ಬೆಂಗಳೂರು: ಕೋವಿಡ್-19 ಕಾರಣ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತಾರಾಜ್ಯ ಸಾರಿಗೆಯನ್ನು ಇದೀಗ ಪುನರಾರಂಭಿಸುತ್ತಿದೆ.
ದೇಶದಲ್ಲಿ ಈಗಾಗಲೇ ಲಾಕ್ಡೌನ್ 4.0 ಜಾರಿಗೊಂಡಿದೆ. ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕಾಗಿ ಗೋವಾ ರಾಜ್ಯಕ್ಕೆ ಸೆಪ್ಟೆಂಬರ್ 7ರಿಂದ ಬೆಂಗಳೂರು, ಮೈಸೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಗೋವಾ ರಾಜ್ಯಕ್ಕೆ ಸಂಚಾರ ಪುನಾರಂಭಿಸಲಾಗುತ್ತಿದೆ.
ಕೊರೊನಾ ಹಿನ್ನೆಲೆ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿರುತ್ತದೆ. ಮುಂಗಡ ಆಸನಗಳನ್ನು www.ksrtc.inವೆಬ್ಸೈಟ್ ಮತ್ತು ನಿಗಮದ ಫ್ರಾಂಚೈಸಿ ಕೌಂಟರ್‌ಗಳ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ.
.