ETV Bharat / state

ಒಲಿಂಪಿಕ್ ವಿಜೇತನ ಹಾಕಿ ಸ್ಟಿಕ್​ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಇಂಡಿಗೋ ಸಂಸ್ಥೆ - ಈಟಿವಿ ಭಾರತ ಕನ್ನಡ

ವಿಮಾನದಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಒಲಿಂಪಿಕ್​ ಕಂಚಿನ ಪದಕ ವಿಜೇತ ಶ್ರೀಜೇಶ್​ ಅವರಿಗೆ ಇಂಡಿಗೋ ಸಂಸ್ಥೆ ತಮ್ಮ ಹಾಕಿ ಸ್ಟಿಕ್​ನ್ನು ಒಯ್ಯಲು 1500 ರೂ ಹೆಚ್ಚುವರಿ ಶುಲ್ಕ ವಿಧಿಸಿದೆ. ಈ ಬಗ್ಗೆ ಶ್ರೀಜೇಶ್​ ಟ್ವಿಟರ್​​​​​​ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

indigo-charged-extra-money-for-shrijeshs-hockey-stick
ಒಲಿಂಪಿಕ್ ವಿಜೇತನ ಹಾಕಿ ಸ್ಟಿಕ್​ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಇಂಡಿಗೋ ಸಂಸ್ಥೆ
author img

By

Published : Sep 26, 2022, 4:42 PM IST

ದೇವನಹಳ್ಳಿ : ಪ್ರಯಾಣದ ಜೊತೆಯಲ್ಲಿ 41 ಇಂಚಿನ ಹಾಕಿ ಸ್ಟಿಕ್ ತೆಗೆದುಕೊಂಡು ಹೋಗಲು ಒಲಿಂಪಿಕ್ ಕಂಚಿನ ಪದಕ ವಿಜೇತನಿಗೆ ಇಂಡಿಗೋ ಸಂಸ್ಥೆ 1500 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದೆ.

ಭಾರತ ಹಾಕಿ ತಂಡದ ಗೋಲ್ ಕೀಪರ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತ ಶ್ರೀಜೇಶ್ ಪಿ ಆರ್ ಸೆಪ್ಟೆಂಬರ್ 23ರಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಪ್ರಯಾಣಿಸಬೇಕಿತ್ತು. ಅಂದು ರಾತ್ರಿ 7 ಗಂಟೆಗೆ ಇಂಡಿಗೋ ವಿಮಾನದ 6E 382 ವಿಮಾನದಲ್ಲಿ ಪ್ರಯಾಣಿಸಬೇಕಿತ್ತು.

ವಿಮಾನ ಹತ್ತುವ ಮುನ್ನ ಅವರ ಕಿಟ್ ನಲ್ಲಿ 41 ಇಂಚಿನ ಹಾಕಿ ಸ್ಟಿಕ್ ಇತ್ತು. 38 ಇಂಚಿನ ಹಾಕಿ ಸ್ಟಿಕ್ ಗೆ ಮಾತ್ರ ಅನುಮತಿ ಇದ್ದು, 3 ಇಂಚು ಹೆಚ್ಚು ಉದ್ದ ಇರುವ ಹಾಕಿ ಸ್ಟಿಕ್ ಗೆ ಹೆಚ್ಚುವರಿ 1500 ಶುಲ್ಕ ಪಾವತಿಸುವಂತೆ ಏರ್ ಲೈನ್ಸ್ ಸಿಬ್ಬಂದಿ ಹೇಳಿದ್ದಾರೆ. ಶ್ರೀಜೇಶ್ ಹೆಚ್ಚುವರಿ ಶುಲ್ಕ ಪಾವತಿಸಿ ಕೊಚ್ಚಿನ್ ಗೆ ಪ್ರಯಾಣ ಬೆಳೆಸಿದ್ದರು.

ಹೆಚ್ಚುವರಿ ಶುಲ್ಕ ತೆಗೆದುಕೊಂಡ ಏರ್ ಲೈನ್ಸ್ ಬಗ್ಗೆ ಬೇಸರಗೊಂಡ ಶ್ರೀಜೇಶ್ ತಮ್ಮ ಟ್ವಿಟರ್ ನಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. FIH ನನಗೆ 41 ಇಂಚಿನ ಹಾಕಿಸ್ಟಿಕ್‌ನೊಂದಿಗೆ ಆಡಲು ಅವಕಾಶ ನೀಡುತ್ತದೆ. ಆದರೆ, ಇಂಡಿಗೋ ವಿಮಾನಯಾನ ಸಂಸ್ಥೆ ನನಗೆ 38 ಇಂಚಿನ ಮೇಲೆ ಏನನ್ನೂ ಸಾಗಿಸಲು ಅನುಮತಿಸುವುದಿಲ್ಲ. ಏನ್ ಮಾಡೋದು? ಗೋಲ್‌ಕೀಪರ್ ಸಾಮಗ್ರಿಗಳನ್ನು ಸಾಗಿಸಲು ಹೆಚ್ಚುವರಿ ರೂ 1500 ಪಾವತಿಸಿ. ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದರು.

ಶ್ರೀಜೇಶ್ ರವರ ಟ್ವೀಟ್ ಗೆ ಸೆಲೆಬ್ರಿಟಿಗಳು ವಿಮಾನಯಾನ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಮತ್ತೆ ಕೆಲವರು ವಿಮಾನಯಾನ ಸಂಸ್ಥೆ ನಿಯಮಗಳು ಸ್ಟಾರ್ ಅಥ್ಲೀಟ್ ಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮೆಗಾ ಕುಟುಂಬದಿಂದ ಕ್ರಿಕೆಟಿಗರಿಗೆ ಭೋಜನ ಕೂಟ ಆಯೋಜನೆ.. ಫೋಟೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.