ETV Bharat / state

2ಎ ಗೆ ಪಂಚಮಸಾಲಿ : ಹೋರಾಟ ಮುಂದುವರೆಸಲು ಜಯಮೃತ್ಯುಂಜಯ ಶ್ರೀ ಕರೆ - panchama shali protest

ಮೀಸಲಾತಿ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಮುದಾಯದ ಹಿರಿಯರ ಸಲಹಾ ಸಮಿತಿ ರಚಿಸುವ ನಿರ್ಧಾರ ಪ್ರಕಟವಾಗಿದ್ದು, ಈ ಸಮಿತಿಯು ಸರ್ಕಾರದೊಂದಿಗೆ ಮೀಸಲಾತಿ ಕುರಿತು ಮಾತುಕತೆ ನಡೆಸಲಿದೆ. ಮಾರ್ಚ್ 4ರಂದು ಸಂಜೆ ಮತ್ತೆ ಸಲಹಾ ಸಮಿತಿ ಮತ್ತು ಶಾಸಕರ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

Jaya Mrutyunjaya swamiji announced for continuous protest against Govt
ಮತ್ತೇ ಹೋರಾಟ ಮುಂದುವರೆಸಲು ಕರೆ ನೀಡಿದ ಜಯಮೃತ್ಯಂಜಯ ಶ್ರೀ
author img

By

Published : Feb 25, 2021, 9:57 PM IST

Updated : Feb 25, 2021, 10:53 PM IST

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮುಂದುವರೆಸುವ ಬಗ್ಗೆ ನಿರ್ಧಾರ ಪ್ರಕಟಿಸಲಾಗಿದೆ.

ಮೀಸಲಾತಿ ಕುರಿತ ಹೋರಾಟವನ್ನು ಯಾವ ರೀತಿ ಮುಂದುವರೆಸಬೇಕು ಎನ್ನುವ ಕುರಿತು ಗಾಂಧಿನಗರದ ಖಾಸಗಿ ಹೋಟೆಲ್ ನಲ್ಲಿ ಸಮುದಾಯದ ಪ್ರಮುಖರೊಂದಿಗೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಸರ್ಕಾರದ ನಿರ್ಧಾರವನ್ನು ನೋಡಿಕೊಂಡು ಉಪವಾಸ ಸತ್ಯಾಗ್ರಹ ನಿರ್ಧಾರವನ್ನು ಮಾರ್ಚ್ 4 ರ ಸಂಜೆ 4 ಗಂಟೆಗೆ ಪುನರ್ ಪರಿಶೀಲನೆ ನಡೆಸುತ್ತೇವೆ. ಅಲ್ಲಿಯವರೆಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ಹಿರಿಯರ ಸಲಹಾ ಸಮಿತಿ ರಚಿಸುವ ನಿರ್ಧಾರ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹೋರಾಟ ಮುಂದುವರೆಸಲು ಕರೆ ನೀಡಿದ ಜಯಮೃತ್ಯುಂಜಯ ಶ್ರೀ

ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು,ಮುಂದಿನ ಹೋರಾಟದ ರೂಪುರೇಷೆ ಮಾಡಲು ಹಾಗು ಮೀಸಲಾತಿ ಅನುಷ್ಠಾನ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲು ಹಿರಿಯರ ಚಿಂತಕರನ್ನೊಳಗೊಂಡ ಸಲಹಾ ಸಮಿತಿ ರಚನೆ ಮಾಡಲಿದ್ದು, ಸರ್ಕಾರದ ಜೊತೆ ಮಾತುಕತೆ ನಡೆಸಲು ಆ ಸಮಿತಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ ಎಂದರು.

