ETV Bharat / state

ಇಂದಿನಿಂದ ಎರಡನೇ ಹಂತದ ಜನತಾ ಸಂಗಮ ಕಾರ್ಯಾಗಾರ: ಜೆಡಿಎಸ್ ಕಚೇರಿ ಸಿದ್ಧ - ಜನತಾ ಸಂಗಮ ಕಾರ್ಯಾಗಾರ ಹಮ್ಮಿಕೊಂಡಿರುವ ಜೆಡಿಎಸ್​

ಜೆಡಿಎಸ್​ ಪಕ್ಷ ಇಂದಿನಿಂದ ನವೆಂಬರ್​.17ರವರೆಗೆ ಎರಡನೇ ಹಂತದ ಜನತಾ ಸಂಗಮ ಕಾರ್ಯಾಗಾರ‌ ಹಮ್ಮಿಕೊಂಡಿದೆ. ಇದಕ್ಕಾಗಿ ಪಕ್ಷದ ಕಚೇರಿ ಸಿದ್ಧಗೊಂಡಿದೆ.

author img

By

Published : Nov 8, 2021, 1:25 PM IST

ಬೆಂಗಳೂರು : ಪಕ್ಷ ಸಂಘಟನೆಗಾಗಿ ಇಂದಿನಿಂದ ಜೆಡಿಎಸ್​​, ಎರಡನೇ ಹಂತದ ಜನತಾ ಸಂಗಮ ಕಾರ್ಯಾಗಾರ‌ ಆರಂಭಿಸಿದ್ದು, ಹಿರಿಯ ಪತ್ರಕರ್ತ, ಮಾಜಿ ವಿಧಾನಪರಿಷತ್​​​ ಸದಸ್ಯ ಪಿ.ರಾಮಯ್ಯನವರು ಜನತಾ ಪತ್ರಿಕೆಯನ್ನು ಬಿಡಗಡೆಗೊಳಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ.

ಮುಂದಿನ ಚುನಾವಣೆ ಸಿದ್ಧತೆಯೂ ಸೇರಿದಂತೆ ಪಕ್ಷವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆಗಾಗಿ ಜೆಡಿಎಸ್​ ವರಿಷ್ಠರು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಇಂದಿನಿಂದ ನವಂಬರ್ 17ರವರೆಗೆ ಜನತಾ ಸಂಗಮ 1.O ಎರಡನೇ ಹಂತದ ಕಾರ್ಯಾಗಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯಲಿದೆ.

ಕಚೇರಿ ಆವರಣದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಬಿತ್ತರಿಸಲಾಗಿದೆ. ಅದರಂತೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಸರ್ಕಾರ ರಚನೆಯಾದರೆ ರಾಜ್ಯಕ್ಕೆ ನೀಡುವ ಪಂಚ ರತ್ನದ ಯೋಜನೆಗಳ ಬಗ್ಗೆಯೂ ಬಿತ್ತರಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಪಕ್ಷದ ಶಾಸಕರು, ಹಾಲಿ,‌ ಮಾಜಿ ಶಾಸಕರು ಸೇರಿದಂತೆ ಅನೇಕ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಮುಖ್ಯವಾಗಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಪ್ರತಿದಿನ ಎರಡು ಜಿಲ್ಲೆಗಳನ್ನು ಒಳಗೊಂಡಂತೆ ಕಾರ್ಯಾಗಾರ ನಡೆಯಲಿದೆ. ಮೊದಲ ದಿನ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿನಿಧಿಗಳ ಜೊತೆ ವರಿಷ್ಠರು ಸಮಾಲೋಚನೆ ನಡೆಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳು ಹಾಗೂ ಮುಖಂಡರು, ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸುವುದು ಈ ಕಾರ್ಯಾಗಾರದ ಬಹುಮುಖ್ಯ ಉದ್ದೇಶವಾಗಿದೆ.‌

ಕಾರ್ಯಾಗಾರ ನಡೆಯುವ ಸ್ಥಳದ ಮಾಹಿತಿ:

  • ನ.9 ರಂದು ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ಬೀದರ್‌, ಯಾದಗಿರಿ, ಕಲಬುರಗಿ
  • ನ.10ರಂದು ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಉತ್ತರ ಕನ್ನಡ, ಗದಗ, ಹಾವೇರಿ, ದಾವಣಗೆರೆ
  • ನ.‌11ರಂದು ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ, ಕೊಡಗು
  • ನ.‌12ರಂದು ಚಾಮರಾಜನಗರ, ಮಂಡ್ಯ, ಮೈಸೂರು, ಮೈಸೂರು ನಗರ
  • ನ.13ರಂದು ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು
  • ನ. 15ರಂದು ಬೆಳಗಾವಿ, ಚಿಕ್ಕೋಡಿ, ಹಾಸನ
  • ನ. 16ರಂದು ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ
  • ನ.17ರಂದು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಮುಖಂಡರ ಸಭೆ

ಇದನ್ನೂ ಓದಿ: ಬೆಳಗಾವಿಯ 4 ಕಡೆ IT Raid: ಹಲವು ಜ್ಯುವೆಲ್ಲರ್ಸ್ ಸೇರಿ ಮಾಲೀಕರ ಮನೆ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.