ETV Bharat / state

ಘೋಷಣೆ ಕೂಗಿದ್ರೆ ಹಣ ಕೊಡ್ತಾರಾ, ನಿನ್ನ ಹಿಂದೆ ಯಾರಿದ್ದಾರೆ?... ಇಂದು ಅಮೂಲ್ಯಗೆ ಎದುರಾಗಲಿವೆ ಈ ಪ್ರಶ್ನೆಗಳು!

ದೇಶ ದ್ರೋಹ ಆರೋಪದಡಿ ಬಂಧನವಾಗಿರುವ ಅಮೂಲ್ಯ ಲಿಯೋನಾ ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿದ್ದು ಹಿರಿಯ ಪೊಲೀಸ್​​​ ಅಧಿಕಾರಿಗಳ ನೇತೃತ್ವದಲ್ಲಿ ಇಂದು ವಿಚಾರಣೆ ನಡೆಯಲಿದೆ. ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು ಅಮೂಲ್ಯ ವಿಚಾರಣೆಯ ಸಂಪೂರ್ಣವಾದ ವಿಡಿಯೋವನ್ನ ಪೊಲೀಸರು ರೆಕಾರ್ಡ್​ ನಡೆಸಲಿದ್ದಾರೆ.

amulya-leona
ಪೊಲೀಸರ ಕಸ್ಟಡಿಯಲ್ಲಿ ಅಮೂಲ್ಯ.
author img

By

Published : Feb 26, 2020, 9:51 AM IST

ಬೆಂಗಳೂರು: ದೇಶ ದ್ರೋಹ ಆರೋಪದಡಿ ಬಂಧನವಾಗಿರುವ ಅಮೂಲ್ಯ ಲಿಯೋನಾ ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿದ್ದು ಹಿರಿಯ ಪೊಲೀಸ್​​​ ಅಧಿಕಾರಿಗಳ ನೇತೃತ್ವದಲ್ಲಿ ಇಂದು ವಿಚಾರಣೆ ನಡೆಯಲಿದೆ. ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು ಅಮೂಲ್ಯ ವಿಚಾರಣೆಯ ಸಂಪೂರ್ಣವಾದ ವಿಡಿಯೋವನ್ನ ಪೊಲೀಸರು ರೆಕಾರ್ಡ್​ ನಡೆಸಲಿದ್ದಾರೆ.

ಅಮೂಲ್ಯ ವಿಚಾರಣೆಯು ಪೊಲೀಸರಿಗೆ ಬಹಳಷ್ಟು ಪ್ರಾಮುಖ್ಯತೆ ಇದ್ದು ಅಮೂಲ್ಯಗೆ ಪ್ರಶ್ನೆಗಳ ಸುರಿಮಳೆಗೈಯಲಿದ್ದಾರೆ. ಸೋಶಿಯಲ್ ಮೀಡಿಯಾವನ್ನ ಅಮೂಲ್ಯ ಬಹಳಷ್ಟು ಬಳಸಿಕೊಂಡಿದ್ದಾಳೆ. ಅದರಲ್ಲಿ ಯಾರೆಲ್ಲಾ‌ ಫಾಲೋವರ್ಸ್​​ ಇದ್ದಾರೆ. ಭಾಷಣ ಮಾಡಲು ಯಾರು ಉತ್ತೇಜನ ನೀಡಿದ್ದಾರೆ. ಎಷ್ಟು ವರ್ಷದಿಂದ ಸೋಶಿಯಲ್ ಮೀಡಿಯಾವನ್ನು ಸಕ್ರಿಯವಾಗಿ ಬಳಕೆ ಮಾಡ್ತಿದ್ದೆ. ಯಾವೆಲ್ಲಾ ಪ್ರಚೋದನಕಾರಿ ಭಾಷಣ ಮಾಡಿದ್ದಿಯಾ, ಭಾಷಣದ ಹಿಂದಿರೋ ಕಾಣದ ಕೈಗಳ್ಯಾರು..? ಈ ರೀತಿಯ ಪ್ರಶ್ನೆಗಳಿರಲಿವೆ.

ಫೆಬ್ರವರಿ 20ರಂದು ಫ್ರೀಡಂ ಪಾರ್ಕ್ ಬಳಿ ಭಾಷಣ ಮಾಡಲು ಆಹ್ವಾನ ನೀಡಿದ್ದು ಯಾರು? ದೇಶ ದ್ರೋಹ ಕೂಗಿನ ಉದ್ದೇಶ ಏನು? ಕಾರ್ಯಕ್ರಮಕ್ಕೆ ಅಮೂಲ್ಯಾಳನ್ನ ಯಾವ ವ್ಯಕ್ತಿ ಬರುವಂತೆ ಕೇಳಿಕೊಂಡಿದ್ದರು.? ಈ ಹಿಂದೆ ವಿಧಾನ ಸೌಧದ ಬಳಿ ಪೌರತ್ವ ಕಾಯ್ದೆ ವಿರುದ್ಧ ಘೋಷಣೆ ಕೂಗಿದ್ದು ಯಾಕೆ? ಪ್ರಚೋದನಾಕಾರಿ ಭಾಷಣ ಮಾಡಿದ್ರೆ ಏನು ಪ್ರಯೋಜನ? ಹಣದ ಆಮಿಷ ತೋರಿಸಿ ಅಮೂಲ್ಯಳನ್ನ ಬುಟ್ಟಿಗೆ ಹಾಕಿಕೊಳ್ಳಲಾಗಿದೆಯಾ. ಮತ್ತೊಂದೆಡೆ ನಕ್ಸಲರ ಸಂಪರ್ಕದಲ್ಲೇನಾದ್ರೂ ಅಮೂಲ್ಯ ಇದ್ದಿರಬಹುದಾ.? ಈ ಎಲ್ಲಾ ವಿಚಾರಗಳ ಸಂಪೂರ್ಣ ಮಾಹಿತಿಯನ್ನ ಎಸ್ ಐ ಟಿ. ಕಲೆ ಹಾಕಲಿದ್ದು ಇದರ ಸಂಪುರ್ಣವಾದ ವಿಡಿಯೋ ಚಿತ್ರೀಕರಣವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.