ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಬಳಿಕವೂ ಜೆಡಿಎಸ್ ಶಾಸಕರು ರೆಸಾರ್ಟ್‌ನಿಂದ ಹೊರ ಬಾರದೇ ಅಲ್ಲೇ ಉಳಿದುಕೊಂಡಿದ್ದಾರೆ.
ನಿನ್ನೆಯಿಂದ ಸುಪ್ರೀಂ ಕೋರ್ಟ್ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿರುವ ಜೆಡಿಎಸ್ ಶಾಸಕರು ರೆಸಾರ್ಟ್‌ನಿಂದ ಹೊರಬಂದಿಲ್ಲ. ಎಂದಿನಂತೆ ಇಂದು ಮುಂಜಾನೆ ಎದ್ದು ಯೋಗ, ವ್ಯಾಯಾಮಗಳನ್ನು ಮಾಡಿ, ಅನಂತರ ತಿಂಡಿ ಮುಗಿಸಿದರು. ಬಳಿಕ ಸುಪ್ರಿಂ ಕೋರ್ಟ್ ತೀರ್ಪಿಗಾಗಿ ಟಿವಿಯಲ್ಲಿ ಎದುರು ನೋಡುತ್ತಿದ್ದರು. ಸುಪ್ರಿಂ ತೀರ್ಪಿಗಾಗಿ ಕಾಯುತ್ತಿದ್ದ ಶಾಸಕರು ತೀರ್ಪಿನ ಕ್ಷಣ ಕ್ಷಣದ ಅಪ್ಡೇಟ್ ಪಡೆದುಕೊಳ್ಳುತ್ತಿದ್ದರು.
ಈ ನಡುವೆ ಶಾಸಕ ಶಿವಲಿಂಗೇಗೌಡ ಮಾತ್ರ ತೀರ್ಪು ಬಂದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಸುಪ್ರೀಂ ತೀರ್ಪಿನಿಂದ ಸಮ್ಮಿಶ್ರ ಸರ್ಕಾರ ಏನಾಗಲಿದೆಯೋ ಎಂಬ ಭಯದಲ್ಲಿರುವ ಶಾಸಕರು, ಈ ಬಗ್ಗೆ ಪ್ರತಿಕ್ರಿಯಿಸಲು ತೋಚದೆ ತಮ್ಮ ಫೋನ್ಗಳನ್ನು ಕೂಡ ರಿಸೀವ್ ಮಾಡುತ್ತಿಲ್ಲ ಎನ್ನಲಾಗಿದೆ. ಹಾಗೇ ಯಾರ ಸಂಪರ್ಕಕ್ಕೂ ಸಿಗದೇ ರೆಸಾರ್ಟ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.