ETV Bharat / state

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್‌ ಜೋಶಿ ರಾಜೀನಾಮೆ - ನಾರಾಯಣಮೂರ್ತಿ

ಇನ್ಫೋಸಿಸ್ ಸಂಸ್ಥೆಯಿಂದ ಸಿಇo ರವಿಕುಮಾರ್ ಎಸ್ ಹೊರಹೋದ ಬೆನ್ನಲ್ಲೇ ಅಧ್ಯಕ್ಷ ಮೋಹಿತ್ ಜೋಶಿ ಅವರು ಕೂಡ ರಾಜೀನಾಮೆ ನೀಡಿದ್ದಾರೆ.

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್‌ ಜೋಶಿ ರಾಜೀನಾಮೆ

author img

By

Published : Mar 11, 2023, 5:14 PM IST

ಬೆಂಗಳೂರು: ದೇಶದ ಐಟಿ ದೈತ್ಯ ಇನ್ಫೋಸಿಸ್ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಮತ್ತೊಂದು ಮಹತ್ವರ ಬದಲಾವಣೆ ಆಗಿದೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್‌ ಜೋಶಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಐಟಿ ದಿಗ್ಗಜ ಸಂಸ್ಥೆಯಾದ ಇನ್ಫೋಸಿಸ್ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ. ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಮೋಹಿತ್ ಜೋಶಿ ಅವರು ತಮ್ಮ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಇನ್ಫೋಸಿಸ್ ಖಚಿತಪಡಿಸಿದೆ.

ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್​​ನಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನ್ಫೋಸಿಸ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಜೋಶಿ ಅವರ ಅಧ್ಯಕ್ಷ ಸ್ಥಾನದ ಅವಧಿ ಜೂನ್ 9 ರಂದು ಅಂತ್ಯಗೊಳ್ಳಲಿದೆ. ಆದರೆ, ಅವರು ಮಾರ್ಚ್ 11 ರಿಂದ ಸುದೀರ್ಘ ರಜೆ ಮೇಲೆ ತೆರಳಿದ್ದಾರೆ ಎಂದು ಸಂಸ್ಥೆ ಬಿಎಸ್​ಇಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದೆ.

ಸಂಸ್ಥೆಯ ಅಧ್ಯಕ್ಷರಾಗಿ ಮೋಹಿತ್‌ ಜೋಶಿ ಅವರ ಸೇವೆಯನ್ನು ಬಗ್ಗೆ ನಿರ್ದೇಶಕ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. 'ನಿಮ್ಮ ಸೇವೆ ಮತ್ತು ಕಂಪನಿಗೆ ನೀಡಿದ ಕೊಡುಗೆಗಳಿಗಾಗಿ ಧನ್ಯವಾದ ಮತ್ತು ಅಪಾರ ಸೇವೆ ಸ್ಫೂರ್ತಿ. ಜೋಶಿ ಅವರ ಈವರೆಗಿನ ಸೇವೆ ಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಗಿದೆ' ಎಂದು ಇನ್ಫೋಸಿಸ್ ನಿರ್ದೇಶಕ ಮಂಡಳಿ ಪ್ರಕಟಣೆಯಲ್ಲಿ ಹೊಗಳಿದೆ.

ಇದನ್ನೂ ಓದಿ: ಶ್ವಾನದ ಕೈಯಲ್ಲಿ ಪುಸ್ತಕ ಬಿಡುಗಡೆ ಮಾಡಿಸಿದ ಇನ್ಫೋಸಿಸ್ ಸುಧಾ ಮೂರ್ತಿ

ಕಂಪನಿಯ ಅಧ್ಯಕ್ಷರಾಗಿ, ಮೋಹಿತ್ ಜೋಶಿ ಇನ್ಫೋಸಿಸ್‌ನಲ್ಲಿ ಹಣಕಾಸು ಸೇವೆಗಳು ಮತ್ತು ಆರೋಗ್ಯ, ಜೀವ ವಿಜ್ಞಾನ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಜವಾಬ್ದಾರರಾಗಿದ್ದರು. ಇನ್ಫೋಸಿಸ್ ಸಂಸ್ಥೆಯ ಪರವಾಗಿ ಗ್ಲೋಬಲ್ ಬ್ಯಾಂಕಿಂಗ್ ವೇದಿಕೆಯಾದ ಫಿನಾಕಲ್ ಒಳಗೊಂಡಿರುವ ಸಂಸ್ಥೆಯ ಸಾಫ್ಟ್‌ವೇರ್ ವ್ಯವಹಾರವನ್ನು ಮುನ್ನಡೆಸಿದ್ದರು ಎಂದು ಸಂಸ್ಥೆ ಮಾಹಿತಿ ನೀಡಿದೆ. 2000ನೇ ಇಸವಿಯಿಂದ ಇನ್ಫೋಸಿಸ್ ಸಂಸ್ಥೆಯ ಉನ್ನತ ಹುದ್ದೆಯಲ್ಲಿ ಜೋಶಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ: ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಮೂಲಕ 12,300 ಕೋರ್ಸ್​​ಗಳು ಉಚಿತ.. ರಾಜ್ಯದ 24 ವಿವಿಗಳೊಂದಿಗೆ ಒಡಂಬಡಿಕೆ

ಟೆಕ್ ಮಹೀಂದ್ರಾ ಮುನ್ನಡೆಸಲಿರುವ ಜೋಶಿ: ಇನ್ಫೋಸಿಸ್​ಗೆ ರಾಜೀನಾಮೆ ನೀಡಿದ ನಂತರ ಜೋಶಿ ಟೆಕ್‌ ಮಹೀಂದ್ರಾದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮೋಹಿತ್ ಜೋಶಿ ಅವರನ್ನು ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡುವುದಾಗಿ ಐಟಿ ಕಂಪನಿ ಟೆಕ್ ಮಹೀಂದ್ರಾ ಶನಿವಾರ ತಿಳಿಸಿದೆ. ಸದ್ಯ ಮಹೀಂದ್ರ ಎಂಡಿ ಮತ್ತು ಸಿಇಒ ಆಗಿರುವ ಸಿ ಪಿ ಗುರ್ನಾನಿ ಅವರು ಡಿ19 ರಂದು ನಿವೃತ್ತರಾಗಲಿದ್ದಾರೆ. ಆ ಬಳಿಕ ಮೋಹಿತ್ ಜೋಶಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸಿಇಓ ರಾಜೀನಾಮೆ: ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯಿಂದ ರವಿಕುಮಾರ್ ಎಸ್ ಹೊರಹೋಗಿದ್ದರು. ಈ ಬೆನ್ನಲ್ಲೇ ಅಧ್ಯಕ್ಷ ಮೋಹಿತ್ ಜೋಶಿ ಅವರು ಕೂಡ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಅಶಿಸ್ತು ಹೆಚ್ಚು: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಬೇಸರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.