ETV Bharat / state

HAL Jobs: ಹೆಚ್‌ಎಎಲ್‌ನಲ್ಲಿದೆ ನೌಕರಿ! ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ

Jobs in HAL: ಒಟ್ಟು 185 ಮ್ಯಾನೇಜ್​ಮೆಂಟ್​ ಮತ್ತು ಡಿಸೈನ್​ ಟ್ರೈನಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

author img

By

Published : Aug 4, 2023, 4:56 PM IST

Jobs in HAL India for management and design trainee

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ನಿಂದ (ಹೆಚ್‌ಎಎಲ್‌) ವಿವಿಧ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 185 ಮ್ಯಾನೇಜ್​ಮೆಂಟ್​ ಮತ್ತು ಡಿಸೈನ್​ ಟ್ರೈನಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭಾರತದಾದ್ಯಂತ ನೇಮಕಾತಿ ನಡೆಯಲಿದೆ. ಬೆಂಗಳೂರು, ತುಮಕೂರು, ಹೈದರಾಬಾದ್​, ನಾಸಿಕ್​, ಖೋರ್​ಪಾಟ್​, ಬ್ಯಾರಕ್​ಪೊರ್​​, ಲಕ್ನೋ ಮತ್ತು ಕೊರ್ವಾದಲ್ಲಿ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಡಿಸೈನ್​ ಇಂಜಿನಿಯರಿಂಗ್​ನಲ್ಲಿ 95, ಮ್ಯಾನೇಜ್​ಮೆಂಟ್​ ಟ್ರೈನಿಯಲ್ಲಿ ಒಟ್ಟು 90 ಹುದ್ದೆಗಳು.

ವಿದ್ಯಾರ್ಹತೆ: ಅಭ್ಯರ್ಥಿಗಳು ಏರೋನಾಟಿಕಲ್​, ಎಲೆಕ್ಟ್ರಾನಿಕ್ಸ್​, ಎಲೆಕ್ಟ್ರಿಕಲ್​, ಮೆಕ್ಯಾನಿಕಲ್​, ಕಂಪ್ಯೂಟರ್​ ಸೈನ್ಸ್​, ಮೆಟಾಲ್ಯೂರ್ಜಿ ವಿಷಯದಲ್ಲಿ ಬಿಇ ಅಥವಾ ಬಿಟೆಕ್​ ಪದವಿಯನ್ನು ಶೇ 60ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿರಬೇಕು. ಅಂತಿಮ ವರ್ಷದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ
ಅಧಿಸೂಚನೆ

ವಯೋಮಿತಿ: ಗರಿಷ್ಠ ವಯೋಮಿತಿ 28 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ.

ಅರ್ಜಿ ಸಲ್ಲಿಕೆ ಹೇಗೆ?: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ವಜಾ ಮಾಡಲಾಗುತ್ತದೆ.

ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹40 ಸಾವಿರದಿಂದ ₹1,40,000 ವರೆಗೆ ವೇತನ ನಿಗದಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಮೊದಲ 5 ವರ್ಷಗಳ ಸೇವಾ ಒಪ್ಪಂದ ಬಾಂಡ್​​ಗೆ ಸಹಿ ಹಾಕಬೇಕಿದೆ.

ಆಗಸ್ಟ್​ 2ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಆಗಸ್ಟ್​ 22 ಕಡೆಯ ದಿನಾಂಕ. ಸೆಪ್ಟೆಂಬರ್​ 9 ರಿಂದ 11ರವರೆಗೆ ಪರೀಕ್ಷೆ ನಡೆಯಲಿದೆ. ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ಹಾಗೂ ಅಧಿಕೃತ ಅಧಿಸೂಚನೆಗೆ hal-india.co.in ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Gramin Dak Sevak Job: ಅಂಚೆ ಇಲಾಖೆಯಿಂದ ಬೃಹತ್​ ನೇಮಕಾತಿ.. ರಾಜ್ಯದಲ್ಲಿ 1714 ಡಾಕ್​ ಸೇವಕ್​ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.