ETV Bharat / state

ಕಿಂಗ್​ ಇಲ್ಲ, ಕಿಂಗ್​ ಮೇಕರ್​ ಆಗಲಿಲ್ಲ; ಕುಮಾರಸ್ವಾಮಿ ಲೆಕ್ಕಾಚಾರ ಉಲ್ಟಾ

author img

By

Published : May 13, 2023, 5:07 PM IST

ತಾವೇ ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದಾಗಿ ಲೆಕ್ಕಾಚಾರ ನಡೆಸಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಚುನಾವಣಾ ಫಲಿತಾಂಶ ಶಾಕ್​ ನೀಡಿದೆ.

JDS HD Kumaraswamy calculation goes wrong in Karnataka Election Result 2023

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿ ತಾವೇ ಕಿಂಗ್​ ಆಗಲಿದ್ದೇವೆ. ಜೆಡಿಎಸ್​ ಪಕ್ಷ ಕಿಂಗ್​ ಮೇಕರ್​ ಆಗಲಿದೆ ಎಂದು ಭಾವಿಸಿದ್ದ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ಅವರ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಸ್ವಂತ ಶಕ್ತಿ ಬಲದಿಂದಲೇ ಜೆಡಿಎಸ್​ ಸರ್ಕಾರ ರಚನೆ ಮಾಡುವ ಮೂಲಕ ಕಿಂಗ್​ ಆಗಲಿದೆ. ಅತಂತ್ರ ವಿಧಾನಸಭೆ ರಚನೆಯಾದರೆ, ಜೆಡಿಎಸ್​​ ಕಿಂಗ್​ ಮೇಕರ್​ ಆಗಲಿದೆ. ತಾವೇ ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದಾಗಿ ಲೆಕ್ಕಾಚಾರ ಹಾಕಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚುನಾವಣಾ ಫಲಿತಾಂಶದಿಂದ ಭ್ರಮ ನಿರಸವಾಗಿದೆ.

ಇಂದು ಬೆಳಗೆ 10ಗಂಟೆ ತನಕವೂ ಅತಂತ್ರ ವಿಧಾನಸಭೆ ರಚನೆಯಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಜೆಡಿಎಸ್​ನ ಮುಖಂಡರು ಭಾವಿಸಿದ್ದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಭರ್ಜರಿ ಬಹುಮತ ಸಿಕ್ಕಿದ್ದರಿಂದ ಅಧಿಕಾರಕ್ಕೆ ಬರುವ ಜೆಡಿಎಸ್​ ಕನಸು ಭಗ್ನಗೊಂಡಿದೆ.

ಕುಸಿದ ಕ್ಷೇತ್ರಗಳ ಸಂಖ್ಯೆ: ಜಾತ್ಯತೀತ ಜನತಾದಳಕ್ಕೆ ಮತದಾರರು ಜೆಡಿಎಸ್​ ನಿರೀಕ್ಷಿಸಿದ ಸೀಟ್​ಗಳನ್ನು ನೀಡಿಲ್ಲ. ಕಳೆದ 2018ರ ಚುನಾವಣೆಯಲ್ಲಿ 37 ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್​ ಈ ಬಾರಿ 19 ಸೀಟುಗಳನ್ನು ಗೆದ್ದು ಕಳಪೆ ಸಾಧನೆ ಮಾಡಿದೆ. ಈ ಫಲಿತಾಂಶದಿಂದ ಜೆಡಿಎಸ್​ ಅಧಿಕಾರಕ್ಕೆ ಬರುವುದಿರಲಿ, ಪಕ್ಷದ ಅಸ್ತಿತ್ವವೇ ಕಷ್ಟವಾಗಿದೆ.

ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚೆನ್ನಪಟ್ಟಣದಲ್ಲಿ ಗೆದ್ದರೂ, ಜೆಡಿಎಸ್​ ಭದ್ರಕೋಟೆ ರಾಮನಗರದಲ್ಲಿ ಪುತ್ರ ನಿಖಿಲ್​ ಕುಮಾರಸ್ವಾಮಿ ಸೋಲು ದೇವೇಗೌಡರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಸ್ಥಿತಿಯಾಗಿದೆ.

ಕ್ಷೇತ್ರ ಉಳಿಸಿಕೊಳ್ಳುವಲ್ಲಿ ವಿಫಲ: ಜೆಡಿಎಸ್​ನ ಭದ್ರಕೋಟೆ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ 7ಕ್ಕೆ 7 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್​, ಈ ಬಾರಿ ಮಂಡ್ಯದಲ್ಲಿ ಕೇವಲ 1 ಕ್ಷೇತ್ರಕ್ಕೆ ಸೀಮಿತಗೊಂಡಿದೆ. ರಾಮನಗರ ಜಿಲ್ಲೆಯಲ್ಲಿ ರಾಮನಗರ ಮತ್ತು ಮಾಗಡಿಯಲ್ಲಿ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಇಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಹಾಸನ ಜಿಲ್ಲೆಯಲ್ಲಿ ಜೆಡಿಎಸ್​ ಕ್ಷೇತ್ರಕ್ಕೆ ಪ್ರತಿಷ್ಠೆಯ ಕಣವಾಗಿದ್ದ ಅರಸೀಕೆರೆಯಲ್ಲಿ ಪಕ್ಷ ಸೋತಿದೆ. ಬೇಲೂರು, ಸಕಲೇಶಪುರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಜೆಡಿಎಸ್​ ಮತ್ತು ದೇವೇಗೌಡರ ಕುಟುಂಬದ ಪಾಲಿಗೆ ಮಹತ್ತರದ್ದಾಗಿದ್ದ ಹಾಸನ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ಅವರನ್ನು ಪರಾಭವಗೊಳಿಸಿ, ದೇವೇಗೌಡರನ್ನು ಟೀಕಿಸಿದ್ದ ಪ್ರೀತಂಗೌಡಕ್ಕೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದೆ.

ಈ ಚುನಾವಣೆಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದ ಜೆಡಿಎಸ್​ ನಾಯಕರಿಗೆ ಇದರಲ್ಲಿ ಅರ್ಧದಷ್ಟು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಅತಂತ್ರ ವಿಧಾನಸಭೆ ಆಗುತ್ತದೆ ಎಂಬ ಜೆಡಿಎಸ್​ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​ನ ಕೈ ಹಿಡಿದ ಐದು 'ಗ್ಯಾರಂಟಿ' ಭರವಸೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.