ಬೆಂಗಳೂರು: ಕೋವಿಡ್ ಸಮಯದಲ್ಲಿ ಜಾನುವಾರುಗಳಿಗೆ ಆಸರೆಯಾಗಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಮತ್ತು ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಖ್ಯಾತಿಯಾಗಿದ್ದ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇನ್ಸ್ಪೆಕ್ಟರ್ ರಫಿಕ್ ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ವೇಳೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಕುಟುಂಬಸ್ಥರು ವೈದ್ಯರನ್ನು ಕರೆಸಿದರಾದರೂ ಅದಾಗಲೇ ರಫೀಕ್ ಸಾವನ್ನಪ್ಪಿದ್ದರು ಎನ್ನಲಾಗಿದೆ.
![Inspector Mohammad Rafiq died by heart attack at Bangalore](https://etvbharatimages.akamaized.net/etvbharat/prod-images/kn-bng-06-animal-conservator-sarigamapa-singer-inspector-mohammed-rafique-death-ka10032_21102021165841_2110f_1634815721_155.jpg)
ಸರಿಗಮಪದಲ್ಲಿ ಹಾಡು:
ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್ ರಫೀಕ್, ಇತ್ತೀಚೆಗೆ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಕಾರ್ಯಕ್ರಮದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸುಬ್ರಮಣಿ ಜೊತೆ ಭಾಗವಹಿಸಿದ್ದರು. ಈ ಮೂಲಕ ಬಿಂದಾಸಾಗಿ ಹಾಡು ಹಾಡಿ ಜನರ ಮೆಚ್ಚುಗೆ ಪಡೆದಿದ್ದರು.
![Inspector Mohammad Rafiq](https://etvbharatimages.akamaized.net/etvbharat/prod-images/13418550_thumbjpg.jpg)
ಇದನ್ನೂ ಓದಿ:ಲಾಕ್ಡೌನ್ ವೇಳೆ ಭೀಮನ ಕಾಪಾಡಿದ ರಫಿ... ಇದೀಗ ಈತ ಎಲ್ಲರ ಮುದ್ದಿನ ಕಣ್ಮಣಿ!
ಕರುವನ್ನು ಜೊತೆಯಲ್ಲೇ ಕರೆದೊಯ್ಯುತ್ತಿದ್ದ ರಫೀಕ್:
ಲಾಕ್ಡೌನ್ ಸಮಯದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಮಹಮ್ಮದ್ ರಫೀಕ್ ಆಹಾರ ನೀಡುತ್ತಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರುವನ್ನು ಸಾಕುತ್ತಿದ್ದರು. ಅವರು ಬೇರೆಡೆ ವರ್ಗಾವಣೆಗೊಂಡರೂ ಕರುವನ್ನು ಜೊತೆಯಲ್ಲೇ ಕರೆದೊಯ್ಯುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.