷ: ಕೊರೊನಾ ವೈರಸ್​ ಪರಿಣಾಮ ಬೀರದ ಉದ್ಯೋಗಗಳು..! - ಕೊರೊನಾ ಪರಿಣಾಮ ಬೀರದ ಕೆಲ ಕ್ಷೇತ್ರಗಳು

ಕೊರೊನಾ ವೈರಸ್ ಆರೋಗ್ಯದ ಜೊತೆಗೆ ಆರ್ಥಿಕವಾಗಿ ಕೂಡ ಬಲವಾದ ಹೊಡೆತ ನೀಡಿದೆ. ಇದರ ದುಷ್ಪರಿಣಾಮ ಹಲವಾರು ವಲಯದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದೆ. ಆದರೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೊಡ್ಡ ಪರಿಣಾಮ ಬೀರದೆ ನಿರುದ್ಯೋಗ ಸಮಸ್ಯೆ ಯಾವ ವಲಯಗಳಲ್ಲಿಲ್ಲ ಎಂಬುದರ ಕಂಪ್ಲೀಟ್​ ಸ್ಟೋರಿ ಇಲ್ಲಿದೆ.

Jobs that do not effect the corona virus
ಕೊರೊನಾ ವೈರಸ್​ ಪರಿಣಾಮ ಬೀರದ ಉದ್ಯೋಗಗಳು
author img

By

Published : Aug 10, 2020, 8:24 PM IST

ಬೆಂಗಳೂರು: ಕೊರೊನಾ ವೈರಸ್ ಕಾಲಿಟ್ಟ ಕೂಡಲೇ ಪ್ರವಾಸೋದ್ಯಮ, ಸಿನಿಮಾ, ಹೋಟೆಲ್ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಆದರೆ ಬೆರಳೆಣಿಕೆ ಕ್ಷೇತ್ರಗಳಲ್ಲಿ ಮಾತ್ರ ಕೆಲಸಗಳು ನಡೆಯುತ್ತಿವೆ. ಐಟಿ/ಬಿಟಿ, ಇ ಕಾಮರ್ಸ್​​ ಕ್ಷೇತ್ರಗಳಲ್ಲಿ ಉದ್ಯೋಗ ಸಮಸ್ಯೆ ಇಲ್ಲ.

ಜಾಗತಿಕ ಮಟ್ಟದಲ್ಲಿ ಎಲ್ಲಾ ವಲಯಕ್ಕೆ ಆರ್ಥಿಕ ಕಗ್ಗಂಟು ಉಂಟಾಗಿದ್ದು, ಸದ್ಯದ ಮಟ್ಟಿಗೆ ಐಟಿ/ಬಿಟಿ ಸಂಸ್ಥೆಗಳಿಗೆ ಅಷ್ಟರ ಮಟ್ಟಿಗೆ ಭಾರತದಲ್ಲಿ ಸಮಸ್ಯೆ ಇಲ್ಲವೆಂದು ತಿಳಿದು ಬಂದಿದೆ. ಆದರೂ ಕೆಲ ನೌಕರರನ್ನು ಕೆಲಸದಿಂದ ವಜಾಗೊಳಿಸಿದರೂ ಸಹಜವಾಗಿ ಕೆಲಸಗಳು ನಡೆಯುತ್ತಿವೆ. ಐಟಿ ನೌಕರರು ಮನೆಯಿಂದ ಕೆಲಸ ಮಾಡುತ್ತಿದ್ದು, ವಿಡಿಯೋ ಕಾನ್ಫರೆನ್ಸ್, ಡೇಟಾ ಅನಾಲಿಟಿಕ್ಸ್ ಹಾಗೂ ಇದಕ್ಕೆ ಕೋಡಿಂಗ್ ಅವಶ್ಯಕತೆ ಈಗ ಬೇಡಿಕೆಯಲ್ಲಿದೆ.

ಅಮೆರಿಕ ಮೂಲದ ಸಂಸ್ಥೆಗಳು ಅವರ ನೆಲದಲ್ಲಿ ಲಕ್ಷಾಂತರ ಜನಕ್ಕೆ ಪಿಂಕ್​ ​​ಸ್ಲಿಪ್ ನೀಡಿ ಮನೆಗೆ ಕಳಿಸಿವೆ. ಆದರೆ ಅಲ್ಲಿ ನಡೆಯುತ್ತಿದ್ದ ಕೆಲಸ ಕಾರ್ಯಗಳನ್ನ ಭಾರತದ ಕಚೇರಿಗೆ ಹಸ್ತಾಂತರ ಮಾಡಿವೆ ಎಂದು ಬಹುರಾಷ್ಟ್ರೀಯ ಸಂಸ್ಥೆಗಳ ಮೂಲಗಳು ತಿಳಿಸಿವೆ. ಭಾರತದಲ್ಲಿ ವೇತನ ಹಾಗೂ ಖರ್ಚು ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಇರುವ ಕಾರಣ ಈ ನಿರ್ಧಾರಗಳನ್ನು ಆಡಳಿತ ಮಂಡಳಿgಳು ತೆಗೆದುಕೊಳ್ಳುತ್ತಿವೆ.

