ETV Bharat / state

ಅನುದಾನ ಬಿಡುಗಡೆಗೂ ಮೊದಲೇ ಜಾಬ್ ಕೋಡ್ ನೀಡಿ ಕಾಮಗಾರಿ: ಪದ್ಮನಾಭರೆಡ್ಡಿ ಆರೋಪ - ಅನುದಾನ

ಸರ್ಕಾರ 2018-19ನೇ ಸಾಲಿನಲ್ಲಿ ಪಾಲಿಕೆಗೆ 271.21 ಕೋಟಿ ರೂ. ಎಸ್ಎಫ್​ಸಿ ಅನುದಾನ ನೀಡಿದೆ. ಆ ಪೈಕಿ ಈಗಾಗಲೇ 233 ಕೋಟಿ ರೂ.ಗಳಿಗೆ ಪಾಲಿಕೆಯ ಅಧಿಕಾರಿಗಳು ಜಾಬ್ ಕೋಡ್ ನೀಡಿದ್ದಾರೆ. ಆದರೆ ಪಾಲಿಕೆಗೆ ಈವರೆಗೆ 68 ಕೋಟಿ ರೂ. ಮಾತ್ರ ಬಂದಿದ್ದು, ಇನ್ನೂ 165 ಕೋಟಿ ರೂ. ಬರಬೇಕಿದೆ ಎಂದಿದ್ದಾರೆ ಪದ್ಮನಾಭ ರೆಡ್ಡಿ.

ಬಿಬಿಎಂಪಿ
author img

By

Published : Feb 16, 2019, 1:10 PM IST

ಬೆಂಗಳೂರು: ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೊದಲೇ ಕೆಲ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ 55 ಕೋಟಿ ರೂ.ಗಳ ಜಾಬ್ ಕೋಡ್ ನೀಡಿ ಕಾಮಗಾರಿ ಆರಂಭಿಸಿದ್ದು, ಕೂಡಲೇ ಜಾಬ್ ಕೋಡ್ ಹಿಂಪಡೆಯಬೇಕೆಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.

ಸರ್ಕಾರ 2018-19ನೇ ಸಾಲಿನಲ್ಲಿ ಪಾಲಿಕೆಗೆ 271.21 ಕೋಟಿ ರೂ. ಎಸ್ಎಫ್​ಸಿ ಅನುದಾನ ನೀಡಿದೆ. ಆ ಪೈಕಿ ಈಗಾಗಲೇ 233 ಕೋಟಿ ರೂ.ಗಳಿಗೆ ಪಾಲಿಕೆಯ ಅಧಿಕಾರಿಗಳು ಜಾಬ್ ಕೋಡ್ ನೀಡಿದ್ದಾರೆ. ಆದರೆ ಪಾಲಿಕೆಗೆ ಈವರೆಗೆ 68 ಕೋಟಿ ರೂ. ಮಾತ್ರ ಬಂದಿದ್ದು, ಇನ್ನೂ 165 ಕೋಟಿ ರೂ. ಬರಬೇಕಿದೆ. ಅಧಿಕಾರಿಗಳು ಮಾತ್ರ ಅನುದಾನ ಬರುವ ಮೊದಲೇ ಜಾಬ್ ಕೋಡ್ ನೀಡಿ ಕೆಲಸ ಆರಂಭಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಎರಡು ಕ್ಷೇತ್ರಗಳಿಗೆ 55 ಕೋಟಿ ರೂ. ಜಾಬ್ ಕೋಡ್:

ಜೆಡಿಎಸ್ ಶಾಸಕರು ಪ್ರತಿನಿಧಿಸುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 30 ಕೋಟಿ ರೂ. ಹಾಗೂ ಮಹಾಲಕ್ಷ್ಮೀ ಲೇಔಟ್​ಗೆ 25 ಕೋಟಿ ರೂ. ಸೇರಿ ಒಟ್ಟು 55 ಕೋಟಿ ರೂ.ಗಳಿಗೆ ಅನುದಾನ ಬರುವ ಮೊದಲೇ ಜಾಬ್ ಕೋಡ್ ನೀಡಿ, ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಳೆದ ವರ್ಷ ಪುಲಿಕೇಶಿನಗರಕ್ಕೆ 25 ಕೋಟಿ ರೂ. ಹಾಗೂ ಚಾಮರಾಜಪೇಟೆಗೆ 30 ಕೋಟಿ ರೂ.ಗಳನ್ನು ಎಸ್ಎಫ್​ಸಿ ಅನುದಾನದಲ್ಲಿ ನೀಡುವುದಾಗಿ ಕಾಮಗಾರಿ ಆರಂಭಿಸಲು ಸರ್ಕಾರ ಆದೇಶಿಸಿತ್ತು. ಈವರೆಗೆ ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಿಲ್ಲ. ಹೀಗಾಗಿ ಸರ್ಕಾರದ ಆದೇಶದಂತೆ ಎಸ್ಎಫ್​ಸಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾದರೆ ಪಾಲಿಕೆಯ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದರು.

Intro:Body:

ಸ್ಟೇಟ್18

ಅನುದಾನ ಬಿಡುಗಡೆಗೂ ಮೊದಲೇ ಜಾಬ್ ಕೋಡ್ ನೀಡಿ ಕಾಮಗಾರಿ: ಪದ್ಮನಾಭರೆಡ್ಡಿ ಆರೋಪ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.