ಮಾರ್ಚ್ 4 ರವರೆಗೂ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮುಂದುವರೆಸಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದು, ಅಂದಿನವರೆಗೂ ನಮಗೆ ಸ್ಪಷ್ಟ ಭರವಸೆ ಸಿಗದೇ ಇದ್ದಲ್ಲಿ ಮಾರ್ಚ್ 4 ರಂದು ಸಂಜೆ 4 ಗಂಟೆಗೆ ಸಲಹಾ ಸಮಿತಿ ಮತ್ತು ಶಾಸಕರ ಸಭೆ ಕರೆದು ಆಮರಣಾಂತ ಉಪವಾಸ ಸತ್ಯಾಗ್ರಹದ ದಿನಾಂಕವನ್ನು ನಿಗದಿಪಡಿಸಲು ಹಾಗೂ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು ಎಂದು ಮಾಹಿತಿ ನೀಡಿದರು.

ಬಜೆಟ್ ಅಧಿವೇಶನ ಮಾರ್ಚ್ 31 ರವರೆಗೂ ನಡೆಯಲಿದೆ ಹಾಗಾಗಿ ಮಾರ್ಚ್ 4 ರಂದು ಮತ್ತೊಮ್ಮೆ ಸಭೆಗೆ ನಿರ್ಧರಿಸಲಾಗಿದೆ. ಸದನದಲ್ಲಿ ಎಷ್ಟು ದಿನದಲ್ಲಿ ಮೀಸಲಾತಿ ನೀಡಲಾಗುತ್ತದೆ, ಹಿಂದುಳಿದ ವರ್ಗಗಳ ಆಯೋಗದ ವರದಿ ಯಾವಾಗ ಬರಲಿದೆ, ಎಷ್ಟು ಸಮಯದಲ್ಲಿ ಮೀಸಲಾತಿ ನಿರ್ಧಾರ ಪ್ರಕಟಿಸಲಾಗುತ್ತದೆ ಎನ್ನುವ ಸ್ಪಷ್ಟ ನಿರ್ಧಾರವನ್ನು ಮಾರ್ಚ್ 4 ರಂದು ಸದನದಲ್ಲಿ ಸಿಎಂ ಯಡಿಯೂರಪ್ಪ ಪ್ರಕಟಿಸಬೇಕು ಇಲ್ಲದೇ ಇದ್ದಲ್ಲಿ ಮುಂದಿನ ಹೋರಾಟದ ಸ್ವರೂಪ ಕುರಿತು ನಾವು ಅಂದು ಸಂಜೆ ನಿರ್ಧರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಅಧ್ಯಯನ ವರದಿ ಬೇಡ:

2011 ರಲ್ಲಿ ಬಲಿಜ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ 2ಎಗೆ ಯಡಿಯೂರಪ್ಪ ಅವರೇ ಸೇರಿಸಿದ್ದಾರೆ. ಅಂದು ಯಾವುದೇ ಅಧ್ಯಯನ ವರದಿ ಪಡೆಯದೇ ನಿರ್ಧಾರ ಕೈಗೊಂಡಿದ್ದರು. ಅದೇ ರೀತಿ ಈಗಲೂ ಕೈಗೊಳ್ಳಬಹುದು ಎಂದು ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದರು.

ಅಖಿಲ ಭಾರತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಮ್ಮ ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಎಲ್ಲ ಪಕ್ಷದ ಶಾಸಕರು ಮೀಸಲಾತಿ ವಿಚಾರವನ್ನು ಸದನದಲ್ಲಿ ಒಕ್ಕೊರಲ ದನಿಯಿಂದ ಪ್ರಸ್ತಾಪ ಮಾಡಬೇಕು ಮತ್ತು ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡುವಂತೆ ಪದಾಧಿಕಾರಿಗಳು ಸೂಚನೆ ನೀಡಲು ನಿರ್ಧರಿಸಲಾಯಿತು. ‌ಶಾಸಕರು, ಸಚಿವರ ಮನೆಗೆ ಹೋಗಿ ನಮ್ಮ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದರು.

Last Updated : Feb 25, 2021, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.