ಕೊರೊನಾ ವೈರಸ್​ ಪರಿಣಾಮ ಬೀರದ ಉದ್ಯೋಗಗಳು

ಕೊರೊನಾವನ್ನು ತಡೆಯುವುದಕ್ಕೆ ಬಯೋ ಟೆಕ್ನಾಲಜಿ ಸಂಸ್ಥೆಗಳು ಹಗಲಿರುಳು ಕೆಲಸ ಮಾಡುತ್ತಿದ್ದು, ರೋಗನಿರೋಧಕ ಶಕ್ತಿ ಹೆಚ್ಚು ಮಾಡುವ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುತ್ತಿವೆ. ಹೀಗಾಗಿ ಬಿಟಿ ಕ್ಷೇತ್ರದಲ್ಲಿ ಕೆಲಸ ಸಹಜ ಸ್ಥಿತಿಯಲ್ಲಿ ನಡೆಯುತ್ತಿದೆ.

ಇನ್ನು, ವಿಶ್ವದ ಬಹುಪಾಲು ಜನರು ಮನೆ ಊಟಕ್ಕೆ ಮರಳಿದ್ದು, ಮಸಾಲೆ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ದೇಶವು ಮಸಾಲೆ ಪದಾರ್ಥಗಳನ್ನು ತಯಾರಿಸುವುದಕ್ಕೆ ಹೆಸರುವಾಸಿಯಾಗಿದ್ದು, ಈ ಕಾರಣದಿಂದ ಈ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ ವಲಸೆ ಕಾರ್ಮಿಕರ ಕೊರತೆಯಿಂದ ಹೆಚ್ಚು ನೌಕರರು ಕೆಲಸಕ್ಕೆ ಸಿಗುತ್ತಿಲ್ಲ.

ಜನರು ಈಗ ಅಂಗಡಿಗಳಿಗೆ ಹೋಗಿ ವಸ್ತುಗಳ ಖರೀದಿಸುತ್ತಿಲ್ಲ. ವಿವಿಧ ಇ-ಕಾಮರ್ಸ್ ವೆಬ್ ಸೈಟ್ ಹಾಗೂ ಆ್ಯಪ್ ಬಳಕೆಯಿಂದ ದಿನಸಿ ಪದಾರ್ಥ, ಹೋಟೆಲ್ ಖಾದ್ಯ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆರಳ ತುದಿಯಲ್ಲಿ ಆರ್ಡರ್ ಮಾಡುತ್ತಿದ್ದಾರೆ. ಸಂಬಳ ಕಡಿತ ಇದ್ದರೂ ಡೆಲಿವರಿ ನೌಕರರು ಕೆಲಸ ಮಾಡುತ್ತಿರುವುದು ನಗರಗಳಲ್ಲಿ ಕಂಡುಬರುತ್ತದೆ.

ಇ ಕಾರ್ಮರ್ಸ್, ಐಟಿ/ಬಿಟಿ ಸೇರಿದಂತೆ ಎಲ್ಲಾ ವಲಯದಲ್ಲೂ ಕಾರ್ಮಿಕರ ಕೊರತೆ ಕಾಣಿಸುತ್ತಿದೆ. ಲಾಕ್​​ಡೌನ್ ಸಂದರ್ಭದಲ್ಲಿ ಉತ್ತರ ಭಾರತದ ಕಾರ್ಮಿಕರು ಊರುಗಳಿಗೆ ಹೋಗಿದ್ದು, ಈ ಅಭಾವ ಸೃಷ್ಟಿಸಿದೆ. ಇನ್ನು ಬೇರೆ ಕೈಗಾರಿಕೆಗಳಲ್ಲೂ ಉತ್ಪನ್ನಗಳ ಬೇಡಿಕೆ ಇದ್ದರೂ ಕಾರ್ಮಿಕ ಕೊರತೆಯಿಂದ ಹೇಳಿದ ಸಮಯದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ ಅವರ ಮಾತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.