ETV Bharat / state

ಇನ್ಫೋಸಿಸ್ ಪ್ರಶಸ್ತಿ - 2021: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಪ್ರಶಸ್ತಿ ಪ್ರದಾನ - ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌

ಬೆಂಗಳೂರಿನ ಡಾ.ನೀರಜ್‌ ಕಯಾಲ್‌, ಡಾ.ಚಂದ್ರಶೇಖರ್‌ ನಾಯರ್‌ ಮತ್ತು ಪ್ರೊ.ಮಹೇಶ್‌ ಶಂಕರನ್ ಅವರು ಕ್ರಮವಾಗಿ ಗಣಿತ ವಿಜ್ಞಾನ, ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿನ ಅಪರೂಪದ ಸಾಧನೆಗಾಗಿ 2021ರ ಇನ್ಫೋಸಿಸ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Infosys awards for three
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಇನ್ಫೋಸಿಸ್ ಪ್ರಶಸ್ತಿ ಪ್ರದಾನ
author img

By

Published : Dec 2, 2021, 7:22 PM IST

ಬೆಂಗಳೂರು: ಇನ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ (ಐಎಸ್‌ಎಫ್‌), ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್‌ ಸೈನ್ಸ್‌, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಂತಹ 6 ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಇಂದು ಇನ್ಫೋಸಿಸ್‌ ಪ್ರಶಸ್ತಿ-2021 ನೀಡಿ ಗೌರವಿಸಲಾಗಿದೆ.

2016ರ ಇನ್ಫೋಸಿಸ್‌ ಪ್ರಶಸ್ತಿ ವಿಜೇತರು, ಸಿಎಂಸಿ ವೆಲ್ಲೂರಿನ ಪ್ರೊಫೆಸರ್‌, ಎಫ್‌ಆರ್​​ಎಸ್‌ ಹಾಗೂ ಭಾರತದ ಪ್ರಮುಖ ವೈರಾಣು ತಜ್ಞರಲ್ಲೊಬ್ಬರಾದ ಪ್ರೊ.ಗಗನ್‌ದೀಪ್‌ ಕಾಂಗ್‌ ಪ್ರಶಸ್ತಿ ವಿತರಿಸಿದರು.

ಬೆಂಗಳೂರಿನ ಡಾ.ನೀರಜ್‌ ಕಯಾಲ್‌, ಡಾ.ಚಂದ್ರಶೇಖರ್‌ ನಾಯರ್‌ ಮತ್ತು ಪ್ರೊ.ಮಹೇಶ್‌ ಶಂಕರನ್ ಅವರು ಕ್ರಮವಾಗಿ ಗಣಿತ ವಿಜ್ಞಾನ, ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿನ ಅಪರೂಪದ ಸಾಧನೆಗಾಗಿ 2021ರ ಇನ್ಫೋಸಿಸ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವರ್ಷದ ಪ್ರಶಸ್ತಿ ವಿಜೇತರ ಸಾಧನೆಗಳು ಪ್ರಸಕ್ತ ಸಮಯದ ಕೆಲವು ದೊಡ್ಡ ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ. ದುರ್ಬಲ ಪರಿಸರ ವ್ಯವಸ್ಥೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಉತ್ತಮ ಹಾಗೂ ಹೆಚ್ಚು ಪರಿಣಾಮಕಾರಿ ಸಂರಕ್ಷಣಾ ಕಾರ್ಯತಂತ್ರಗಳಿಗೆ ಕೊಡುಗೆ ನೀಡುತ್ತದೆ.

ಈ ಪ್ರಶಸ್ತಿ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ತೆರಿಗೆ ರಹಿತ 1,00,000 ಅಮೆರಿಕನ್‌ ಡಾಲರ್‌ ನಗದನ್ನು ಒಳಗೊಂಡಿದೆ. ಈ ವರ್ಷ ಸ್ವೀಕರಿಸಿದ 201 ನಾಮ ನಿರ್ದೇಶನಗಳ ಪೈಕಿ ಈ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಸಮಿತಿ ವಿಶ್ವದಾದ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಕೆಲ ತಜ್ಞರು ಹಾಗೂ ಪ್ರೊಫೆಸರ್‌ಗಳನ್ನು ಒಳಗೊಂಡಿತ್ತು.

13ನೇ ಇನ್ಫೋಸಿಸ್‌ ಪ್ರಶಸ್ತಿ ಘೋಷಿಸಿದ ತೀರ್ಪುಗಾರರು

  • ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್‌ಗಾಗಿ ಪ್ರೊ. ಅರವಿಂದ್ (ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)
  • ಸಮಾಜ ವಿಜ್ಞಾನಕ್ಕಾಗಿ ಪ್ರೊ. ಕೌಶಿಕ್ ಬಸು (ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಮಾಜಿ ಎಸ್‌ವಿಪಿ, ವಿಶ್ವ ಬ್ಯಾಂಕ್)
  • ಮಾನವಿಕ ವಿಷಯಗಳಿಗಾಗಿ ಪ್ರೊ. ಅಕೀಲ್ ಬಿಲ್ಗ್ರಾಮಿ (ಕೊಲಂಬಿಯಾ ವಿಶ್ವವಿದ್ಯಾಲಯ)
  • ಗಣಿತ ವಿಜ್ಞಾನಕ್ಕಾಗಿ ಪ್ರೊ. ಚಂದ್ರಶೇಖರ್ ಖರೆ (ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಲಾಸ್ ಏಂಜಲೀಸ್)
  • ಭೌತ ವಿಜ್ಞಾನಕ್ಕಾಗಿ ಪ್ರೊ. ಶ್ರೀನಿವಾಸ್ ಕುಲಕರ್ಣಿ (ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)
  • ಮತ್ತು ಜೀವ ವಿಜ್ಞಾನಕ್ಕಾಗಿ ಪ್ರೊ. ಮೃಗಾಂಕಾ ಸುರ್ (ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಭಾರತದ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ.

ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರೋನ್​ ಪತ್ತೆ: ಆತಂಕ ಬೇಡ, ಸರ್ಕಾರ ಕಟ್ಟೆಚ್ಚರ ವಹಿಸಿದೆ: ಸಚಿವ ಡಾ.ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.