ETV Bharat / state

ಜೀವ ಭಯದಿಂದ‌ ಬೆಂಗಳೂರಿನಲ್ಲಿ ಅಡಗಿದ್ದ ಉಗ್ರ ತಾಲಿಬ್:‌‌ ಕಮಿಷನರ್ ರೆಡ್ಡಿಗೆ ವರದಿ ನೀಡಿದ ಗುಪ್ತಚರ ಇಲಾಖೆ - terrorist arrest in bengaluru

2007-08ರಿಂದ ನಡೆದ ಕೆಲವು ಅಪರಾಧ ಕೃತ್ಯಗಳ ಬಗ್ಗೆ ಉಗ್ರ ತಾಲಿಬ್ ಹುಸೇನ್ ಭಾಗಿಯಾಗಿರುವ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರ ತನಿಖೆ‌ ನಡೆಸುತ್ತಿರುವುದು, ಬೆಂಗಳೂರಿನಲ್ಲಿ ತಾಲಿಬ್ ಹುಸೇನ್ ನೆಲೆಸಿದ್ದ ಬಾಡಿಗೆ ಮನೆ, ಕೆಲಸ‌ ಮಾಡುತ್ತಿದ್ದ ಜಾಗ, ಮಸೀದಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿರುವ ಬಗ್ಗೆ ಗುಪ್ತಚರ ಇಲಾಖೆಯು ಕಮಿಷನರ್​ಗೆ ಸಂಪೂರ್ಣ ವರದಿ‌ ನೀಡಿದೆ.

intelligence-department-reports-to-commissioner-on-terrorist-arrest-case
ಜೀವ ಭಯದಿಂದ‌ ಬೆಂಗಳೂರಿನಲ್ಲಿ ಅಡಗಿದ್ದ ಉಗ್ರ ತಾಲಿಬ್:‌‌ ಕಮಿಷನರ್ ರೆಡ್ಡಿಗೆ ವರದಿ ನೀಡಿದ ಗುಪ್ತಚರ ಇಲಾಖೆ
author img

By

Published : Jun 12, 2022, 9:25 PM IST

ಬೆಂಗಳೂರು: ಕಾರ್ಮಿಕನ ವೇಷಧಾರಿಯಾಗಿ ನಗರದಲ್ಲಿ ನೆಲೆಯೂರಿದ್ದ ಉಗ್ರನನ್ನು ಬಂಧಿಸಿದ್ದ ಜಮ್ಮು ಕಾಶ್ಮೀರ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿರುವ ನಗರ ಗುಪ್ತಚರ ಇಲಾಖೆ, ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದೆ. ಉಗ್ರ ತಾಲಿಬ್ ಹುಸೇನ್ ಮೇಲಿರುವ ಪ್ರಕರಣಗಳು, ಉಗ್ರನ ಚಟುವಟಿಕೆ, ಬೆಂಗಳೂರಿಗೆ ಬಂದಿದ್ದು ಯಾವಾಗ ಎಂಬುದು ಸೇರಿದಂತೆ ಪ್ರತಿಯೊಂದು ಆಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕಮಿಷನರ್ ಪ್ರತಾಪ್ ರೆಡ್ಡಿಗೆ ರಿಪೋರ್ಟ್ ನೀಡಲಾಗಿದೆ.

ಜಮ್ಮು ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ತಾಲಿಬ್ ಹುಸೇನ್ ವಿರುದ್ಧ ಪ್ರಮುಖವಾಗಿ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿಎ) ಸ್ಫೋಟಕ ವಸ್ತು ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ. 2007-08ರಿಂದ ನಡೆದ ಕೆಲವು ಅಪರಾಧ ಕೃತ್ಯಗಳಲ್ಲಿ ತಾಲಿಬ್ ಭಾಗಿಯಾಗಿರುವ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರ ತನಿಖೆ‌ ನಡೆಸುತ್ತಿರುವುದು, ನಗರದಲ್ಲಿ ತಾಲಿಬ್ ಹುಸೇನ್ ನೆಲೆಸಿದ್ದ ಬಾಡಿಗೆ ಮನೆ, ಕೆಲಸ‌ ಮಾಡುತ್ತಿದ್ದ ಜಾಗ, ಮಸೀದಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿರುವ ಬಗ್ಗೆ ಸಂಪೂರ್ಣ ವರದಿ‌ ನೀಡಿದ್ದಾರೆ.

