ಬೆಂಗಳೂರು : ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನಲ್ಲಿ ಪ್ರತಿದಿನ ದುಡಿಯುವ 6000ಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರಿಗೆ ಇನ್ಫೋಸಿಸ್ ಸಂಸ್ಥೆ 2000 ದಿನಸಿ ಪದಾರ್ಥಗಳ ಕಿಟ್ ನೀಡಿದೆ.
ನಿತ್ಯ ಟಿವಿ ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲಸಗಾರರು ಯಾವುದೇ ಕೆಲಸವಿಲ್ಲದೆ ಖಾಲಿ ಕುಳಿತಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಪರಿತಪಿಸುತ್ತಿದ್ದಾರೆ. ಇಂತಹ ದಿನಗೂಲಿ ನೌಕರರಿಗೆ ದಿನಸಿ ಪದಾರ್ಥಗಳನ್ನು ಪೂರೈಸುವಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪಾತ್ರ ಮಹತ್ವದ್ದಾಗಿದೆ. ಅಸೋಸಿಯೇಷನ್ ಮನವಿ ಮೇರೆಗೆ ಇನ್ಫೋಸಿಸ್ ಸಂಸ್ಥೆ 2000 ದಿನಸಿ ಪದಾರ್ಥಗಳ ಕಿಟ್ ನೀಡಲು ಮುಂದಾಗಿದೆ.
ಇನ್ಫೋಸಿಸ್ನ ಪ್ರಶಾಂತ್ ಹೆಗಡೆ ಹಾಗೂ ರಮೇಶ್ ರೆಡ್ಡಿ ಇನ್ಫೋಸಿಸ್ ಫೌಂಡೇಶನ್ ಪರ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಅವರಿಗೆ 2000 ದಿನಸಿ ಪದಾರ್ಥಗಳ ಕಿಟ್ ಹಸ್ತಾಂತರಿಸಿದರು. ಈ ಮೂಲಕ ಆರ್ಥಿಕವಾಗಿ ತೀರಾ ಹಿಂದುಳಿದಿರುವ 2000 ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ.