ಬೆಂಗಳೂರು: ನಾಗರಿಕ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಸಹಕಾರ ಹೆಚ್ಚಿಸಲು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಮತ್ತು ಇಸ್ರೋ ಇಂದು ಒಪ್ಪಂದಕ್ಕೆ ಸಹಿ ಹಾಕಿದೆ.
ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿ "ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಇದು ನಿರ್ಮಿಸುತ್ತದೆ" ಎಂದು ಹೇಳಿದೆ
"ಈಗ, ಆಸ್ಟ್ರೇಲಿಯಾ ಮತ್ತು ಭಾರತೀಯ ಏಜೆನ್ಸಿಗಳ ವಿಶಾಲ ವ್ಯಾಪ್ತಿಯಿದೆ. ಅದು ಒಪ್ಪಂದದಡಿ ಕೆಲಸವನ್ನು ಸಂಘಟಿಸಬಹುದು" ಎಂದು ಹೇಳಿಕೆಯಲ್ಲಿ ತಿಳಿಸಿದೆ.
"2016 ರಲ್ಲಿ, ಆಸ್ಟ್ರೇಲಿಯಾದ ಬಾಹ್ಯಾಕಾಶ ಕೈಗಾರಿಕಾ ಸಂಘವು ಬೆಂಗಳೂರು ಬಾಹ್ಯಾಕಾಶ ಎಕ್ಸ್‌ಪೋದಲ್ಲಿ ನಿಯೋಗವೊಂದನ್ನ ರಚನೆ ಮಾಡಲಾಗಿತ್ತು. 2017 ರಲ್ಲಿ, ಇಸ್ರೋ ನಿಯೋಗವು ಅಡಿಲೇಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ಕಾಂಗ್ರೆಸ್‌ನಲ್ಲಿ ಭಾಗವಹಿಸಿತ್ತು. ಮತ್ತು ಸಿಎಸ್‌ಸಿ ಒಪ್ಪಂದಕ್ಕೆ ಔಪಚಾರಿಕ ಅನುಷ್ಠಾನಕ್ಕೆ ರೂಪುರೇಷೆ ರಚನೆ ಮಾಡಲಾಗಿತ್ತು" ಎಂದು ಕಾನ್ಸುಲೇಟ್ ಜನರಲ್ ಕಚೇರಿ ತಿಳಿಸಿದೆ.
ಆಸ್ಟ್ರೇಲಿಯಾದ ವಾಣಿಜ್ಯ ಮಂತ್ರಿ ಬರ್ಮಿಂಗ್ಹ್ಯಾಮ್ ಇಸ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ನವೆಂಬರ್ 2020ರಲ್ಲಿ, ಮಾರಿಸನ್ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.