ETV Bharat / state

ಸಾಗರೋತ್ತರ ಕನ್ನಡಿಗರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಂವಾದ

author img

By

Published : Jul 25, 2020, 6:19 PM IST

ಪ್ರಸಕ್ತ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕಡಲಾಚೆ ಇಂತಹ ಒಂದು ಕಾರ್ಯಕ್ರಮ ಆಯೋಜಿಸಿರುವ ನಿಮ್ಮ ಕನ್ನಡದ ಬದ್ಧತೆ ಇದರಿಂದಲೇ ವ್ಯಕ್ತವಾಗುತ್ತದೆ. ಪ್ರಸಕ್ತ ಕೊರೊನಾ ಸಂದರ್ಭದಲ್ಲಿ ಈ ವರ್ಚುವಲ್ ಸಮಾರಂಭಗಳು ಅನಿವಾರ್ಯವಾಗಿವೆ. ತಂತ್ರಜ್ಞಾನದ ನೆರವಿನಿಂದ ನಾನು ನಿಮ್ಮೆಲ್ಲರೊಂದಿಗೆ ಈ ಸುಸಂದರ್ಭದಲ್ಲಿ ಹಾಜರಿರುವುದಕ್ಕೆ ತುಂಬಾ ಸಂತೋಷ ಪಡುತ್ತೇನೆ..

Ishwar Khandre's conversation with foreign resident Kannadigas
ಸಾಗರೋತ್ತರ ಕನ್ನಡಿಗರ ಜೊತೆ ಈಶ್ವರ್ ಖಂಡ್ರೆ ಸಂವಾದ

ಬೆಂಗಳೂರು : ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಸಾಗರೋತ್ತರ ಕನ್ನಡಿಗರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದರು. ಯುಕೆ, ಯುಎಇ, ಇಟಲಿ, ಸೌದಿ ಅರೇಬಿಯಾ ದೇಶದಲ್ಲಿರುವ ಅನೇಕ ಕನ್ನಡಿಗರು, ಅಲ್ಲಿರುವ ಸವಲತ್ತು-ಸೌಲಭ್ಯಗಳ ಬಗ್ಗೆ, ಸಮಸ್ಯೆಗಳ ಕುರಿತು ಇದೇ ಸಂದರ್ಭ ತಿಳಿಸಿದರು.

ವಿದೇಶಗಳಲ್ಲಿರುವ ಭಾರತೀಯ ಸಮುದಾಯ ತಾವಿರುವ ದೇಶಕ್ಕೆ ಮತ್ತು ತಾಯ್ನಾಡಿಗೆ ನೀಡಿರುವ ಕೊಡುಗೆ ಅಮೂಲ್ಯವಾಗಿದೆ. ಯಾವುದೋ ದೇಶದಲ್ಲಿರುವ ಭಾರತೀಯರ ಸಂಖ್ಯೆ ಕಡಿಮೆ ಇರಬಹುದು. ಆದರೆ, ನಾವು ಇದನ್ನು ಸಂಖ್ಯೆ ದೃಷ್ಠಿಯಿಂದ ನೋಡದೆ ಅವರ ಬುದ್ಧಿ ಬಲ ಮತ್ತು ಶಕ್ತಿಯಿಂದ ನೋಡಬೇಕು. ಹಿಂದೆ ಪ್ರತಿಭಾವಂತರು ವಿದೇಶಗಳಿಗೆ ಹೋದ್ರೆ ‘ಪ್ರತಿಭಾ ಪಲಾಯನ’ಎಂಬ ಮಾತು ಕೇಳಿ ಬರುತ್ತಿತ್ತು. ನಮ್ಮಲ್ಲಿ ಶಿಕ್ಷಣ ಕಲಿತು, ಬುದ್ಧಿವಂತರಾಗಿ ನಂತರ ವಿದೇಶಗಳಿಗೆ ಹೋಗಿ ಆ ರಾಷ್ಟ್ರವನ್ನು ಉದ್ದಾರ ಮಾಡುತ್ತಾರೆ. ಹಣ ಮಾಡಲು ವಿದೇಶಗಳಿಗೆ ಹೋಗುತ್ತಾರೆ ಸ್ವಾರ್ಥಿಗಳು ಎನ್ನುತ್ತಿದ್ದರು.

