ಬೆಂಗಳೂರು: ರಾಜಧಾನಿಯಲ್ಲಿ ಐಟಿ ದಾಳಿ ಮುಂದುವರೆದಿದ್ದು, ಕಾಂಗ್ರೆಸ್ ಮುಖಂಡರ ಆಪ್ತರ ಮನೆ ಮೇಲೆ ದಾಳಿ ನಡೆದಿದೆ.
ಕಾಂಗ್ರೆಸ್ ನಾಯಕರಾದ ಸತೀಶ್ ಹಾಗೂ ಪರಮೇಶ್ವರ್ ಎಂಬುವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿವೆ. ಜಯನಗರದ ಅಶೋಕ್ ಪಿಲ್ಲರ್ ಬಳಿಯ ನಿವಾಸ ಹಾಗೂ ವಿಜಯ್ ಲಕ್ಷ್ಮಿ ವಾಟರ್ ಸರ್ವೀಸ್ ಹೆಸರಿನ ಕಚೇರಿ ಮೇಲೆ ಚುನಾವಣಾ ಅಕ್ರಮದ ಸಂಶಯದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನ ಕೆಲ ಕಾಂಗ್ರೆಸ್ ಮುಖಂಡರ ಆಪ್ತರಾಗಿರುವ ಸತೀಶ್, ಕಾಂಗ್ರೆಸ್ ಮುಖಂಡ ಪರಮೇಶ್ವರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ. ಸತತ 24 ಗಂಟೆಯಿಂದ ನಾಲ್ವರು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.