ಬೆಂಗಳೂರು: ದಿನ ಕಳೆದಂತೆ ಶಾಸಕರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗುತ್ತಿದೆ. ಸರ್ಕಾರ ಉಳಿಸಿಕೊಳ್ಳಲು ಒಬ್ಬರ ಹಿಂದೆ ಮತ್ತೊಬ್ಬರು ದೇಗುಲಗಳಿಗೆ ಹೋಗುವುದು, ಪೂಜೆ, ಹೋಮ ಹವನಗಳನ್ನು ಮಾಡಿಸುವುದು ನಿರಂತರ ಕಾಯಕವಾದಂತಿದೆ.
ಸದ್ಯ ಈ ಕಾಯಕದಲ್ಲಿ ನಿರತರಾಗಿರುವವರು ಸಹಕಾರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ. ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಕಾಲ ಕಳೆಯುತ್ತಿದ್ದ ಸಚಿವರು, ರೆಸಾರ್ಟ್ ಬಳಿಯಲ್ಲಿರುವ ಕತ್ತಿಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ಉಳಿಯಲು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.