ETV Bharat / state

ರಾಜಕಾರಣಿಗಳಷ್ಟೇ ಅಲ್ಲ, ಉದ್ಯಮಿಗಳನ್ನೂ ಗುರಿಯಾಗಿಸಿಕೊಂಡು ದಾಳಿ: ಐಟಿ ಇಲಾಖೆ ಸ್ಪಷ್ಟನೆ - clarification

ರಾಜ್ಯದ್ಯಾಂತ ಐಟಿ ದಾಳಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಐಟಿ ದಾಳಿ‌ ಪ್ರಕರಣ
author img

By

Published : Mar 28, 2019, 4:52 PM IST

ಬೆಂಗಳೂರು:ತಡರಾತ್ರಿಯಿಂದ ನಡೆದಿರುವ ಐಟಿ ದಾಳಿಯು ಉದ್ದೇಶಪೂರ್ವಕವಲ್ಲ. ರಾಜಕಾರಣಿಗಳಷ್ಟೇ ಅಲ್ಲ ಉದ್ಯಮಿಗಳ ಮನೆ ಮೇಲೂ ರೇಡ್​ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಈ ಸಂಬಂಧ ಪ್ರಕಟಣೆ ಬಿಡುಗಡೆ ಮಅಡಿರುವ ಐಟಿ ಇಲಾಖೆ, ಕೇವಲ ಎಂಪಿ, ಎಂಎಲ್​ಎ ಹಾಗೂ ಸಚಿವರ ಕಚೇರಿ‌ ಮತ್ತು ಮನೆ ಮೇಲೆ ದಾಳಿ ನಡೆದಿಲ್ಲ. ಉದ್ಯಮಿಗಳ ಮನೆ ಮೇಲೂ ರೇಡ್​ ನಡೆದಿದೆ.

ನಾವು ಸಿಆರ್​​ಪಿಎಫ್​ ಬಳಸಿದ್ದು ನಿಜ, ಇದು ಪ್ರೋಟೋಕಾಲ್ ಪ್ರಕಾರ ನಡೆದಿದೆ. ದಾಳಿಗೂ ಮುನ್ನ ಈ ಬಗ್ಗೆ ರಾಜ್ಯ ಪೊಲೀಸ್​ ಇಲಾಖೆಯ ಗಮನಕ್ಕೆ ತಂದಿದ್ದೆವು. ಇವತ್ತಿನ ದಾಳಿ ಉದ್ಯಮಿಗಳು, ಎಂಎನ್​ಸಿ ಕಂಪೆನಿ, ಗಣಿ ಉದ್ಯಮಿಗಳು, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ಮೀನುಗಾರಿಕೆ, ಮೆಡಿಕಲ್ ಕಾಲೇಜು, ಫಿಲ್ಮ್ ಇಂಡಸ್ಟ್ರಿ ಹಾಗೂ ರಾಜಕೀಯ ಪ್ರೇರಿತವಾದ ವ್ಯಕ್ತಿಗಳ ಮೇಲೂ ದಾಳಿ ನಡೆದಿದೆ. ತೆರಿಗೆ ವಂಚನೆಯಾಗಿದ್ದೆ ಈ ಎಲ್ಲಾ ದಾಳಿಗೆ ಕಾರಣ.

ಇದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಅಧಿಕೃತ ಪಡೆದುಕೊಂಡೇ ದಾಳಿ ಮಾಡಲಾಗಿದೆ. ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ರಾಜಕೀಯ ಪಕ್ಷಗಳು ನಮಗೆ ಸಹಕಾರ ನೀಡಬೇಕು. ಈ ದಾಳಿ ಯಾವುದೇ ರಾಜಕೀಯ ಪ್ರೇರಿತವಲ್ಲ. ವೈಯಕ್ತಿಕ ದಾಳಿಯೂ ಅಲ್ಲ ಎಂದು ಕರ್ನಾಟಕ ಹಾಗೂ ಗೋವಾ ಆದಾಯ ಇಲಾಖೆಯು ಅಧಿಕೃತ ಸ್ಪಷ್ಟನೆ ನಿಡಿದೆ.

