ಬೆಂಗಳೂರು: ಕೊರೊನಾ ಭೀತಿಯ ಮಧ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಸೇವೆಯಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಕುರಿತು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿದ್ದು,'ಈ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
ರಾಮನ ಮೇಲಿನ ಭಕ್ತಿಯ ಮೌಲ್ಯಮಾಪನಕ್ಕಾಗಿ ಹನುಮ ಎಂದಿಗೂ ಹಂಬಲಿಸಲಿಲ್ಲ. ಹಾಗೆಯೇ ಬೆಂಗಳೂರು ಪೊಲೀಸರು ನಗರದ ರಸ್ತೆಗಳಲ್ಲಿ ಭಕ್ತಿಯಿಂದ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಕುಟುಂಬ, ಮಕ್ಕಳು ಮತ್ತು ಜೀವನವನ್ನು ಮರೆತು ಈ ಅದ್ಭುತ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ' ಎಂದು ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ.
-
Hanumana never craved for validation of his devotion for Rama
— Hemant Nimbalkar IPS (@IPSHemant) July 18, 2020 " class="align-text-top noRightClick twitterSection" data="
So is @BlrCityPolice on the roads fighting #COVID19 with devotion for Bengaluru
Proud of being member of this awesome force who has forgotten family, kids & life in this fight against #Corona
Be Home & Stay Safe🙏 pic.twitter.com/qbizqYUPrR
">Hanumana never craved for validation of his devotion for Rama
— Hemant Nimbalkar IPS (@IPSHemant) July 18, 2020
So is @BlrCityPolice on the roads fighting #COVID19 with devotion for Bengaluru
Proud of being member of this awesome force who has forgotten family, kids & life in this fight against #Corona
Be Home & Stay Safe🙏 pic.twitter.com/qbizqYUPrRHanumana never craved for validation of his devotion for Rama
— Hemant Nimbalkar IPS (@IPSHemant) July 18, 2020
So is @BlrCityPolice on the roads fighting #COVID19 with devotion for Bengaluru
Proud of being member of this awesome force who has forgotten family, kids & life in this fight against #Corona
Be Home & Stay Safe🙏 pic.twitter.com/qbizqYUPrR
ನಗರದಲ್ಲಿ ಕಂಟೇನ್ಮೆಂಟ್ ಝೋನ್ಗಳಲ್ಲಿ ಕೆಲಸ ಮಾಡುವ ವೇಳೆ, ಅರೋಪಿಗಳನ್ನು ಬಂಧಿಸುವಾಗ ಸೇರಿದಂತೆ ವಿವಿಧ ರೀತಿಯಲ್ಲಿ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಒಟ್ಟು 746 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದ್ದು, ಈ ಪೈಕಿ 493 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 256 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 7 ಸಿಬ್ಬಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 807 ಮಂದಿಯನ್ನು ಕ್ವಾರಂಟೈನ್ ಮಾಡಿ, 7 ಠಾಣೆಗಳನ್ನು ಸೀಲ್ ಡೌನ್ ಮಾಡಿರುವ ಮಾಹಿತಿಯನ್ನು ನಿಂಬಾಳ್ಕರ್ ನೀಡಿದ್ದಾರೆ.