ತಾಲಿಬ್ ಬೆಂಗಳೂರಿನಲ್ಲಿದ್ದ ಅವಧಿಯಲ್ಲಿ ಆತನ ಚಟುವಟಿಕೆ ಬಗ್ಗೆ ವರದಿ ಪಡೆದುಕೊಂಡ ನಗರ ಪೊಲೀಸ್ ಆಯುಕ್ತರು, ನಗರದ ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಹೊರವಲಯದಲ್ಲಿ ನಿಗಾವಹಿಸುವಂತೆ ನಗರದ ಭಯೋತ್ಪಾದನ ನಿಗ್ರಹ ದಳ‌ಕ್ಕೆ (ಎಟಿಸಿ) ಸೂಚನೆ‌ ನೀಡಿದ್ದಾರೆ. ಐಎಸ್​ಡಿ, ಐಬಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆ ಕಮಾಂಡರ್ ಆಗಿದ್ದ ತಾಲಿಬ್ ಕಾಶ್ಮೀರದಿಂದ ಬಂದು ನಗರದ ಹಲವೆಡೆ ಪ್ಲಾನ್ ಮಾಡಿ ಸಭೆ ನಡೆಸಿರುವ ಸಂಗತಿ, ತನಿಖೆ ವೇಳೆ ಗೊತ್ತಾಗಿದೆ.

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ಹೋರಾಟ ಮಾಡುತ್ತಿರುವವರಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯೂ ಒಂದಾಗಿದೆ. ಪ್ರಮುಖವಾಗಿ ಉಗ್ರ ತಾಲಿಬ್ ಹುಸೇನ್ ನಗರಕ್ಕೆ ಬರುವುದಕ್ಕೆ ಹಿಜ್ಬುಲ್ ಮುಜಾಹಿದ್ದಿನ್​ನ ನಾಯಕರನ್ನು ಭಾರತೀಯ ಸೇನೆ ಸದೆಬಡಿದಿರುವುದೇ ಕಾರಣ ಎನ್ನಲಾಗುತ್ತಿದೆ.

2016ರಲ್ಲಿ ಉಗ್ರರಾದ ಸಬ್ಜರ್ ಭಟ್, 2017ರಲ್ಲಿ ಬುರ್ಹಾನ್ ಮುಝಾಫರ್ ವನಿ, 2020ರಲ್ಲಿ ರಿಯಾಜ್ ನಾಯ್ಕೋ ಹಾಗೂ ಘಾಜಿ ಹೈದರ್​ನನ್ನು ಸೇನೆ ಬೇಟೆಯಾಡಿತ್ತು. ಇವರೆಲ್ಲ ಹಿಜ್ಬುಲ್ ಮುಜಾಹಿದ್ದಿನ್​ ಉಗ್ರ ಸಂಘಟನೆಯ ಪ್ರಮುಖ ನಾಯಕರಾಗಿದ್ದು, ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದ್ದರು.‌ ಇದೇ ಸಂಘಟನೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಲ್ಲಿ ತಾಲಿಬ್ ಕೂಡ ಒಬ್ಬನಾಗಿದ್ದ. ಹೀಗಾಗಿ ಜೀವ ಭಯದಿಂದ ಆತ ಜಮ್ಮು ಕಾಶ್ಮೀರ ತೊರೆದು ಕಳೆದ ಆರು ವರ್ಷಗಳ ಹಿಂದೆ‌ ಬೆಂಗಳೂರಿಗೆ ಬಂದಿದ್ದ. ಇಲ್ಲಿಯೇ ಇದ್ದುಕೊಂಡು ಸಾಮಾನ್ಯ ಪ್ರಜೆಯಂತೆ ಜೀವನ‌ ನಡೆಸುವುದರ ಜೊತೆಗೆ‌ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗುತ್ತಿದೆ.

ಅತ್ತ ಜಮ್ಮುವಿನ ಕಿಸ್ತವಾರ್ ಪೊಲೀಸರು ತಾಲೀಬ್ ಹುಸೇನ್​ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 2016ರಿಂದ ಕಾಶ್ಮೀರದಲ್ಲಿ ನಡೆದ ಹಲವು ಗಲಭೆಗಳೊಂದಿಗೆ ತಾಲಿಬ್ ನಂಟು ಹೊಂದಿದ್ದ. ಗಲಭೆಗಳ ಯೋಜನೆ ಸಿದ್ಧಪಡಿಸಲು ಬೆಂಗಳೂರಿಗೆ ಹಲವರು ಬಂದು ಹೋಗಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ: ಶ್ರೀನಗರ ಗುಂಡಿನ ಚಕಮಕಿಯಲ್ಲಿ ಉಗ್ರ ಖತಂ.. ಪೂಂಚ್​​ ಸ್ಫೋಟದಲ್ಲಿ ಸೈನಿಕರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.