KN_BNg_05_it raid_7204498_ bhavya

Bhavya

 Pres not group ede

ಸಿಎಂ ಐಟಿ ದಾಳಿ‌ಕುರಿತು ಮಾಹಿತಿ ನಿಡಿದ್ರು 
ಆದ್ರೆ ಸಿಎಂ ಆಪ್ತರ ಮೇಲೆ ದಾಳಿ ನಡೆದಿಲ್ಲ ಐಟಿ ಸ್ಪಷ್ಟನೆ

ರಾಜ್ಯದ್ಯಾಂತ ಐಟಿ ದಾಳಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ
ಅಧಿಕೃತವಾಗಿ ಐಟಿ ಅಧಿಕಾರಿಗಳು ಪತ್ರಿಕಾ ಪ್ರಕಟನೆ  ಬಿಡುಗಡೆ ಮಾಡಿದ್ದಾರೆ..

ಇವತ್ತು ನಡೆದ ದಾಳಿ ಯಲ್ಲಿ mp,MLa, ಸಚಿವರ ಕಚೇರಿ‌ ಮನೆ ಮೇಲೆ ದಾಳಿ ನಡೆದಿಲ್ಲ.. ಈ ಕುರಿತು ನಿನ್ನೆ  ಸಿಎಂ ಪ್ರತಿಕ್ರಿಯೆ ನೀಡಿದ್ರು. ಐಟಿ ದಾಳಿ ನಡೆಯುತ್ತೆ  ಅನ್ನೋ ಮಾಹಿತಿ  ಆದ್ರೆ ಸಿಎಂ ಆಪ್ತರ ಮೇಲೆ ದಾಳಿ  ನಡೆದಿಲ್ಲ.. ನಾವು ಸಿಆರ್ ಪಿಎಫ್ ಬಳಸಿದ್ದು ನಾರ್ಮಾಲಿ ಪ್ರೋಟೊಕಲ್ ಪ್ರಕಾರ  ಬಳಸಿದ್ದಿವಿ. ರಾಜ್ಯ ಪೊಲೀಸ್ ಇಲಾಖೆಗೆ ಗಮನಕ್ಕೆ ತಂದಿದ್ದಿವಿ. ಇವತ್ತಿನ ದಾಳಿ ಉದ್ಯಮಿಗಳು  ,MNc ಕಂಪೆನಿ, ಗಣಿ ಉದ್ಯಮಿಗಳು ಡಯೋಗ್ನೆಸ್ಟಿಕ್ ಸೆಂಟರ್, ಶಿಕ್ಷಣಸಂಸ್ಥೆ,ರಿಯಾಲ್ ಎಸ್ಟೇಟ್ ,ಮೀನುಗಾರಿಕೆ, ಮೆಡಿಕಲ್ ಕಾಲೇಜುಗಳು,ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಫಿಲ್ಮ್ ಇಂಡಸ್ಟ್ರಿ ರಾಜಕೀಯ ಪ್ರೇರಿತವಾದ ವ್ಯಕ್ತಿಗಳ ಮೇಲೂ ದಾಳಿ ನಡೆದಿದೆ..ಎಲ್ಲಾ ದಾಳಿಗೂ ಕಾರಣ ತೆರಿಗೆ ವಂಚನೆಯಾಗಿದ್ದವು.. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಅಧಿಕೃತ ಪಡೆಸಿಕೊಂಡು ದಾಳಿ ಮಾಡಿದ್ದೇವೆ.. ನಾವು ಎಲ್ಲವೂ ಕೂಡ ಕಾನೂನು ಪ್ರಕಾರವೇ ದಾಳಿ ನಡೆಸಿದ್ದೇವೆ.. ರಾಜಕೀಯ ಪಕ್ಷಗಳು ನಮಗೆ ಸಹಕಾರ ನೀಡಬೇಕು..ಈ ದಾಳಿ "ಯಾವುದೇ ರಾಜಕೀಯ ಪ್ರೇರಿತವಲ್ಲ.. ವೈಯುಕ್ತಿಕ ದಾಳಿಯಲ್ಲ,ದ್ಚೇಷದ ದಾಳಿಯಲ್ಲ"ಕರ್ನಾಟಕ ಹಾಗೂ ಗೋವಾ ಆದಾಯ ಇಲಾಖೆಯ ಅಧಿಕೃತ ಸ್ಪಷ್ಟನೆ ನಿಡಿದ್ದರೆ. ಹಾಗೆ
ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಲ್ಲ ಎಂದು ಸ್ಫಷ್ಟನೆ ನೀಡಿದ್ದಾರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.