ಆದರೆ, ಇದು ಪ್ರತಿಭಾ ಪಲಾಯನವಲ್ಲ, ಬದಲಾಗಿ‘ಪ್ರತಿಭಾ ಫಲಶ್ರುತಿ’ ಎನ್ನಲು ಅಡ್ಡಿ ಇಲ್ಲ. ಬದಲಾದ ಪರಿಸ್ಥಿತಿಯಲ್ಲಿ ಜಾಗತೀಕರಣ, ಉದಾರೀಕಣದ ತರುವಾಯ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಎರಡು ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ ವರ್ಧನೆಗೆ ಪ್ರಮುಖ ಕಾರಣರಾಗಿದ್ದಾರೆ. ಭಾರತದ ಬಗ್ಗೆ ಆ ದೇಶಕ್ಕೆ ಇನ್ನೂ ಹೆಚ್ಚಿನ ಗೌರವ ಬರಲು ಕಾರಣರಾಗಿದ್ದಾರೆ. ತಮ್ಮ ಪ್ರತಿಭೆಯಿಂದ ಭಾರತೀಯರನ್ನು, ಭಾರತವನ್ನು ವಿಶ್ವದ ಎಲ್ಲ ದೇಶಗಳು ಪ್ರೀತಿಸುವಂತೆ, ಗೌರವಿಸುವಂತೆ ಮಾಡಿದ್ದಾರೆ. ಕಡಲಾಚೆ ಹೋಗಿ ಕೆಲಸ ಮಾಡಿ ತಾವು ಹಣ ಗಳಿಸುವುದರ ಜೊತೆಗೆ, ದೇಶಕ್ಕೆ ಕೀರ್ತಿ ಗೌರವ ತಂದು ಕೊಡುತ್ತಿದ್ದಾರೆ. ಇವರ ಈ ಕೊಡುಗೆ ಅಸಾಧಾರಣವಾದ್ದು ಎಂದು ಖಂಡ್ರೆ ತಮ್ಮ ಮಾತಿನಲ್ಲಿ ವಿವರಿಸಿದರು.

ನಿಮ್ಮ ಬಂಧು, ಮಿತ್ರರು, ನೆಂಟರು, ಇಷ್ಟರು ಎಲ್ಲರನ್ನೂ ಬಿಟ್ಟು ದೂರದ ಅಪರಿಚಿತ ದೇಶಕ್ಕೆ ಹೋಗಿ ನಿಮ್ಮ ಬದುಕು ಕಟ್ಟಿಕೊಂಡಿದ್ದೀರಿ. ಅಲ್ಲಿ ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದ್ದೀರಿ. ಹಣ ಮಾತ್ರವಲ್ಲ ಗೌರವ, ಘನತೆಯನ್ನೂ ಸಂಪಾದನೆ ಮಾಡಿದ್ದೀರಿ. ಹಲವು ಅನಿವಾಸಿ ಭಾರತೀಯರು, ವಿದೇಶದಲ್ಲಿ ದುಡಿದು, ತಮ್ಮ ತಾಯ್ನಾಡಿನ, ತವರು ಗ್ರಾಮದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಮೂಲಕ ಅವರ ಬಗ್ಗೆ ಇಂದು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಲ್ಲಿಯೂ ಕನ್ನಡ ಸಂಘಗಳನ್ನು ಕಟ್ಟಿ ಕನ್ನಡ ಚಟುವಟಿಕೆಯನ್ನೂ ನಡೆಸುತ್ತಿದ್ದೀರಿ. ಕಡಲಾಚೆ ಕನ್ನಡ ಡಿಂಡಿಮ ಮೊಳಗಿಸುತ್ತಿದ್ದೀರಿ. ನಿಮ್ಮೆಲ್ಲರ ಸಾಧನೆ ಅನುಪಮ, ಅಸಾಧಾರಣ. ನಿಮ್ಮ ನಿಷ್ಠೆ, ದೇಶಪ್ರೇಮ, ರಾಜ್ಯಪ್ರೇಮ, ನುಡಿ ಪ್ರೇಮ ಎಲ್ಲವೂ ಅನುಕರಣೀಯ. ಇಂದು ವಿದೇಶಗಳಲ್ಲಿ ವಿಶ್ವ ಕನ್ನಡ ಸಮ್ಮೇಳನಗಳೇ ನಡೆಯುತ್ತಿವೆ. ಆ ಮೂಲಕ ತಾಯಿ ಭುವನೇಶ್ವರಿಯ ಕೀರ್ತಿ ಪತಾಕೆಯನ್ನು ಸಪ್ತ ಸಾಗರದಾಚೆಯೂ ಕನ್ನಡಿಗರು ಮೆರೆಸಿದ್ದಾರೆ. ಇವರ ಈ ಸಾಧನೆಗೆ ಎಲ್ಲರೂ ತಲೆ ಬಾಗಲೇಬೇಕು ಎಂದರು.

