ETV Bharat / state

ಆತ್ಮನಿರ್ಭರ ಭಾರತದ ಸಂಕಲ್ಪ ಈಡೇರಿಸುವ ಬಜೆಟ್ : ಕೈಗಾರಿಕೋದ್ಯಮಿ ಗಿರೀಶ್ ಲಿಂಗಣ್ಣ - ಕೇಂದ್ರ ಬಜೆಟ್​ 2022

ಆರ್ಥಿಕ ಸ್ಥಿರತೆಯನ್ನು ಒದಗಿಸುವ ಮೂಲಕ ಎಂಎಸ್ಎಂಇಗಳಿಗೆ ನೆರವಾಗಲು, 2022ರ ಬಜೆಟ್ ಇಸಿಎಲ್‌ಜಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಎಂಎಸ್ಎಂಇ ವಲಯಕ್ಕೆ ಸಾಲ ಸೌಲಭ್ಯ ನೀಡಲು ಇದು ವರದಾನವಾಗಿದೆ. ಇದೇ ಹೊತ್ತಿಗೆ ಸಿಜಿಟಿಎಲ್ಎಂಇಯ ಪುನರುಜ್ಜೀವನವು ಈ ವಲಯಗಳಿಗೆ ಸಾಲ ಸೌಲಭ್ಯಗಳನ್ನು ವಿಸ್ತರಿಸಲು ಇನ್ನಷ್ಟು ಪ್ರೋತ್ಸಾಹ ಒದಗಿಸಲಿದೆ..

industrialist-girish-linganna-reaction-on-central-budget
ಕೈಗಾರಿಕೋದ್ಯಮಿ ಗಿರೀಶ್ ಲಿಂಗಣ್ಣ
author img

By

Published : Feb 2, 2022, 7:38 PM IST

ಬೆಂಗಳೂರು : ಕೇಂದ್ರ ಬಜೆಟ್​​ಗೆ ವಿವಿಧ ವಲಯದ ತಜ್ಞರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೈಗಾರಿಕೋದ್ಯಮಿ ಮತ್ತು ರಕ್ಷಣಾ ವಿಷಯಗಳ ತಜ್ಞ ಗಿರೀಶ್ ಲಿಂಗಣ್ಣ, ಈ ಬಾರಿಯ ಬಜೆಟ್​​ 'ಆತ್ಮನಿರ್ಭರ ಭಾರತ' ಸಂಕಲ್ಪ ಈಡೇರಿಸುವ ನಿಟ್ಟಿನಲ್ಲಿ ತನಗಿರುವ ಗಾಂಭೀರ್ಯದ ಬಲವಾದ ಸಂದೇಶ ರವಾನಿಸಿದೆ ಎಂದಿದ್ದಾರೆ.

ರಕ್ಷಣೆಯ ದೃಷ್ಟಿಕೋನದಿಂದ ಈ ಬಜೆಟ್ ತುಂಬಾ ಆಸಕ್ತಿದಾಯಕವಾಗಿದೆ. ರಕ್ಷಣೆಗೆ ಸಂಬಂಧಿಸಿ ದೇಶೀಯ ಉದ್ಯಮಕ್ಕೆ ಬಂಡವಾಳ ಸಂಗ್ರಹಣೆಯಲ್ಲಿ ಶೇ.68ರಷ್ಟು ಮೀಸಲಿಡುವ ಮೂಲಕ ಸ್ವದೇಶೀಕರಣದ ಮೇಲೆ ಈ ಬಜೆಟ್ ದೃಷ್ಟಿ ನೆಟ್ಟಿದೆ. ಇದಕ್ಕೆ ಪೂರಕವಾಗಿ, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬಜೆಟ್ ಗಾತ್ರ ಶೇ. 58ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದು ಸರಿಯಾಗಿದೆ ಎಂದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೈಗಾರಿಕೆ, ನವೋದ್ಯಮಗಳನ್ನು ತೆರೆಯುವ ಮತ್ತು ಶೇ.25ರಷ್ಟು ಅನುದಾನವನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ)ಗೆ ಮೀಸಲಿಡುವ ಮೂಲಕ ಸರ್ಕಾರವು ‘ಆತ್ಮನಿರ್ಭರ ಭಾರತ’ದ ಸಂಕಲ್ಪ ಈಡೇರಿಸುವ ಸಲುವಾಗಿ ತನಗಿರುವ ಗಾಂಭೀರ್ಯದ ಬಲವಾದ ಸಂದೇಶವನ್ನು ರವಾನಿಸಿದೆ. ಡಿಆರ್‌ಡಿಒ ಜೊತೆಗೆ ಯೋಜನೆಗಳನ್ನು ರೂಪಿಸಲು ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡಿರುವುದು ಇದಕ್ಕೆ ಮತ್ತಷ್ಟು ಪುರಾವೆ ಒದಗಿಸಿದೆ ಎಂದು ಹೇಳಿದ್ದಾರೆ.

ಆರ್ಥಿಕ ಸ್ಥಿರತೆಯನ್ನು ಒದಗಿಸುವ ಮೂಲಕ ಎಂಎಸ್ಎಂಇಗಳಿಗೆ ನೆರವಾಗಲು, 2022ರ ಬಜೆಟ್ ಇಸಿಎಲ್‌ಜಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಎಂಎಸ್ಎಂಇ ವಲಯಕ್ಕೆ ಸಾಲ ಸೌಲಭ್ಯ ನೀಡಲು ಇದು ವರದಾನವಾಗಿದೆ. ಇದೇ ಹೊತ್ತಿಗೆ ಸಿಜಿಟಿಎಲ್ಎಂಇಯ ಪುನರುಜ್ಜೀವನವು ಈ ವಲಯಗಳಿಗೆ ಸಾಲ ಸೌಲಭ್ಯಗಳನ್ನು ವಿಸ್ತರಿಸಲು ಇನ್ನಷ್ಟು ಪ್ರೋತ್ಸಾಹ ಒದಗಿಸಲಿದೆ ಎಂದರು.

ಘೋಷಣೆಗಳು ಮತ್ತು ಹಣಕಾಸಿನ ಹಂಚಿಕೆಗಳು ಚೆನ್ನಾಗಿವೆ ಅನ್ನಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಅದರ ಅನುಷ್ಠಾನ ಹೇಗೆ ಆಗುತ್ತದೆ ಎನ್ನುವುದು ಗಮನಿಸಬೇಕಾದ ವಿಷಯ ಎಂದಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ವಕೀಲ ಸಿ ಎಂ ಪೂಣಚ್ಚ ಹೆಸರು ಶಿಫಾರಸು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.