ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಇಲ್ಲದೆ ಹಿನ್ನೆಲೆ ರಾಜ್ಯ ಪ್ರವಾಸೋದ್ಯಮ ನಷ್ಟದಲ್ಲಿ ಸಿಲುಕಿದೆ.
ಸಾಮಾನ್ಯವಾಗಿ ವಾಣಿಜ್ಯ ಪ್ರವಾಸ ಹಾಗೂ ಬಿಡುವಿನ ವೇಳೆಯ ಪ್ರವಾಸದಲ್ಲಿ ಜನರು ಹೆಚ್ಚು ಹೆಚ್ಚಾಗಿ ವಿಮಾನದ ಮೂಲಕ ಸಂಚಾರ ಮಾಡುತ್ತಿದ್ದರು. ಇದರಲ್ಲಿ ವಾಣಿಜ್ಯ ಪ್ರವಾಸದಲ್ಲಿ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಆದಾಯ ಬರುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಭೀತಿಯಿಂದ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾರಂಭವಾಗಿಲ್ಲ. ಈ ಹಿನ್ನೆಲೆ ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಏರುವ ಖಾಸಗಿ ಟ್ಯಾಕ್ಸಿ, ತಂಗುವ ಹೋಟೆಲ್ ಸೇರಿದಂತೆ ಇತರೆ ಮೂಲದಿಂದ ಹಣ ಸಂದಾಯವಾಗುತ್ತಿಲ್ಲ.
ಈ ಬಗ್ಗೆ ಮಾತನಾಡಿದ ರಾಜ್ಯ ಟ್ರಾವೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಕಾರ್ಪೊರೇಟ್ ಸಂಸ್ಥೆಗಳು ಇನ್ನೂ ಕೂಡ ವರ್ಕ್ ಫ್ರಂ ಹೊಂ ನಲ್ಲಿ ಇರುವ ಕಾರಣ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ವಿಶೇಷ ಪ್ಯಾಕೇಜ್ನಲ್ಲೂ ಪ್ರವಾಸೋದ್ಯಮಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ಸದ್ಯಕ್ಕೆ ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರಿಗೆ 5000 ಪರಿಹಾರ ಧನ ಸಹಾಯ ಹಾಗೂ ತೆರಿಗೆ ವಿನಾಯಿತಿ ನೀಡಿದೆ. ಆದರೆ, ಇದು ತಾತ್ಕಾಲಿಕ ಸಹಾಯ ಆಗುತ್ತದೆಯೇ ಹೊರತು ಪ್ರವಾಸೋದ್ಯಮ ವೃದ್ಧಿಗೆ ಯಾವುದೇ ಸಹಾಯ ಆಗಲಾರದು.
ಒಟ್ಟಾರೆಯಾಗಿ ದೇಶದ ಜಿಡಿಪಿಗೆ 9.2% ಕೊಡುಗೆಯನ್ನು ನೀಡುತ್ತಿದ್ದ ಪ್ರವಾಸೋದ್ಯಮ ಕ್ಷೇತ್ರ ಈಗ ಆರ್ಥಿಕವಾಗಿ ನಷ್ಟದಲ್ಲಿದೆ. ಇತ್ತೀಚಿಗೆ ನಾಗರಿಕ ವಿಮಾನಯಾನ ಸಚಿವ ಹರಿದೀಪ್ ಪುರಿ, ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ವಿಮಾನಯಾನ ಪ್ರಾರಂಭವಾಗುವಾಗ ಭಾರತ ಕೂಡ ಅನುಸರಿಸುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸ್ಪಷ್ಟವಾಗಿ ದಿನಾಂಕ ಹೇಳದ ಕಾರಣ ಗೊಂದಲದಲ್ಲಿ ಪ್ರವಾಸೋದ್ಯಮದ ಉದ್ಯಮಿಗಳು ಇದ್ದಾರೆ.