ಪ್ರಸಕ್ತ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕಡಲಾಚೆ ಇಂತಹ ಒಂದು ಕಾರ್ಯಕ್ರಮ ಆಯೋಜಿಸಿರುವ ನಿಮ್ಮ ಕನ್ನಡದ ಬದ್ಧತೆ ಇದರಿಂದಲೇ ವ್ಯಕ್ತವಾಗುತ್ತದೆ. ಪ್ರಸಕ್ತ ಕೊರೊನಾ ಸಂದರ್ಭದಲ್ಲಿ ಈ ವರ್ಚುವಲ್ ಸಮಾರಂಭಗಳು ಅನಿವಾರ್ಯವಾಗಿವೆ. ತಂತ್ರಜ್ಞಾನದ ನೆರವಿನಿಂದ ನಾನು ನಿಮ್ಮೆಲ್ಲರೊಂದಿಗೆ ಈ ಸುಸಂದರ್ಭದಲ್ಲಿ ಹಾಜರಿರುವುದಕ್ಕೆ ತುಂಬಾ ಸಂತೋಷ ಪಡುತ್ತೇನೆ. ವಾಸ್ತವವಾಗಿ ಯಾವ ವಸ್ತು ನಮ್ಮಿಂದ ದೂರವಾಗುತ್ತಿದೆ ಎನಿಸುತ್ತದೋ ಅದರ ಬಗ್ಗೆ ಅಭಿಮಾನ, ಮಮಕಾರ ಹೆಚ್ಚಾಗುತ್ತದೆ. ಕನ್ನಡನಾಡಿನಿಂದ ದೂರದ ಊರಿಗೆ ಹೋದವರಿಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚುತ್ತದೆ. ಕನ್ನಡದ ಅಸ್ಮಿತೆ ಅವರಲ್ಲಿ ಜಾಗೃತವಾಗುತ್ತದೆ. ಮಾತೃಭಾಷೆ, ಮಾತೃ ಭೂಮಿ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಕಾಳಜಿ ಹೆಚ್ಚುತ್ತದೆ. ಅದನ್ನು ಬೆಳೆಸುವ ಛಲ ಮೂಡುತ್ತದೆ. ಇದು ಸಂಘಟನೆಗೆ ದಾರಿ ಮಾಡಿಕೊಡುತ್ತದೆ. ಸಾಗರೋತ್ತರ ಕನ್ನಡಿಗರ ಒಕ್ಕೂಟವೂ ಇಂಥ ಒಂದು ಕಾಳಜಿ, ಕನ್ನಡ ಪ್ರೀತಿ ಫಲಿತಾಂಶ ಎಂದಿದ್ದಾರೆ.

90ರ ದಶಕದಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲವಿತ್ತು. ಆಗ ಹಲವು ಅಮೆರಿಕದ ಕನ್ನಡಿಗರು ಸ್ವಯಂ ಪ್ರೇರಿತರಾಗಿ ಹಣ ಸಂಗ್ರಹಿಸಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರಿಗೆ ತಲುಪಿಸಿದ್ದರು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಆದ ಜಲಪ್ರಳಯದ ಸಮಯದಲ್ಲೂ ಸಹ ಅಮೆರಿಕನ್ನಡಿಗರು ಹಣ ಸಂಗ್ರಹಿಸಿ ಮುಖ್ಯಮಂತ್ರಿಯವರಿಗೆ ಕಳುಹಿಸಿದ್ದರು. ಕರ್ನಾಟಕದಲ್ಲಿ ಸಂಕಷ್ಟ ಎದುರಾದಾಗಲೆಲ್ಲಾ ಕನ್ನಡಿಗರು ಮಿಡಿದಿದ್ದಾರೆ. ಕೇವಲ ಅಮೆರಿಕದ ಕನ್ನಡಿಗರಷ್ಟೇ ಅಲ್ಲ, ಸಿಂಗಾಪೂರ್ ಕನ್ನಡಿಗರು, ಅರಬ್ ರಾಷ್ಟ್ರಗಳಲ್ಲಿನ ಕನ್ನಡಿಗರು, ಆಸ್ಟ್ರೇಲಿಯಾ ಕನ್ನಡಿಗರು,ಇಂಗ್ಲೆಂಡ್‌ನಲ್ಲಿರುವ ಕನ್ನಡಿಗರೂ ಇಂಥ ಕಾರ್ಯ ಮಾಡಿದ್ದಾರೆ.

ಹಲವು ಶ್ರೀಮಂತ ಅನಿವಾಸಿ ಕನ್ನಡಿಗರು ತಮ್ಮೂರಿನ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ತಾವು ಹುಟ್ಟಿದ ಊರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇದೆಲ್ಲವೂ ಪ್ರಶಂಸನಾನರ್ಹ. ಹೀಗಾಗೆ ಅವರು ಎಲ್ಲೆ ಇದ್ದರೂ ಅವರ ಮನಸ್ಸು ಮಾತ್ರ ಕನ್ನಡ ನಾಡಿನಲ್ಲೇ ಸುತ್ತುತ್ತಿರುತ್ತದೆ. ಹೀಗಾಗಿ ಅವರು ಸದಾ ಕನ್ನಡಿಗರಾಗಿಯೇ ಇರುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.