ETV Bharat / state

ಕೋವಿಡ್​-19 ಆತಂಕ: ನಾಳೆಯಿಂದ ಇಸ್ಕಾನ್​ ದೇವಸ್ಥಾನ ಪ್ರವೇಶಕ್ಕೂ ನಿರ್ಬಂಧ - ಇಸ್ಕಾನ್​ ದೇವಸ್ಥಾನ

ದೇಶದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್​ನಿಂದಾಗಿ ಜನಜೀವನವೇ ಅಸ್ತವ್ಯಸ್ತವಾಗಿದೆ. ದಿನೇ ದಿನೇ ವೈರಸ್​ ಸೋಂಕಿತರು ಹೆಚ್ಚಾಗುತ್ತಿದ್ದು, ಸರ್ಕಾರ ಅಗತ್ಯ ಕ್ರಮಗಳಿಗೆ ಮುಂದಾಗಿದೆ.

iskcon radha krishna temple closed due to corona effect in bangalore
ಇಸ್ಕಾನ್​ ದೇವಸ್ಥಾನಕ್ಕೆ ನಿರ್ಬಂಧ
author img

By

Published : Mar 17, 2020, 9:19 PM IST

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯ ನಾಳೆಯಿಂದ (ಮಾ. 18) ಬರುವ ಭಕ್ತರಿಗೆ ನಿರ್ಬಂಧ ಹೇರಿದೆ. ಮುಂದಿನ ಸೂಚನೆವರೆಗೆ ಭಕ್ತರು ಇದನ್ನು ಪಾಲಿಸುವಂತೆ ಮನವಿ ಮಾಡಿದೆ.

iskcon radha krishna temple closed due to corona effect in bangalore
ಇಸ್ಕಾನ್​ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ

ನಗರದ ರಾಜಾಜಿನಗರದ ಇಸ್ಕಾನ್ ದೇವಾಲಯಕ್ಕೆ ವಿದೇಶಿಗರು ಒಳಗೊಂಡಂತೆ ನೂರಾರು ಭಕ್ತರು ನಿತ್ಯ ದರ್ಶನಕ್ಕೆ ಆಗಮಿಸುತ್ತಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಕೋವಿಡ್-19 ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಕನಕಪುರದ ವೈಕುಂಟ ಬೆಟ್ಟ ದೇವಸ್ಥಾನ ಕೂಡಾ ಮುಚ್ಚಲಾಗಿದೆ.

ಆದರೆ, ಮೊದಲೇ ಪೂಜೆಗೆ ರಶೀದಿ ಪಡೆದ ಭಕ್ತರ ಪೂಜೆ ನೆರವೇರಿಸಲು ನಿರ್ಧರಿಸಿದ್ದು, ಕಡಿಮೆ ಸಂಖ್ಯೆಯಲ್ಲಿ ಭಕ್ತರಿಗೆ ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಶೇ. 98ರಷ್ಟು ಭಕ್ತರಿಗೆ ನಿಷೇಧವಿದೆ ಎಂದು ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.